ರೋಚಕ ಘಟ್ಟ ತಲುಪಿದ ಅಂತಿಮ ಟೆಸ್ಟ್​ ಪಂದ್ಯ..!

ಮೊದಲ ಇನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಗಳಿಸಿದ್ದ 622 ರನ್​ಗಳಿಗೆ ಉತ್ತರವಾಗಿ ಆಸಿಸ್​ ಪಡೆ, 300 ರನ್​ ಗಳಿಗೆ ತನ್ನ ಮೊದಲ ಇನಿಂಗ್ಸ್​ ಮುಗಿಸಿತು. ಈ ಮೂಲಕ 322 ರನ್​ಗಳ ಹಿನ್ನಡೆ ಅನುಭವಿಸಿರುವ ಕಾಂಗರೂಗಳು, ಫಾಲೋ ಆನ್​ಗೆ ಸಿಲುಕಿದ್ದಾರೆ.

3ನೇ ದಿನವಾದ ನಿನ್ನೆ ದಿನದಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡು 236 ರನ್​ ಕಲೆಹಾಕಿದ್ದ ಆಸಿಸ್​, ಇಂದು 64 ರನ್​ ಸೇರಿಸುವಷ್ಟರಲ್ಲಿ ಬಾಕಿ 4 ವಿಕೆಟ್​ ಕಳೆದುಕೊಂಡಿತು. ಮಳೆಯ ಕಾರಣ 4ನೇ ದಿನದ ಮೊದಲ ಸೆಷನ್​ ಆಟ ನಡೆಯಲಿಲ್ಲವಾದ್ರು. ನಂತರ 2ನೇ ಸೆಷನ್​ನಲ್ಲಿ ಪಂದ್ಯ ಆರಂಭವಾಯಿತು.

ಒಟ್ಟು 322 ರನ್​ ಮುನ್ನಡೆ ಪಡೆದ ಭಾರತ ಆಸಿಸ್​ ಮೇಲೆ ಫಾಲೋ ಆನ್​ ವಿಧಿಸಿದೆ. ಭಾರತದ ಪರ ಸ್ಪಿನ್ನರ್​ ಕುಲ್​ದೀಪ್​ ಯಾದವ್​ 5 ವಿಕೆಟ್​ ಪಡೆದು ಮಿಂಚಿದ್ರೆ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್​ ಶಮಿ ತಲಾ 2 ವಿಕೆಟ್​ ಮತ್ತು ಜಸ್ಪ್ರಿತ್​ ಬುಮ್ರಾ ಒಂದು ವಿಕೆಟ್​ ಪಡೆದು ಯಶಸ್ವಿ ಬೌಲರ್​ ಎನಿಸಿಕೊಂಡರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.