ಮಂತ್ರಿ ಸ್ಥಾನದ ಕಿತ್ತಾಟ: ಜಾರಕಿಹೊಳಿ ಬ್ರದರ್ಸ್ ಬಾಂಧವ್ಯದಲ್ಲಿ ಒಡಕು

ಮಂತ್ರಿ ಸ್ಥಾನದ ಕಿತ್ತಾಟದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಬಾಂಧವ್ಯದಲ್ಲಿ ಒಡಕು ಮೂಡಿದ್ಯಾ ಎನ್ನುವಂತಹ ಅನುಮಾನಗಳು ಸೃಷ್ಟಿಯಾಗಿದೆ.
9 ದಿನಗಳಿಂದ ಸತೀಶ ಜಾರಕಿಹೊಳಿ ಸಂಪರ್ಕಕ್ಕೆ ಸಿಗದೆ ರಮೇಶ್ ಜಾರಕಿಹೊಳಿ ನಿಗೂಢವಾಗಿದ್ದಾರೆ, ರಮೇಶ ಜಾರಕಿಹೊಳಿ ಬೆನ್ನಿಗೆ ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ನಿಂತಿದ್ದಾರ ಎನ್ನುವ ಊಹಾಪುಹಗಳು ಹರಿದಾಡುತ್ತೀದೆ.
[youtube https://www.youtube.com/watch?v=GgJumBwKayY]
ಜಾರಕಿಹೊಳಿ ಕುಟುಂಬದಲ್ಲಿ ಸತೀಶ ಜಾರಲಿಹೊಳಿ ತಿರ್ಮಾನಗಳೇ ಅಂತಿಮ ಅಂತಿದ್ದರು, ಆದರೆ ಇದೀಗ ರಮೇಶ ಜಾರಕಿಹೊಳಿ ನಡೆ ಗಮನಿಸಿದಾಗ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಮಾತಿಗೆ ಬೆಲೆ ಇಲ್ಲ ಎನ್ನುವುದು ತಿಳಿಯುತ್ತದೆ.
ರಮೇಶ್ ರಾಜೀನಾಮೆ ನಿರ್ಧಾರ ದೋಸ್ತಿ ಸರ್ಕಾರದಲ್ಲಿ ನಿದ್ದೆಗೆಡೆಸಿದೆ. ಮಂತ್ರಿ ಆದ ಬಳಿಕ ಎರಡನೇ ಬಾರಿ ಗೋಕಾಕ್ಗೆ ಸತೀಶ ಜಾರಕಿಹೊಳಿ ಭೇಟಿನೀಡುತ್ತೀದ್ದಾರೆ. ಇನ್ನೂ ಸಹೋದರ ರಮೇಶ ಜಾರಕಿಹೊಳಿ ಸಂಪರ್ಕಿಸಲು ಸತೀಶ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.