Top

ಸಿ ಪಿ ಯೋಗೇಶ್ವರ್ ಗೆ ಶಾಕ್ ಕೊಟ್ಟ ಸಚಿವ ಡಿ ಕೆ ಶಿವಕುಮಾರ್

ಸಿ ಪಿ ಯೋಗೇಶ್ವರ್ ಗೆ ಶಾಕ್ ಕೊಟ್ಟ ಸಚಿವ ಡಿ ಕೆ ಶಿವಕುಮಾರ್
X

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಚ್ಚೆತ್ತ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಯಾರು ಬೇಕಾದರು ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಗೆ ಸೇರಬಹುದು ಎಂದು ಪತ್ರವನ್ನು ಬರೆದಿದ್ದಾರೆ.

ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಮುಖಂಡರು, ಡಿ ಕೆ ಶಿವಕುಮಾರ್ ಬರೆದಂತಹ ಪತ್ರವೊಂದನ್ನು ರಿವೀಲ್ ಮಾಡಿದ್ದಾರೆ.

"ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ"

ಚನ್ನಪಟ್ಟಣದಲ್ಲಿ ಇರುವಂತಹ ಬಿಜೆಪಿ ಕಾರ್ಯಕರ್ತರು, ಮುಖಂಡರು ನಮ್ಮ ಪಕ್ಷಕ್ಕೆ ಬಂದು ಸೇರಿಕೊಳ್ಳಬಹುದು ಎಂದು ಪರೋಕ್ಷವಾಗಿಯೇ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್​ಗೆ ಪತ್ರದ ಮೂಲಕ ಡಿ.ಕೆ ಶಿವಕುಮಾರ್ ಆಹ್ವಾನವನ್ನು ನೀಡಿದ್ದಾರೆ ಎನ್ನಲಾಗುತ್ತೀದೆ.

ನಂತರ ಸಭೆಯಲ್ಲಿ ಮಾತನಾಡಿದ ಚನ್ನಪಟ್ಟಣ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಎ.ಸಿ. ವೀರೇಗೌಡ ಈಗಾಗಲೇ ಚನ್ನಪಟ್ಟಣದ ಕೆಲ ಬಿಜೆಪಿ ಮುಖಂಡರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ತೇವೆ. ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ, ಹೈಕಮಾಂಡ್ ಒಪ್ಪಿದರೆ ನಾವು ಯೋಗೇಶ್ವರ್ ಗೆ ಸ್ವಾಗತ ಕೋರುತ್ತೇವೆ ಎಂದು ತಿಳಿಸಿದರು.

Next Story

RELATED STORIES