ಆಲೂಗಡ್ಡೆ ಬೆಳೆದು ಬಂದಿದ್ದ 490 ರೂ. ಮೊತ್ತವನ್ನು ಮೋದಿಗೆ ಕಳುಹಿಸಿದ ರೈತ

19 ಸಾವಿರ ಕೆಜಿ ಆಲೂಗಡ್ಡೆ ಬೆಳೆದು ಅದರಲ್ಲಿ ಬಂದಿದ್ದ 490 ರೂ. ಮೊತ್ತವನ್ನು  ಪ್ರಧಾನಿ ನರೇಂದ್ರ ಮೋದಿಗೆ  ರೈತನೊಬ್ಬ ಕಳುಹಿಸಿಕೊಟ್ಟಿದ್ದಾನೆ

ರೈತ 19 ಸಾವಿರ ರೂ. ಕೆಜಿ ಬೆಳೆದಿದ್ದ. ಅದರಿಂದ ಬಂದಿದ್ದು ಕೇವಲ 490 ರೂ. ಅದಕ್ಕೆ 25 ರೂ. ಜೇಬಿನಿಂದ ಹಾಕಿ ಮನಿ ಆರ್ಡರ್ ಮೂಲಕ ಮೋದಿಗೆ ಕಳುಹಿಸಿಕೊಟ್ಟಿದ್ದಾನೆ.ಹಿಂದೆ ಇದೇ ತರಹ ಈರುಳ್ಳಿ ಬೆಳೆಗಾರ ಮಾಡಿದ್ದ. ಈಗ ಆಲೂಗಡ್ಡೆ ಬೆಳಗಾರ ಮಾಡಿದ್ದಾನೆ. ರೈತರ ಪರಿಸ್ಥಿತಿಗೆ ಇದು ತಾಜಾ ಉದಹಾರಣೆ, ಮೋದಿ ಸಾಲಮನ್ನ ಮಾಡಿ ಅಂದರೆ ಅದು ಪರಿಹಾರ ಅಲ್ಲ ಅಂತಾರೆ. ಆದರೆ ಕಾಂಗ್ರೆಸ್ ಆಡಳಿತದ ನಾಲ್ಕು ರಾಜ್ಯಗಳ ಸಾಲಮನ್ನು ಮಾಡಲಾಗಿದೆ.

19 ಸಾವಿರ ಕೆಜಿ ಅಂದರೆ ಸುಮಾರು 19 ಟನ್ ಆಲೂಗಡ್ಡೆ ಬಂಪರ್ ಬೆಳೆಯಿಂದ ಖುಷಿಯಾದ ರೈತ ಮಾರುಕಟ್ಟೆಯಲ್ಲಿ ಬಂದ ಲಾಭದಿಂದ ಆಘಾತಕ್ಕೆ ಒಳಗಾಗಿದ್ದಾನೆ. ಕೇವಲ 490 ರೂ. ಲಾಭ ಬಂದಿದ್ದರಿಂದ ತೀವ್ರ ಅಸಮಾಧಾನಗೊಂಡ ರೈತ ಆ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾನೆ.

ಹೌದು, ದೇಶದಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಇತ್ತೀಚೆಗಷ್ಟೇ ಈರುಳ್ಳಿ ಬೆಳೆದ ರೈತನೊಬ್ಬ 750 ಟನ್ ಈರುಳ್ಳಿ ಬೆಳೆದು ಗಳಿಸಿದ್ದ 1064 ರೂ. ಆದಾಯವನ್ನು ಪ್ರಧಾನಿ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದೇ ರೀತಿ ಆಲೂಗಡ್ಡೆ ಬೆಳೆಗಾರ ತನಗೆ ಬಂದ ಆದಾಯವನ್ನು ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾನೆ.ಈ ಮೂಲಕ ರೈತರು ಪರೋಕ್ಷವಾಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ದೆಹಲಿ ಸಮೀಪದ ಆಗ್ರದ ಬರೊಲಿ ಅಹಿರ್ ಬಡಾವಣೆಯ ನಗ್ಲಾ ನಾಥು ಗ್ರಾಮದ ಆಲೂಗಡ್ಡೆ ಬೆಳಗಾರನ ಹೆಸರು ಪ್ರದೀಪ್ ಕುಮಾರ್ ತನಗೆ ಬಂದ 490 ರೂ.ವನ್ನು ಪ್ರಧಾನಿಗೆ ಕಳಹಿಸಿಕೊಟ್ಟಿದ್ದಾರೆ, ಮನಿ ಆರ್ಡರ್ ಮಾಡಲು ಹೆಚ್ಚುವರಿ 25 ರೂ.ವನ್ನು ತನ್ನ ಜೇಬಿನಿಂದಲೇ ಭರ್ತಿ ಮಾಡಿದ್ದಾನೆ.
ಅತ್ಯುತ್ತಮ ಇಳುವರಿ ಪಡೆದರೂ ಅದಕ್ಕೆ ಸೂಕ್ತ ಬೆಲೆ ದೊರೆಯಲಿಲ್ಲ. ಇದು ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಷ್ಟ ಅನುಭವಿಸುತ್ತಿರುವುದರಿಂದ ಈ ರೀತಿ ಮಾಡಿದ್ದೇನೆ ಎಂದು ಪ್ರದೀಪ್ ಕುಮಾರ್ ದುಃಖ ಹಂಚಿಕೊಂಡಿದ್ದಾರೆ.

ಮೋದಿ ಸಾಲಮನ್ನ ಮಾಡಿ ಅಂದರೆ ಅದು ಪರಿಹಾರ ಅಲ್ಲ ಅಂತಾರೆ. ಆದರೆ ಕಾಂಗ್ರೆಸ್ ಆಡಳಿತದ ನಾಲ್ಕು ರಾಜ್ಯಗಳಲ್ಲಿ ಸಾಲಮನ್ನ ಮಾಡಲಾಗಿದೆ. ರೈತರು ಸಾಲಮನ್ನಾಗೆ ಆಗ್ರಹಿಸಿ ದೆಹಲಿಯಲ್ಲಿ ಹಲವಾರು ಬೃಹತ್ ಪ್ರತಿಭಟನೆಗಳನ್ನು ನಡೆಸಿದರೂ ಪ್ರಧಾನಿ ಮೋದಿ ಗಮನ ಹರಿಸಲೇ ಇಲ್ಲ. ಅಲ್ಲದೇ ಸಾಲಮನ್ನಾ ಶಾಶ್ವತ ಪರಿಹಾರ ಅಲ್ಲ. ಆರ್ಥಿಕ ಪರಿಸ್ಥಿತಿ ಒಳ್ಳೆಯದಾಗಲ್ಲ ಎನ್ನುತ್ತಿದ್ದಾರೆ.