ಕಾರುಗಳ ಮುಖಾಮುಖಿ ಡಿಕ್ಕಿ, 6 ಮಂದಿ ದುರ್ಮರಣ..!

ಗದಗನ ಮುಂಡರಗಿ ರಸ್ತೆ ರಿಂಗ್ ರೋಡ್ ಬಳಿ ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಧಾರವಾಡ ನಗರದ ಹೆಬ್ಬಳ್ಳಿ ಅಗಸಿ ಮೂಲದ 6 ಜನ ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕಾಲೇಜು ಫ್ರೆಂಡ್ಸ್‌ ಎಲ್ಲಾ ಮತ್ತೊಬ್ಬ ಗೆಳೆಯನ ಮದುವೆಗೆಂದು ಹೊರಟಿದ್ರು. ಎದುರಿಗೆ ಅತಿವೇಗವಾಗಿ ಬಂದ ಐ-೨೦ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಐ-10 ಕಾರಿಗೆ ಗುದ್ದಿದೆ.ಪರಿಣಾಮವಾಗಿ ಐ-೧೦ ಕಾರ್ ಅಪ್ಪಚ್ಚಿಯಾಗಿ ಅದರಲ್ಲಿದ್ದ 6 ಜನ ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಯುವಕರೆಲ್ಲಾ ಗದಗದ ನರಸಾಪುರ ಸರ್ಕಾರಿ ಡಿಪ್ಲೊಮೋ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಇನ್ನು ಐ-20 ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಇನ್ನು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಯಾವುದೇ ತಪ್ಪು ಮಾಡದ ಯುವಕರು ತಮ್ಮ ಪಾಡಿಗೆ ತಾವು ಹೊರಟ್ರೆ,  ಐ-೨೦ ರೂಪದಲ್ಲಿ ಬಂದ ಜವರಾಯ ಯುವಕನ್ನ ಬಲಿ ಪಡೆದಿದಿದ್ದಾನೆ. ಸ್ನೇಹಿತನ ಮದುವೆ ಹಾಗೂ ಹೊಸವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿದ್ದ ಯುವಕರು ಮದುವೆಗೆಂದು ಮಸಣ ಸೇರಿರುವುದು ಮಾತ್ರ ವಿಪರ್ಯಾಸವೇ ಸರಿ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.