ಉತ್ತಮ ಮೊತ್ತದತ್ತ ಟೀಮ್ ಇಂಡಿಯಾ

ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ದಿನ ಟೀಮ್ ಇಂಡಿಯಾ ಉತ್ತಮ ಮೊತ್ತ ಕಲೆಹಾಕಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭದಲ್ಲೇ 9 ರನ್​ಗಳಿಸಿದ್ದ ಕೆ.ಎಲ್​ ರಾಹುಲ್ ವಿಕಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಎರಡನೇ ವಿಕೆಟ್​ಗೆ ಜೊತೆಯಾದ ಮಾಯಂಕ್ ಅಗರ್​ವಾಲ್ ಹಾಗು ಚೇತೇಶ್ವರ್ ಪೂಜಾರಾ 116ರನ್​ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಈ ನಡುವೆ ಮಾಯಂಕ್ 77 ರನ್​ಗಳಿಸಿ ಔಟಾದ್ರೆ, ನಾಯಕ ವಿರಾಟ್ ಕೊಹ್ಲಿ 23 ರನ್, ಅಜಿಂಕ್ಯಾ ರಹಾನೆ 18 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಆರಂಭದಿಂದಲೂ ತಾಳ್ಮೆ ಹಾಗು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ್ ಪೂಜಾರಾ, ಕಾಂಗರೂ ಬೌಲರ್​ಗಳ ಬೆವರಿಳಿಸಿದ್ರು. ಅಷ್ಟೇ ಅಲ್ಲದೇ ಟೆಸ್ಟ್​ ಕ್ರಿಕೆಟ್​ನಲ್ಲಿ 18ನೇ ಶತಕ ಸಿಡಿಸಿದ್ರು. ಮತ್ತೊಂದೆಡೆ ಪೂಜಾರಾಗೆ ಉತ್ತಮ ಸಾಥ್ ನೀಡಿದ ಹನುಮ ವಿಹಾರಿ, ಅರ್ಧಶತಕ ದಾಖಲಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಅಂತಿಮವಾಗಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್​ ಕಳೆದುಕೊಂಡು 304 ರನ್​ಗಳಿಸಿತು. ಚೇತೇಶ್ವರ್ ಪೂಜಾರಾ ಅಜೇಯ 130 ರನ್​ಗಳಿಸಿದ್ರೆ, ಹನುಮ ವಿಹಾರಿ 39 ರನ್ ಎರಡನೇ ದಿನದಾಟದಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸಿಸ್ ಪರ ವೇಗಿ ಜೋಷ್ ಹೆಜಲ್​ವುಡ್ 2 ವಿಕಟ್ ಪಡೆದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.