Top

ಜೆಡಿಎಸ್ ರಾಜ್ಯಾದ್ಯಕ್ಷ ಸ್ಥಾನಕ್ಕೆ ಹೆಚ್​ ವಿಶ್ವನಾಥ್ ರಾಜೀನಾಮೆ ?

ಜೆಡಿಎಸ್ ರಾಜ್ಯಾದ್ಯಕ್ಷ ಸ್ಥಾನಕ್ಕೆ ಹೆಚ್​ ವಿಶ್ವನಾಥ್ ರಾಜೀನಾಮೆ ?
X

ಹೊಸ ವರ್ಷದ ಶುರುವಿನಲ್ಲೇ ಜೆಡಿಎಸ್ ರಾಜ್ಯಾದ್ಯಕ್ಷ ವಿಶ್ವನಾಥ್ ಹೊಸ ಹೇಳಿಕೆಯನ್ನು ನೀಡಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ ಹಲವು ಸರ್ಜಾರಿಗಳು ಹಾಗಿವೇ ಹೀಗಾಗಿ ರಾಜ್ಯಾದ್ಯಂತ ಸಂಘಟಿಸುವುದು ಮತ್ತು ಪ್ರವಾಸ ಕೈಗೊಳ್ಳುವುದು ಕಷ್ಟವಾಗಿದೆ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ದೇವೇಗೌಡರಿಗೆ ಕೃತಜ್ಞನಾಗಿದ್ದು, ಪಕ್ಷದೊಳಗೆ ಯಾವುದೇ ಭಿನ್ನಮತವಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ. ಇನ್ನೂ ದೇವೇಗೌಡರ ಬಳಿ ಚರ್ಚೆಮಾಡಿ ನಂತರ ರಾಜೀನಾಮೆ ನೀಡುವುದರ ಬಗ್ಗೆ ತಿಳಿಸಲಾಗುವುದು ಎಂದು ಮಾತನಾಡಿದ್ದಾರೆ.

ಆದರೆ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವಾಗ ತಮ್ಮನ್ನು ಕೇಳದಿರುವುದು ವಿಶ್ವನಾಥ್ ಅವರಿಗೆ ಬೇಸರ ತಂದಿರಬೇಕು. ಕಾಂಗ್ರೆಸ್ ನಿಂದ ಬಂದ ವಿಶ್ವನಾಥ್ ಅವರನ್ನು ಇನ್ನೂ ಕೂಡ ಪಕ್ಷದಲ್ಲಿ ಕೆಲವರು ಹೊರಗಿನವರೆಂದೇ ಪರಿಗಣಿಸುತ್ತಿದ್ದು ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ ಹೀಗಾಗಿ ಜೆಡಿಎಸ್ ಕುಟುಂಬ ರಾಜಕಾರಣದಿಂದ ಬೇಸತ್ತು ವಿಶ್ವನಾಥ್ ರಾಜೀನಾಮೆ ನೀಡಲಿದ್ದಾರೆ ಎನ್ನುವಂತಹ ಅನುಮಾನಗಳು ಮೂಡಿದೆ.

ಇನ್ನೊಂದೆಡೆ ದೆಹಲಿಯಲ್ಲಿ ನಿನ್ನೆ ಪ್ರತಿಕ್ರಿಯೆ ನೀಡಿದ ಹೆಚ್ ಡಿ ದೇವೇಗೌಡ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದಿದ್ದಾರೆ. ನಾಳೆ ಜೆಡಿಎಸ್ ಸಭೆ ನಡೆಯಲ್ಲಿದ್ದು ಅಲ್ಲಿ ಎಲ್ಲಾ ನಾಯಕರು ಹಾಜರಿರುತ್ತಾರೆ. ವಿಶ್ವನಾಥ್ ರಾಜೀನಾಮೆ ಕೇವಲ ವದಂತಿಯಷ್ಟೇ ಎನ್ನುತ್ತಾರೆ ದೇವೇಗೌಡರು.

Next Story

RELATED STORIES