ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದ ಬೆಂಗಳೂರು ಬುಲ್ಸ್..!

ಬೆಂಗಳೂರು ಬುಲ್ಸ್​​ ತಂಡ ಚೊಚ್ಚಲ ಪ್ರೊ ಕಬಡ್ಡಿ ಲೀಗ್‌ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಮುಂಬೈನ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಎದುರಾಳಿ ಗುಜರಾತ್ ಫಾರ್ಚೂನ್​​​ಜಯಂಟ್ಸ್ ಎದುರು 38-33 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದ ಬುಲ್ಸ್,​ ಆರನೇ ಆವೃತ್ತಿಯ ಫೈನಲ್ ಪಂದ್ಯದ ಆರಂಭದಲ್ಲಿ ಆಘಾತ ಎದುರಿಸಿದ ಬೆಂಗಳೂರು, ಅಂತಿಮವಾಗಿ ಎದುರಾಳಿ ವಿರುದ್ಧ 5 ಪಾಯಿಂಟ್‌ಗಳ ರೋಚಕ ಗೆಲುವು ದಾಖಲಿಸಿತು.

ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 22 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿಯಾದರು.

ಶ್ರೇಷ್ಠ ರೈಡರ್​ ಆಗಿ ಪವನ್​ ಶೆರಾವತ್​ ಆಯ್ಕೆಯಾದ್ರೆ, ಶ್ರೇಷ್ಠ ಡಿಫೆಂಡರ್​​ ಆಗಿ ಗುಜರಾತ್​​ ತಂಡದ ಸುನೀಲ್​ ಆಯ್ಕೆಯಾದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.