Top

ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ : ವೀರೇಂದ್ರ ಹೆಗ್ಗಡೆ

ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ : ವೀರೇಂದ್ರ ಹೆಗ್ಗಡೆ
X

ಮಂಗಳೂರು: ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶ ವಿಚಾರವಾಗಿ ಧರ್ಮಸ್ಥಳದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಕಾರ ಸಂಪ್ರದಾಯ ರಕ್ಷಣೆ ಆಗಬೇಕು, ಯಾಕೆ ಹೋಗಬಾರದು ಅಂತ ವಿಮರ್ಶೆ ಮಾಡಬೇಕು ಅದರಲ್ಲಿ ಆಚಾರ, ವಿಚಾರ ಸಂಯಮ ಅನ್ನೋದು ಇದೆ. ಸಂಯಮ ಎಂದರೇ ಅಲ್ಲಿಗೆ ಹೋಗೋರು 48 ದಿನಗಳ ವೃತವನ್ನು ಆಚರಣೆ ಮಾಡಬೇಕು ಎಂದರು.

ಈಗಿನ ಕಾಲದಲ್ಲಿ ಬೆಳಿಗ್ಗೆ ಮಾಲೆ ಹಾಕ್ತಾರೆ, ಮಧ್ಯಾಹ್ನ ಹೋಗ್ತಾರೆ

ಬೆಳಿಗ್ಗೆ ಮಾಲೆ ಹಾಕ್ತಾರೆ, ಮಧ್ಯಾಹ್ನ ಹೋಗ್ತಾರೆ ಅಂಥದ್ರಲ್ಲಿ ಆ ನಿಯಮಗಳನ್ನು ಪಾಲಿಸೋಕೆ ಕಷ್ಟವಾಗುತ್ತೆ ಎಂದರು. ಇದೆ ವೇಳೆ ಮಾಲೆ ಹಾಕುವುದರ ಮುಖ್ಯ ಉದ್ದೇಶವೇ ಸಂಯಮ ಮತ್ತು ಬ್ರಹ್ಮಚರ್ಯಕ್ಕೆ ಪ್ರಾಧಾನ್ಯತೆ ನೀಡುವುದು ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.

ರಾಮನನ್ನು ಏಕಪತ್ನಿ ವೃತಸ್ಥ ಎನ್ನೋ ನೆಲೆಯಲ್ಲಿ ಆದರ್ಶ ಎಂದು ಹೇಳುತ್ತೇವೆ, ಅವನು ಸಂಸಾರಿಯೇ ಆದರು ಬ್ರಹ್ಮಚಾರಿ, ಏಕೆಂದರೆ ಏಕಪತ್ನಿ ವೃತಸ್ಥ ಅನ್ನೋ ಕಾರಣಕ್ಕೆ ಮಾನ್ಯತೆ ಇದೇ, ನಮ್ಮ ಕಲಿಯುಗದಲ್ಲಿ ನಮಗೆ ಅದನ್ನು ಪಾಲನೆ ಮಾಡೋಕೆ ಆಗಲ್ಲ, ಆದರೆ ಮಾಡಬೇಕು. ಹೀಗಾಗಿ ಈ ಎಲ್ಲಾ ನಿಯಮಗಳನ್ನು ಹಿರಿಯರು ಮಾಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ತಿಳಿಸಿದರು.

Next Story

RELATED STORIES