Top

ಚುನಾವಣೆಯಲ್ಲಿ ರೇಡಿಮೇಡ್ ಸಂಭಾಷಣೆ ಇರುವುದಿಲ್ಲ ಎಚ್ಚರ: ಸುರೇಶ್‌ ಕುಮಾರ್‌

ಚುನಾವಣೆಯಲ್ಲಿ ರೇಡಿಮೇಡ್ ಸಂಭಾಷಣೆ ಇರುವುದಿಲ್ಲ ಎಚ್ಚರ: ಸುರೇಶ್‌ ಕುಮಾರ್‌
X

ಲೋಕಸಭಾ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವ ಪ್ರಕಾಶ್ ರೈ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಿವಿ ಮಾತು ಹೇಳಿದ್ದಾರೆ.

ಖಳನಟವಾಗಿ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿರುವ ಪ್ರಕಾಶ್ ರೈ ಅವರು ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರೈ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಟ್ವಿಟ್ವರ್‌ ಮೂಲಕ ಮಾಹಿತಿ ಹಂಚಿಕೊಂಡಿದರು.

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸತು ಆರಂಭ.ಹೆಚ್ಚಿನ ಜವಾಬ್ದಾರಿ. ನಿಮ್ಮೆಲ್ಲರ ಸಹಕಾರದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಶೀಘ್ರದಲ್ಲೇ ಎಲ್ಲ ಮಾಹಿತಿ ತಿಳಿಸುತ್ತೇನೆ. ಈ ಬಾರಿ ಜನತಾ ಸರ್ಕಾರ. ಸಂಸತ್‌ನಲ್ಲಿಯೂ ಜಸ್ಟ್ ಆಸ್ಕಿಂಗ್ ಶುರುವಾಗಲಿದೆ. ಅಂತ ಬರೆದುಕೊಂಡಿದ್ದಾರೆ. ಇನ್ನೂ ಎಲ್ಲಿಂದ ಸ್ಪರ್ಧಿಸುತ್ತೇನೆಂದು ಬಹಿರಂಗಪಡಿಸಿಲ್ಲ.

ತೆಲಂಗಾಣದಲ್ಲಿ ಒಂದಷ್ಟು ಹಳ್ಳಿಗಳು, ತಮಿಳುನಾಡಿನಲ್ಲಿಯೂ ಒಂದಷ್ಟು ಗ್ರಾಮಗಳು, ಹಾಗೆಯೇ ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ಶಾಲೆ ದತ್ತು ತೆಗೆದುಕೊಂಡಿರುವ ಅವರು, ಎಲ್ಲಿಂದ ಸ್ಪರ್ಧಿಸುತ್ತಾರೆಂಬುದು ಮಾತ್ರ ಕುತೂಹಲಕರ ಸಂಗತಿ. ದಕ್ಷಿಣ ಕನ್ನಡ ಜಿಲ್ಲೆಯ ಅಥವಾ ಬೆಂಗಳೂರಿನ ಒಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.

ಇನ್ನೂ ಬಿಜೆಪಿ ವಿರೋಧಿ ನಿಲವು ಹೊಂದಿರುವ ಪ್ರಕಾಶ್ ರೈ ನಿರ್ಧಾರಕ್ಕೆ ಬಿಜೆಪಿಯ ಸುರೇಶ್‌ ಕುಮಾರ್‌ ಟಾಂಗ್‌ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ರಿ ಟೇಕ್, ಎಡಿಟಿಂಗ್, ರೆಡಿಮೇಡ್ ಸಂಭಾಷಣೆ ಇರೋದಿಲ್ಲ ಎಚ್ಚರ ಎಂದು ಟ್ವೀಟ್ ಮಾಡಿದ್ದಾರೆ.

Next Story

RELATED STORIES