ಮಕ್ಕಳನ್ನ ಮಂಗಕ್ಕೆ ಹೋಲಿಸಿದ ಶಿಕ್ಷಕಿಗೆ ಸಿಕ್ತು ಈ ಶಿಕ್ಷೆ

ವಾಷಿಂಗ್ಟನ್: ಯುಎಸ್‌ನಲ್ಲಿ ಶಾಲಾ ಶಿಕ್ಷಕಿಯೊಬ್ಬಳು ಕ್ರಿಸ್‌ಮಸ್‌ ರಜೆ ಮುಗಿಸಿ ಶಾಲೆಗೆ ಹಿಂದಿರುಗಿದ್ದ ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನ ಅಪ್ಲೋಡ್ ಮಾಡಿದ್ದಕ್ಕೆ, ಶಾಲಾ ಆಡಳಿತ ಮಂಡಳಿ ಆಕೆಗೆ ಸಂಬಳದ ಜೊತೆಗೆ ಕೆಲ ದಿನಗಳ ಕಾಲ ಅಮಾನತ್ತು ಮಾಡಿದ್ದಾರೆ.

ವ್ಯಾಟ್ಸನ್ ಎಲಿಮಿನೆಟರಿ ಶಾಲೆಯ ಶಿಕ್ಷಕಿಯಾದ ಪಾಮೆಲಾ ಸ್ಮಿತ್, ಮಂಗಗಳು ಮತ್ತೆ ನನ್ನ ಮೃಗಾಲಯಕ್ಕೆ ಹಿಂದಿರುಗುತ್ತಿದೆ. ಈ ಮಂಗಗಳಿಗೆ ತರಬೇತಿ ನೀಡುವುದು ತುಂಬಾ ಕಷ್ಟವೆಂದು ವಿದ್ಯಾರ್ಥಿಗಳನ್ನ ಮಂಗಗಳಿಗೆ ಹೋಲಿಸಿದ್ದಾಳೆ.

ಈ ಕಾರಣಕ್ಕಾಗಿ ವಿದ್ಯಾರ್ಥಿಗಳ ಪೋಷಕರು ಮತ್ತು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕಾರಣಕ್ಕಾಗಿ ಶಿಕ್ಷಕಿ ಪೋಸ್ಟ್ ಡಿಲೀಟ್ ಮಾಡಿದ್ದಾಳೆ. ಆದರೆ ಈಕೆಗೆ ಶಾಲಾ ಆಡಳಿತ ಮಂಡಳಿ, ಸಂಬಳದ ಜೊತೆಗೆ ಕೆಲ ದಿನಗಳ ಕಾಲ ಅಮಾನತ್ತು ಮಾಡಿದ್ದಾರೆ.