ಕೇರಳದ ಶಬರಿಮಲೈ ಪ್ರತಿಭಟನೆಗೆ ಓರ್ವ ಬಲಿ

ಕೇರಳದ ಶಬರಿಮಲೈ ದೇವಸ್ಥಾನಕ್ಕೆ ನಿನ್ನೆ ಇಬ್ಬರು ಮಹಿಳೆಯರು ನುಗ್ಗಿದ್ದು, ಇದನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಇಂದು ಮೃತಪಟ್ಟಿದ್ದಾನೆ.

ಬಿಜೆಪಿ, ಸಿಪಿಎಮ್ ಕಾರ್ಯಕರ್ತರ ಘರ್ಷಣೆ ವೇಳೆ ಹಿಂಸಾಚಾರ ನಡೆದಿದ್ದು, ಕಲ್ಲು ತೂರಾಟ ನಡೆಯುವಾಗ, ಆ ಹೊಡೆತಕ್ಕೆ ಪಂದಾಲಾಂ ಚಂದ್ರನ್ ಎಂಬಾತ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಚಂದ್ರನ್ ಇಂದು ಸಾವನ್ನಪ್ಪಿದ್ದಾನೆ.

ಇನ್ನು ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಹಿನ್ನೆಲೆ, ಬಿಜೆಪಿ ಪಕ್ಷ ಇಂದು ಕೇರಳ ಬಂದ್‌ಗೆ ಕರೆ ನೀಡಿದೆ. ಈ ಕಾರಣಕ್ಕಾಗಿ ಮಹಿಳೆಯರನ್ನು, ಅವರ ಸಂಬಂಧಿಕರಿಗೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.