Top

ಹೊಸ ವರ್ಷದ ಮೊದಲ ಸಿನಿಮಾ ಫಾರ್ಚೂನರ್

ಹೊಸ ವರ್ಷದ ಮೊದಲ ಸಿನಿಮಾ ಫಾರ್ಚೂನರ್
X

2019 ಹೊಸವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲಿದೆ ನಮ್ಮ ಸ್ಯಾಂಡಲ್​ವುಡ್​. ಈ ವರ್ಷ ಮೊದಲ ಸಿನಿಮಾವಾಗಿ ಫಾರ್ಚೂನರ್​ ತೆರೆಗೆ ಬರೋಕ್ಕೆ ರೆಡಿಯಾಗಿದೆ. ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್​ಟೈನರ್​ ಸಿನಿಮಾ ಇದಾಗಿದ್ದು, ದಿಗಂತ್ ಮದುವೆ ನಂತರ ಮೊದಲ ಸಿನಿಮಾ ಕೂಡ ಇದೇ ಆಗಿದೆ.

ಹೊಸ ವರ್ಷದ ಮೊದಲ ಸಿನಿಮಾ ಫಾರ್ಚೂನರ್

ಹೊಸ ಬಾಳಿಗೆ ಕಾಲಿಟ್ಟ ದಿಗಂತ್​ಗೂ ಇದು ಸ್ಪೆಷಲ್ ಸಿನಿಮಾ

ಸದ್ಯ ಟ್ರೇಲರ್ ಮತ್ತು ಹಾಡುಗಳಿಂದ ಈಗಾಗ್ಲೇ ಸಖತ್​ ಸೌಂಡ್​ ಮಾಡ್ತಿರೋ ಸಿನಿಮಾ. ಚಿತ್ರದಲ್ಲಿ ದಿಗಂತ್ ರಿಚ್​ ಫ್ಯಾಮಿಲಿ ಹುಡುಗನಾಗಿ, ಸೋನು ಗೌಡ ಟಿಪಿಕಲ್ ಸಾಫ್ಟ್​ವೇರ್​​ ಹೆಂಡತಿಯಾಗಿ, ಮತ್ತು ಸ್ವಾತಿ ಶರ್ಮಾ ಇನೋಸೆಂಟ್ ನಾರ್ತ್​ ಕರ್ನಾಟಕ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಹೆಂಡಿರ ನಡುವೆ ಸಿಕ್ಕಿಕೊಂಡ ಗಂಡನಾಗಿ ದಿಗಂತ್ ಕಾಣಿಸಿಕೊಂಡಿದ್ದು,ಮದುವೆ ನಂತರ ಗಂಡನ ಅದೃಷ್ಟ ಬದಲಾಗುತ್ತಾ ಅನ್ನೋದೇ ಚಿತ್ರದ ಸ್ಟೋರಿಲೈನ್.

ಇನ್ನು ಫಾರ್ಚೂನರ್​ ಚಿತ್ರಕ್ಕೆ ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ಮ್ಯೂಸಿಕ್ ಮಾಡಿದ್ದು, ಈಗಾಗ್ಲೇ ಓ ದೇವಾ ಸಾಂಗ್ ಮತ್ತು ಕೈಯ್ಯ ಚಿವುಟಿ ಒಮ್ಮೆ ಹಾಡು ಸಖತ್ ವೈರಲ್ ಆಗಿದೆ. ಫಸ್ಟ್ ಟೈಮ್​ ಚಿತ್ರದಲ್ಲಿ ದಿಗಂತ್​ ಡಾನ್ಸ್​ ನಂಬರ್​ಗೆ ಹೆಜ್ಜೆ ಹಾಕಿದ್ದಾರೆ.ಇನ್ನು ಚಿತ್ರಕ್ಕೆ ಮಂಜುನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ಬೊಲೇಚ ಬ್ರದರ್ಸ್​ ಬಂಡವಾಳ ಹಾಕಿದ್ದಾರೆ.

ಫಾರ್ಚೂನರ್ ಸದ್ಯ ಸ್ಟೋರಿಲೈನ್​ ಮೂಲಕ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದು, ಇದೇ ವಾರ ಅಂದರೆ ಜನವರಿ 4 ರಂದು ತೆರೆಗೆ ಬರ್ತಿದೆ. ಸುಮಾರು 70 ಕ್ಕೂ ಥಿಯೇಟರ್​ಗಳಲ್ಲಿ ತೆರೆಗೆ ಬರ್ತಿರೋ ಫಾರ್ಚೂನರ್ ವರ್ಷದ ಮೊದಲ ಸಿನಿಮಾ ಆಗಿದ್ದು, ಸಿನಿಮಾ ಸಕ್ಸಸ್​ ಆಗಲಿ , ಮುಂದಿನ ಸಿನಿಮಾಗಳ ಸಕ್ಸಸ್​ಗೆ ನಾಂದಿ ಹಾಡ್ಲಿ ಅಂತ ನಾವು ಆಶಿಸೋಣ.

Next Story

RELATED STORIES