Top

ರಾಜಕೀಯ ದಲ್ಲಿ ತಂತ್ರ ಪ್ರತಿತಂತ್ರ ಇದೆ: ಈಶ್ವರ್ ಖಂಡ್ರೆ

ರಾಜಕೀಯ ದಲ್ಲಿ ತಂತ್ರ ಪ್ರತಿತಂತ್ರ ಇದೆ: ಈಶ್ವರ್ ಖಂಡ್ರೆ
X

ಬೀದರ್: ರಾಜಕೀಯ ದಲ್ಲಿ ತಂತ್ರ ಪ್ರತಿತಂತ್ರ ಇದ್ದೆ ಇದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಭಾಲ್ಕಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಡಿದ್ದುಣ್ಣೂ ಮಾರಾಯ ಎನ್ನುವಂತಹ ಪರಿಸ್ಥಿತಿಯನ್ನು ಬಿಜೆಪಿ ಮುಖಂಡರು ಅನುಭವಿಸುತ್ತಾರೆ. ಒಂದು ದಿನವು ಬಿಡದೆ ಸರ್ಕಾರ ಅಸ್ಥಿರ ಮಾಡಲು ಬಿಜೆಪಿ‌ ಮುಂದಾಗಿತ್ತು. ಇನ್ನೂ ಸರ್ಕಾರ ನಾಳೆ ಹೋಗುತ್ತೆ ನಾಡಿದ್ದು ಹೋಗುತ್ತೆ ಎಂದು ನಮ್ಮ ಶಾಸಕರಿಗೆ ಆಮೇಷ ಒಡ್ಡುತ್ತಿದ್ದಾರೆ. ಅದರ ಪರಿಣಾಮ ಬಿಜೆಪಿ ಮೇಲೆ ಬಿದ್ದರು ಆಶ್ಚರಿ ಇಲ್ಲಾ ಎಂದು ಹೇಳಿದರು.

ಬಿಜೆಪಿ ಏನೇ ಆಮಿಷ ಒಡ್ಡಿದರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ

ಇನ್ನೂ ಬಿಜೆಪಿ ಪಕ್ಷದವರು ಏನೇ ಆಮಿಷ ಒಡ್ಡಿದರು ನಮ್ಮ ಪಕ್ಷದವರು ಹೋಗೊದಕ್ಕೆ ತಯಾರಿಲ್ಲ, ಬಿಜೆಪಿ ಪಕ್ಷದವರೆ ನಮ್ಮ ಕಡೆ ಬರುವ ಒಲುವು ತೊರುತ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ಪ್ರತಿಕ್ರಿಯೇಯನ್ನು ನೀಡಿದರು.

ಬಿಜೆಪಿ ಪಕ್ಷದವರು ಪ್ರಜಾಪ್ರಭುತ್ವದ ವಿರೋಧಿಗಳು, ಅವರಿಗೆ ಪ್ರಜಾಪ್ರಭುತ್ವದ ಕಾಳಜಿ ಇಲ್ಲಾ, ದಿನಾಬೆಳಗ್ಗೆ ತೋಳ ಬರುತ್ತೆ ತೊಳ ಬರುತ್ತೆ ಎಂತಿದ್ದಾರೆ ಎಲ್ಲಿ ಬಂತು ತೋಳ..? ಎಂದು ಖಂಡ್ರೆ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದರು.

Next Story

RELATED STORIES