Top

ಹನಿಟ್ರ್ಯಾಪ್‌ಗಿಳಿದ ಸಿರಿಯಲ್ ನಟಿ: ಖತರ್ನಾಕ್ ಗ್ಯಾಂಗ್ ಅರೆಸ್ಟ್

ಹನಿಟ್ರ್ಯಾಪ್‌ಗಿಳಿದ ಸಿರಿಯಲ್ ನಟಿ: ಖತರ್ನಾಕ್ ಗ್ಯಾಂಗ್ ಅರೆಸ್ಟ್
X

ಹಾಸನ: ಸಣ್ಣ-ಪುಟ್ಟ ರೋಲ್‌ನಲ್ಲಿ ಸಿರಿಯಲ್, ಸಿನಿಮಾದಲ್ಲಿ ನಟಿಸುತ್ತಿದ್ದ ಮಹಿಳೆಯೊಬ್ಬಳು ಖತರ್ನಾಕ್ ಗ್ಯಾಂಗ್ ಜೊತೆ ಸೇರಿ, ಕಳೆದ ಮೂರು ವರ್ಷಗಳಿಂದ ಹನಿಟ್ರ್ಯಾಪ್ ಮಾಡುತ್ತಿದ್ದು, ಇದೀಗ ಇಡೀ ಗ್ಯಾಂಗ್‌ನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಓರ್ವ ಮಹಿಳೆ ಸೇರಿ ಐವರನ್ನು ಅರೆಸ್ಟ್ ಮಾಡಿದ್ದಾರೆ. ಅರ್ಪಿತಾ, ಪವನ್, ಕಿರಣ್, ದೊರೆ ಮತ್ತು ಹೇಮೇಶ್ ಬಂಧಿತ ಆರೋಪಿಗಳಾಗಿದ್ದು, ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು ನಂತರ ಹನಿಟ್ರ್ಯಾಪ್ ಮಾಡುತ್ತಿತ್ತು ಈ ತಂಡ.

ಅರ್ಪಿತ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ನಿರ್ವಹಿಸುತ್ತಿದ್ದು, ಫೇಸ್ ಬುಕ್ ಮುಖಾಂತರ ಅಮಾಯಕ ಯುವಕರನ್ನು ಸೆಳೆಯುತ್ತಿದ್ದ ಖದೀಮರು, ಹನಿಟ್ರ್ಯಾಪ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದರು.

ಬಂಧಿತರಿಂದ ಎರಡು ಕಾರ್, ಒಂದು ಬೈಕ್, 20 ಸಾವಿರ ರೂಪಾಯಿ ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈ ಟೀಮ್ 10 ಮಂದಿ ಯುವಕರಿಗೆ ವಂಚಿಸಿದ್ದು, ದಿಲೀಪ್ ಎಂಬುವರು ಪೊಲೀಸರಿಗೆ ದೂರು ನೀಡುವ ಮೂಲಕ ಆರೋಪಿಗಳ ಕೃತ್ಯವನ್ನ ಬಯಲಿಗೆಳೆದಿದ್ದಾರೆ.

ಇನ್ನು ಕಳೆದ ಮೂರು ವರ್ಷಗಳಿಂದ ಹನಿಟ್ರ್ಯಾಪ್ ಮಾಡುತ್ತ ಬಂದರೂ, ಯಾವ ಪೊಲೀಸ್ ಠಾಣೆಯಲ್ಲೂ ಈ ಖದೀಮರ ಬಗ್ಗೆ ದೂರು ದಾಖಲಾಗಿಲ್ಲ. ಸದ್ಯ ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Next Story

RELATED STORIES