ಶಬರಿಮಲೆ ಪ್ರವೇಶಿಸಿದ ಮಹಿಳೆಯರು ತಂಗಿದ್ದು ಕರ್ನಾಟಕದಲ್ಲಿ..!

ಕೊಡಗು: ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ವಿರಾಜಪೇಟೆಯ ದೊಡ್ಡಟ್ಟಿಚೌಕಿಯ ಸೀತಾಲಕ್ಷ್ಮಿ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಡಿಸೆಂಬರ್ 29ರಂದು ಮಧ್ಯಾಹ್ನ 2.12ಕ್ಕೆ ಕ್ಯಾಲಿಕಟ್‌ನ ನೀಲಾಲ್ ಎಡಕುಲ ಗ್ರಾಮದ ಎ.ಬಿಂದು ಮತ್ತು ಕನಕದುರ್ಗಾ ಇಬ್ಬರು, ವಿರಾಜಪೇಟೆಯ ಸೀತಾಲಕ್ಷ್ಮಿ ಲಾಡ್ಜ್‌ನಲ್ಲಿ ತಂಗಿದ್ದು, ತಮ್ಮ ಹೆಸರು ಹೇಳಿ ರೂಂ ಪಡೆದಿದ್ದು, ರೂಂ ನಂ.14ರಲ್ಲಿ ಉಳಿದುಕೊಂಡಿದ್ದು, ಕಡತದಲ್ಲಿ ಪ್ರವಾಸಕ್ಕೆಂದು ನಮೂದು ಮಾಡಿದ್ದಾರೆ.

ಇನ್ನು ಲಾಡ್ಜ್‌ ಸಿಬ್ಬಂದಿಗಳಿಂದ ಯಾವುದೇ ತರಹದ ಸಹಾಯವನ್ನು ಪಡೆಯದೇ ತಾವೇ ಸಾಮಾನ್ಯರಂತೆ ಹೊರಗೆ ತೆರಳಿ ಪಕ್ಕದ ಶಬರಿ ಬೇಕರಿಯಲ್ಲಿ ಕಾಫಿ ಸೇವಿಸಿದ್ದಾರೆ. ಅಲ್ಲದೇ ರೂಂ ಬಾಡಿಗೆ ಪಡೆಯಲು ಆಧಾರ್ ಕಾರ್ಡ್ ಸಹ ತೋರಿಸಿದ್ದಾರೆ.

ಇದೀಗ ಎಲ್ಲರಲ್ಲಿ ಮೂಡಿರುವ ಪ್ರಶ್ನೆಯೆಂದರೆ 2 ದಿನಗಳ ಕಾಲ ಆ ಮಹಿಳೆಯರು ವಿರಾಜಪೇಟೆಯಲ್ಲಿ ತಂಗಲು ಕಾರಣವೇನು..?..ಅಲ್ಲದೇ ಅಯ್ಯಪ್ಪನ ದರ್ಶನ ಮಾಡುವವರು ಮಾಲೆ ಧರಿಸುವರು.ಆದರೆ ಈ ಮಹಿಳೆಯರು ಯಾವುದೇ ಮಾಲೆ ಧರಿಸಲಿಲ್ಲ. ಆದರೆ ದೇಗುಲ ಪ್ರವೇಶದ ವೇಳೆ ಈ ಮಹಿಳೆಯರ ಮೇಲೆ ಮಾಲೆ ಇತ್ತು.

ಇನ್ನು ಈ ಬಗ್ಗೆ ಲಾಡ್ಜ್ ಮಾಲೀಕ ಹರಿಹರನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ರೂಮ್‌ನಲ್ಲಿದ್ದಾಗ ವೃತಾಚರಣೆ ಮಾಡದೇ ಸಾಮಾನ್ಯ ಮಹಿಳೆಯರಂತೆ ರಾಜಾರೋಷವಾಗಿ ಓಡಾಡುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಮಲಯಾಳಂ ಪತ್ರಿಕೆಯಲ್ಲಿ ಅವರ ಭಾವಚಿತ್ರ ನೋಡಿದಾಗ ಇವರು ನಮ್ಮಲ್ಲಿ ತಂಗಿದ್ದರು ಎಂದು ಗೊತ್ತಾಯಿತು ಎಂದಿದ್ದಾರೆ.

ಈ ಬಗ್ಗೆ ಸಿಸಿಟಿವಿ ಫೂಟೇಜ್ ಕೂಡ ಲಭ್ಯವಾಗಿದ್ದು, ಶಬರಿಮಲೆಗೆ ಪ್ರವೇಶಿಸಲು ರಾಜ್ಯದಲ್ಲೇ ಪ್ಲಾನ್ ನಡೆದಿತ್ತು ಎಂಬ ಸತ್ಯ ಬಹಿರಂಗವಾಗಿದೆ.