Top

ಮೈತ್ರಿ ಸರ್ಕಾರ ಪತನವಾದರೆ ಹೆಚ್​ಡಿಕೆ ಅತ್ಯಂತ ಸಂತೋಷ ಪಡುತ್ತಾರೆ: ಪುಟ್ಟಸ್ವಾಮಿ

ಮೈತ್ರಿ ಸರ್ಕಾರ ಪತನವಾದರೆ ಹೆಚ್​ಡಿಕೆ ಅತ್ಯಂತ ಸಂತೋಷ ಪಡುತ್ತಾರೆ: ಪುಟ್ಟಸ್ವಾಮಿ
X

ಈ ರಾಜ್ಯ ಸರ್ಕಾರ ಪತನವಾದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿ ಯಾರು ಎಂದರೇ ಸ್ವತಹಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ, ಸರ್ಕಾರ ಆರ್ಥಿಕ‌ ಸಂಕಷ್ಟದಲ್ಲಿ ಸಿಲುಕಿದೆ. ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿದ್ದ ಬಜೆಟ್ ಅಲೋಕೇಶನ್ ಶೇ.50 ರಷ್ಟು ಕಡಿಮೆ ಮಾಡಿದ್ದಾರೆ.ಇನ್ನೂ ರೈತರ ಸಾಲ ಮನ್ನಾ ಗಿಮಿಕ್ ಆಗಿದೆ ಹೀಗಿರುವಾಗ ಸರ್ಕಾರ ಪಥನವಾದರೆ ಕುಮಾರಸ್ವಾಮಿ ಖುಷಿ ಪಡುತ್ತಾರೆ ಎಂದು ಹೇಳಿದರು.

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಬೇಕೆಂಬ ಇಚ್ಛೆಯನ್ನು ಪಕ್ಷ ಹೊಂದಿದೆ. ಜನವರಿ 16ರಿಂದ 28 ಲೋಕಸಭಾ ಕ್ಷೇತ್ರಗಳಲ್ಲಿ ಓಬಿಸಿ ಮೋರ್ಛಾದ ಎರಡು ತಂಡಗಳಿಂದ ಪ್ರವಾಸ ಕೈಗೊಂಡಿದ್ದಾರೆ. ಫೆಬ್ರವಾರಿ. 16-17 ರಂದು ಪಾಟ್ನಾ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಬಿಜೆಪಿ ಓಬಿಸಿ ಸಮ್ಮೇಳನ ನಡೆಯಲಿದೆ. ಇನ್ನೂ ಫೆಬ್ರವರಿ. 27ರಂದು ಓಬಿಸಿ ಮೋರ್ಛಾದಿಂದ ಯಡಿಯೂರಪ್ಪ ಹುಟ್ಟುಹಬ್ಬ ದೊಡ್ಡ ಪ್ರಮಾಣದಲ್ಲಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಪುಟ್ಟಸ್ವಾಮಿ ಹೇಳಿದರು.

Next Story

RELATED STORIES