Top

ಮಹಿಳೆಯರ ದೇಗುಲ ಪ್ರವೇಶಕ್ಕೆ ಸರ್ಕಾರವೇ ಒದಗಿಸಿತ್ತಾ ಭದ್ರತೆ...?

ಮಹಿಳೆಯರ ದೇಗುಲ ಪ್ರವೇಶಕ್ಕೆ ಸರ್ಕಾರವೇ ಒದಗಿಸಿತ್ತಾ ಭದ್ರತೆ...?
X

ಶಬರಿಮಲೈ: ಮಹಿಳೆಯರ ಪ್ರವೇಶದಿಂದ ಮುಚ್ಚಲಾಗಿದ್ದ ಶಬರಿಮಲೈ ದೇಗುಲವನ್ನು ಶುದ್ಧೀಕರಿಸಿ ಮತ್ತೆ ತೆರೆಯಲಾಗಿದೆ. ಆದರೆ ಕೇರಳದ ಬಿಜೆಪಿ ಕಾರ್ಯಕರ್ತರು ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ನಾಳೆ ಕೇರಳ ಬಂದ್‌ಗೆ ಕರೆ ಕೊಟ್ಟಿದ್ದು, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಬಿಂದು ಮತ್ತು ಕನಕದುರ್ಗ ದೇಗುಲ ಪ್ರವೇಶಕ್ಕೆ ಸರ್ಕಾರವೇ ಭದ್ರತೆ ಒದಿಗಿಸಿತ್ತಾ ಎಂಬ ಮಾತು ಕೇಳಿಬಂದಿದೆ. ದೇಗುಲ ಪ್ರವೇಶಿಸಿದ ಮಹಿಳೆಯರು ಕಮ್ಯೂನಿಸ್ಟ್ ಪಕ್ಷದವರಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮಹಿಳೆಯರು ದೇಗುಲ ಪ್ರವೇಶಿಸಿದ್ದು ಹೇಗೆ ಗೊತ್ತಾ..?

ಮಹಿಳೆಯರು ಅಯ್ಯಪ್ಪನ ಭಕ್ತರಂತೆ ಕಪ್ಪು ಬಟ್ಟೆ ತೊಟ್ಟು, ಮಾಲೆ ಧರಿಸಿ, 18 ಮೆಟ್ಟಿಲನ್ನೇರದೇ, ಬೇರೆ ಮಾರ್ಗದಿಂದ ದೇಗುಲ ಪ್ರವೇಶ ಮಾಡಿದ್ದಾರೆ. ಸಿಬ್ಬಂದಿಗೆ ಮೀಸಲಿದ್ದ ವಿಐಪಿ ಸಾಲಿನ ಮೂಲಕ ಮಹಿಳೆಯರು ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡವರೊಬ್ಬರು ವೀಡಿಯೋ ಮಾಡಲು ಶುರುಮಾಡಿದ್ದಾರೆ.

ವೀಡಿಯೋ ಮಾಡುವುದನ್ನ ಗಮನಿಸಿದ ಮಹಿಳೆಯರು ವೇಗವಾಗಿ ದೇಗುಲ ಪ್ರವೇಶಕ್ಕೆ ಮುಂದಾಗಿದ್ದಾರೆ. ಇನ್ನು ಮಹಿಳೆಯರಿಗೆ ಸ್ಥಳೀಯ ಪೊಲೀಸರೇ ರಕ್ಷಣೆ ನೀಡಿದ್ದು, ಸಿವಿಲ್ ಡ್ರೆಸ್‌ನಲ್ಲಿ ಪೊಲೀಸರು ರಕ್ಷಣೆ ನೀಡಿದ್ದಾರೆ. ಈ ಬಗ್ಗೆ ಅಯ್ಯಪ್ಪ ಭಕ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Next Story

RELATED STORIES