ಮೆಲ್ಬಾರ್ನ್​ನಲ್ಲಿ ಟೀಂ ಇಂಡಿಯಾಕ್ಕೆ ಐತಿಹಾಸಿಕ ಗೆಲುವು

ಬಾಕ್ಸಿಂಗ್  ಡೇ ಟೆಸ್ಟ್  ಪಂದ್ಯದಲ್ಲಿ  ಟೀಂ ಇಂಡಿಯಾ  ಐತಿಹಾಸಿಕ  ಗೆಲುವು ದಾಖಲಿಸಿದೆ.  ಮೆಲ್ಬರ್ನ್ ಅಂಗಳದಲ್ಲಿ  37 ವರ್ಷಗಳ ನಂತರ  ಟೀಂ ಇಂಡಿಯಾ  ಸೋಲಿನ ಇತಿಹಾಸಕ್ಕೆ ಬ್ರೇಕ್  ಹಾಕಿ  ಮಹಾ ಗೆಲುವನ್ನ ಕಂಡಿದೆ. ಟೀಂ ಇಂಡಿಯಾದ  ಮಹಾ ಗೆಲುವಿಗೆ  ಇಡೀ  ವಿಶ್ವ ಕ್ರಿಕೆಟ್​  ನಿಬ್ಬೆರಗಾಗಿ   ನೋಡಿದೆ.  ಕೊಹ್ಲಿ  ಸೈನ್ಯಕ್ಕೆ  ಕ್ರಿಕೆಟ್​​  ದಿಗ್ಗಜರ  ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ವರುಣನ ಅಡ್ಡಿ ನಡುವೆಯೂ ನಿರೀಕ್ಷೆಯಂತೆ ಆತಿಥೇಯ ಅಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೆಲ್ಬೋರ್ನ್ ಅಂಗಳದಲ್ಲಿ ಮಹಾ ಗೆಲುವು ಕಂಡಿದೆ. 37 ವರ್ಷಗಳ ಬಳಿಕ ಮೆಲ್ಬೋರ್ನ್ ಅಂಗಳದಲ್ಲಿ ಐತಿಹಾಸಿಕ ಗೆಲುವು ಕಂಡಿದೆ. ಇದಲ್ಲದೇ ಭಾರತ ಟೆಸ್ಟ್​ನಲ್ಲಿ  150ನೇ ಗೆಲುವು ದಾಖಲಿಸಿದ ಸಾಧನೆ ಮಾಡಿತು.  ಈ ಸಾಧನೆ ಮಾಡಿದ ಐದನೇ ತಂಡ ಎಂಬ ಹಿರಿಮೆಗೆ  ಪಾತ್ರವಾಯಿತು.

ನಾಲ್ಕನೆ ದಿನದಾಟದ ಅಂತ್ಯಕೆ   ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 258 ರನ್‍ಗಳಿಸಿತ್ತು.  ಐದನೇ ಮತ್ತು ಅಂತಿಮ ದಿನದ ಕದಾಟದಲ್ಲಿ ಟೀಂ ಇಂಡಿಯಾಕ್ಕೆ ಗೆಲ್ಲಲು 2 ವಿಕೆಟ್ ಬೇಕಿತ್ತು. ಆದರೆ ಕೊಹ್ಲಿಯ ಪಡೆ ಗೆಲುವಿಗೆ ದಿನದಾಟದ ಅರಂಭದಲ್ಲಿ ಮಳೆ ಅಡ್ಡಿಯಾಯಿತು.ಇದರಿಂದ ಕೊಹ್ಲಿ ಪಡೆಗೆ ಆರಂಭದಲ್ಲಿ ಹಿನ್ನಡೆಯಾಯಿತು. ಪಂದ್ಯ ಡ್ರಾ ಆಗುತ್ತಾ ಎಂಬ ಆತಂಕವಿತ್ತು. ಆದರೆ ಮಧ್ಯಾಹ್ನದ  ಭೋಜನದ ವಿರಾಮದ ನಂತರ  ಮಳೆ ನಿಂತು ಟೀಂ ಇಂಡಿಯಾ ಗೆಲುವಿಗೆ ದಾರಿ ಮಾಡಿಕೊಟ್ಟಿತ್ತು.

61 ರನ್‍ಗಳಿಸಿದ್ದ ಆಲ್‍ರೌಂಡರ್ ಪ್ಯಾಟ್ ಕಮಿನ್ಸ್ 63 ರನ್‍ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಸ್ಲಿಪ್‍ನಲ್ಲಿದ್ದ ಚೇತೇಶ್ವರ ಪುಜಾರಾಗೆ ಕ್ಯಾಚ್ ನೀಡಿ ಹೊರ ನಡೆದ್ರು.ಇದಾದ ಕೆಲವೇ ಹೊತ್ತಿನಲ್ಲಿ  ಲಿಯಾನ್‍ಗೆ ಇಶಾಂತ್  ಶರ್ಮಾ ಪೆವಿಲಿಯನ್ ದಾರಿ ತೋರಿಸಿದ್ರು. ಇದೊರಂದಿಗೆ   ಕೊಹ್ಲಿ ಪಡೆ 137 ರನ್‍ಗಳ ಗೆಲುವಿನ ಸಂಭ್ರಮ ಆಚರಿಸಿದ್ರು.

ಎರಡು ಇನ್ನಿಂಗ್ಸ್​​ಗಳಲ್ಲೂ ಕರಾರರುವಕ್  ದಾಳಿ  ನಡೆಸಿದ  ಯಾರ್ಕರ್ ಸ್ಪೆಶಲಿಸ್ಟ್  ಜಸ್​ಪ್ರೀತ್ ಬುಮ್ರಾ ಎರಡೂ ಇನ್ನಿಂಗ್ಸ್​ಗಳಲ್ಲೂ 9 ವಿಕೆಟ್ ಪಡೆದು ಮಿಂಚಿದ್ರು.  ಜೊತೆಗೆ ಪಂದ್ಯ ಶ್ರೇಷ್ಠ  ಪ್ರಶಸ್ತಿಗೂ ಭಾಜನರಾದರು.