ಶಬರಿಮಲೆಗೆ ಪ್ರವೇಶಿಸಿದ ಮಹಿಳಾ ಭಕ್ತರು: ದೇಶದೆಲ್ಲೆಡೆ ಭಾರೀ ಆಕ್ರೋಶ

X
TV5 Kannada2 Jan 2019 4:50 AM GMT
ಕೇರಳ: ಮೊದಲ ಬಾರಿ 40 ವರ್ಷದ ಮಹಿಳೆಯರು ಶಬರಿಮಲೈ ಅಯ್ಯಪ್ಪನ ದರ್ಶನ ಪಡೆಯುವ ಮೂಲಕ 800 ವರ್ಷಗಳ ಸಂಪ್ರದಾಯ ಮೊಟಕುಗೊಳಿಸಿ, ಇತಿಹಾಸ ಸೃಷ್ಟಿಸಿದ್ದಾರೆ.
ಈ ಮುಂಚೆ 50 ವರ್ಷ ವಯಸ್ಸಿಗೂ ಕೆಳಪಟ್ಟ ಹೆಣ್ಣು ಮಕ್ಕಳು ಅಯ್ಯಪ್ಪನ ದೇಗುಲ ಪ್ರವೇಶಿಸಲು ನಿರ್ಬಂಧ ಹೇರಲಾಗಿತ್ತು. ಆದರೆ ಕೆಲ ತಿಂಗಳ ಹಿಂದೆ ಸುಪ್ರೀಂಕೋರ್ಟ್, ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದು, ದೇಗುಲ ಪ್ರವೇಶಕ್ಕೆ ಮಹಿಳೆಯರು ಹರಸಾಹಸ ಪಟ್ಟಿದ್ದರು. ಸುಪ್ರೀಂ ಒಪ್ಪಿಗೆಯ ನಂತರವೂ ಮಹಿಳೆಯರ ಪ್ರವೇಶ ಅಸಾಧ್ಯವಾಗಿತ್ತು. ಗಲಾಟೆ, ಗೊಂದಲ, ಲಾಠಿ ಚಾರ್ಜ್ ನಡೆದು ಮಹಿಳೆಯರನ್ನು ದೇಗುಲದಿಂದ ದೂರವಿರಿಸಲಾಗಿತ್ತು.
ಆದರೆ ಬಿಂದು, ಕನಕ ದುರ್ಗಾ ಎಂಬ ಮಹಿಳೆಯರು ಮೆಟ್ಟಿಲೇರದೇ, ಇನ್ನೊಂದು ಬಾಗಿಲಿನಿಂದ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಈ ಬಗ್ಗೆ ಕೇರಳ ಸರ್ಕಾರ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಈ ಕಾರಣಕ್ಕೆ ಅಯ್ಯಪ್ಪನ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇರಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.
Next Story