ಮನೆಯಲ್ಲೇ ಕೂತು ಖರೀದಿಸಬಹುದು ಪೆಟ್ರೋಲ್, ಡಿಸೇಲ್

ಆನ್‌ಲೈನ್ ಶಾಪಿಂಗ್, ಹೋಮ್ ಡೆಲಿವರಿಯಿಂದ ಜನಗಳಿಗೆ ಎಷ್ಟು ಲಾಭವೋ ಅಷ್ಟೇ ನಷ್ಟ. ಈಗಿನ ಕಾಲದಲ್ಲಿ ಸಣ್ಣ ಸೂಜಿಯಿಂದ ಹಿಡಿದು ದೊಡ್ಡ ಕಾರ್‌ವರೆಗೂ ಮನೆಯಲ್ಲೇ ಕೂತು ಖರೀದಿ ಮಾಡಬಹುದು. ಅಷ್ಟು ಫಾಸ್ಟಾಗಿದೆ ಸಾಮಾಜಿಕ ಜಾಲತಾಣ.

ಇದೀಗ ನೀವು ಮನೆಯಲ್ಲಿ ಕುಳಿತು ಪೆಟ್ರೋಲ್ ಡಿಸೇಲ್ ಪಡೆಯಬಹುದು. ಭಾರತದ ಪ್ರತಿಷ್ಟಿತ ತೈಲಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಇದೀಗ ಆನ್‌ಲೈನ್‌ನಲ್ಲಿ ಪೆಟ್ರೋಲ್- ಡೀಸೆಲ್ ಮಾರಾಟ ಮಾಡಲು ಶುರು ಮಾಡಿದೆ.

ಕಂಪನಿಯ ಈ ಸೇವೆಯ ಹೆಸರನ್ನು ಡೋರ್‌ಸ್ಟೆಪ್ ಡೆಲಿವರಿ ಎಂದಿರಿಸಲಾಗಿದೆ. ನೀವು ಪೆಟ್ರೋಲ್-ಡಿಸೇಲನ್ನ ಮನೆಗೆ ತರಿಸಿಕೊಳ್ಳಬೇಕೆಂದಿದ್ದಲ್ಲಿ, ಸುಮಾರು 200 ಲೀ. ತೈಲವನ್ನ ಆರ್ಡರ್ ಮಾಡಬೇಕಾಗುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಹೀಗೆ ತೈಲವನ್ನ ಮಾರಾಟ ಮಾಡಲಾಗಿದ್ದು, ಇದೀಗ ಚೆನ್ನೈನಲ್ಲೂ ಆನ್‌ಲೈನ್ ಸೇವೆ ಆರಂಭಿಸಲಾಗಿದೆ. ಮನೆಯ ಬಳಿ ಪೆಟ್ರೋಲ್ ಬಂಕ್ ಇಲ್ಲದವರು ಇದರ ಲಾಭ ಪಡೆದುಕಳ್ಳಬಹುದು.