ಆ ನಟೋರಿಯಸ್ ಗ್ರಾಮಕ್ಕೆ ಎಂಟ್ರಿ ಕೊಟ್ಟ 150 ಪೊಲೀಸರು ಮಾಡಿದ್ದೇನು ಗೊತ್ತಾ..?

ಬೆಂಗಳೂರು: ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಟೀಂ ನಟೋರಿಯಸ್ ಗ್ಯಾಂಗನ್ನ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಪೊಲೀಸರಿಗೆ ಗುಂಡಿ ತೋಡೋ ಗ್ಯಾಂಗನ್ನ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಟೀಂ ಹೆಡೆಮುರಿ ಕಟ್ಟಿದ್ದಾರೆ.

ಹೊಸಕೋಟೆಯ ಕಟ್ಟಿಗೆಪಾಳ್ಯ ಗ್ರಾಮಕ್ಕೆ ಬರೋಬ್ಬರಿ 1150 ಜನ ಪೊಲೀಸರು ಎಂಟ್ರಿ ಕೊಟ್ಟಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಷ್ಟು ಡೇಂಜರ್ ಗೊತ್ತಾ ಈ ಟೀಂ..?
ಸದ್ಯ ಅರೆಸ್ಟ್ ಆದ ನಟೋರಿಯಸ್ ಗ್ಯಾಂಗ್ ಗಂಧದ ಮರಗಳ್ಳತನ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಆಗಿತ್ತು. ಇನ್ನು ಕಟ್ಟಿಗೆ ಪಾಳ್ಯಕ್ಕೆ ಐದು ಹತ್ತು ಜನ ಪೊಲೀಸರು ನುಗ್ಗಿದ್ರೆ, ಅವರು ವಾಪಸ್ ಬರೋದು ಡೌಟ್ ಆಗಿತ್ತು.ಅಷ್ಟು ವಿಕೃತವಾಗಿತ್ತು ಈ ನಟೋರಿಯಸ್ ಗ್ಯಾಂಗ್.

ಈ ಕಾರಣಕ್ಕಾಗಿ 3ಕೆಎಸ್‌ಆರ್‌ಪಿ, 80 ಪೊಲೀಸ್ ಸಿಬ್ಬಂದಿಗಳ ಜೊತೆ ಕಟ್ಟಿಗೆ ಪಾಳ್ಯಕ್ಕೆ ನುಗ್ಗಿದ ಡಿಸಿಪಿ ದೇವರಾಜ್, ಡಿಸಿಪಿ ಅಬ್ದುಲ್ ಅಹಮದ್ ಟೀಂ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಸೈಯದ್ ರಿಯಾಜ್ ಮತ್ತು ಸೈಯದ್ ಶೋರ್ ಅಲಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರು 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.