Top

ಪ್ರಧಾನಿ ಮೋದಿಯನ್ನು ಚೋರ್ ಎಂದು ಟ್ವೀಟ್ ಮಾಡಿದ ರಮ್ಯಾ

ಪ್ರಧಾನಿ ಮೋದಿಯನ್ನು ಚೋರ್ ಎಂದು ಟ್ವೀಟ್ ಮಾಡಿದ ರಮ್ಯಾ
X

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಗಾಗ ಟ್ವಿಟರ್ ನಲ್ಲಿ ಟಾಂಗ್ ಕೊಡುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಈಗ ಹೊಸ ವರ್ಷದ ದಿನದಂದೇ ಪ್ರಧಾನಿ ನರೇಂದ್ರ ಮೋದಿಯನ್ನು ಚೋರ್ ಎಂದು ಟ್ವಿಟರ್ ಮೂಲಕ ಟೀಕಿಸಿದ್ದಾರೆ.

ರಫೇಲ್ ವ್ಯವಹಾರದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರು ಸಹ ಮಾಜಿ ಸಂಸದೆ ರಮ್ಯಾ ರಫೇಲ್ ಹಗರಣ ಕುರಿತು ಪ್ರಸ್ತಾಪಿಸುವುದರ ಜೊತೆಗೆ ಟ್ವಿಟರ್ ನಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯನ್ನು ಅವಹೇಳನ ಮಾಡುವ ಮೂಲಕ ರಮ್ಯಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮೋದಿಯನ್ನು ಕಳ್ಳ ಎಂದು ಟ್ವಿಟ್ ಮಾಡಿದ್ದಾರೆ.

Next Story

RELATED STORIES