ಮೋದಿ ಸರ್ಕಾರದಿಂದ ಮೇಲ್ಜಾತಿ ವರ್ಗದವರಿಗೆ ಬಂಪರ್ ಆಫರ್

ದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಮತದಾರರನ್ನು ಸೆಳೆಯುವುದಕ್ಕೆ ಕೇಂದ್ರ ಸರ್ಕಾರ ತಯಾರಿ ನಡೆಸಿದ್ದು, ಮೋದಿ ಸರ್ಕಾರ ಮೇಲ್ಜಾತಿ ವರ್ಗದವರಿಗೆ ಬಂಪರ್ ಆಫರ್ ನೀಡಿದೆ.

ಮೇಲ್ಜಾತಿ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಎಲ್ಲ ಮೇಲ್ಜಾತಿ ವರ್ಗದವರಿಗೆ ಇದು ಅನ್ವಯವಾಗಲಿದೆ.

ಹಲವು ರಾಜ್ಯಗಳಲ್ಲಿ ಹಿಂದುಳಿದ ವರ್ಗದವರಿಗೆ ಮಾತ್ರ ಓಲೈಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಚುನಾವಣೆ ಮೇಲೆ ಇದರ ಪರಿಣಾಮ ಬೀರಿದ್ದು, ಈ ಕಾರಣಕ್ಕಾಗಿ ಮೇಲ್ವರ್ಗದ ಜನರಿಗೆ ಮೀಸಲಾತಿ ನೀಡಲಾಗಿದೆ.