Top

ಮಹಿಳಾ ಭಕ್ತರ ಪರ ಚಂಪಾ ಬ್ಯಾಟಿಂಗ್, ಕೇರಳ ಸಿಎಂಗೆ ಅಭಿನಂದನೆ ಸಲ್ಲಿಕೆ

ಮಹಿಳಾ ಭಕ್ತರ ಪರ ಚಂಪಾ ಬ್ಯಾಟಿಂಗ್, ಕೇರಳ ಸಿಎಂಗೆ ಅಭಿನಂದನೆ ಸಲ್ಲಿಕೆ
X

ಧಾರವಾಡ: ಮಹಿಳೆಯರು ಶಬರಿಮಲೈ ಪ್ರವೇಶ ಮಾಡಿದ್ದರ ಬಗ್ಗೆ ಹಿರಿಯ ಸಾಹಿತಿ ಚಂಪಾ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂಕೋರ್ಟ್ ಆದೇಶ ಪಾಲನೆಯಾಗಿದೆ ಎಂದರಲ್ಲದೇ, ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಚಂಪಾ, ಶಬರಿಮಲೆ ಅಯ್ಯಪ್ಪ ಸ್ವಾಮಿ ಜಗತ್ಪ್ರಸಿದ್ಧ ದೇವಸ್ಥಾನ. ದೇವಸ್ಥಾನಕ್ಕೆ ಒಂದು ನಿರ್ದಿಷ್ಟ ಮಹಿಳೆಯರಿಗೆ ಅಲ್ಲಿ ಪ್ರತಿಬಂಧ ಇರೋದು ಒಂದು ರೀತಿಯ ಸಂಪ್ರದಾಯ. ಅದನ್ನು ಪ್ರಶ್ನೆ ಮಾಡಿ ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಬಹಳ ಸರಿಯಾದ ನಿರ್ಣಯ ಕೊಟ್ಟಿದೆ. ಆದರೆ ಅದನ್ನು ಅಲ್ಲಿಯ ಕೆಲವು ಶಕ್ತಿಗಳು ವಿರೋಧ ಮಾಡಿದರು. ಅಲ್ಲದೇ ಅದು ವ್ಯಾಪಕವಾಗಿ ಹರಡಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಬೃಹತ್ ಮಾನವ ಸರಪಳಿ ಮೂಲಕ ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶ ಮಾಡಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಆಗಿದೆ ಎಂದಿದ್ದಾರೆ.

ಅಲ್ಲದೇ, ಇನ್ನು ಬಹಳ ಸುಲಭವಾಗಿ ಎಲ್ಲ ನಡೆಯುತ್ತದೆ. ಅಸಮಾಧಾನ ಭಿನ್ನಮತ ವಿರೋಧ ಪ್ರಜಾಸತ್ತಾತ್ಮಕ್ತಿಯಲ್ಲಿ ಮಾತ್ರ ಸಾಧ್ಯ. ವೈಚಾರಿಕ ಸಂಘರ್ಷದ ಮೂಲಕ ಸತ್ಯ, ನ್ಯಾಯದ ಬಗ್ಗೆ ವಿಚಾರ ಮಾಡಲು ಸಾಧ್ಯ. ಇಂದು ದೊಡ್ಡ ವಿವಾದ ತಾರ್ಕಿಕ ಅಂತ್ಯ ಕಂಡಿದೆ ಎಂದಿದ್ದಾರಲ್ಲದೇ, ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಚಂಪಾ ಅಭಿನಂದನೆ ಸಲ್ಲಿಸಿದ್ದಾರೆ.

Next Story

RELATED STORIES