ಆಸ್ಟ್ರೇಲಿಯಾ ಮೇಲೆ ಸವಾರಿ ಮಾಡಿದ ಟೀಮ್​​​ ಇಂಡಿಯಾ

ಆತಿಥೇಯ ಆಸ್ಟ್ರೇಲಿಯಾ ವಿರುದ್ದ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಆಟವಾನ್ನಾಡಿದೆ. ಆಸಿಸ್​​ ಬ್ಯಾಟ್ಸ್​​ಮನ್​​ಗಳನ್ನು ಕಾಡಿದ ವಿರಾಟ್​​​ ಬೌಲರ್​ಗಳು ಬೃಹತ್​​ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​​​ನಲ್ಲಿ ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ಮುನ್ನುಗ್ಗುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ 346ರನ್​ಳ ಮುನ್ನಡೆ ಗಳಿಸಿದೆ. 2ನೇ ದಿನ ಮುಕ್ತಾಯಕ್ಕೆ  8ರನ್ ಗಳಿಸಿದ್ದ ಆಸ್ಟ್ರೇಲಿಯಾ 3ನೇ ದಿನವಾದ ಇಂದು ತನ್ನ ಬಳಿಯಿದ್ದ ಎಲ್ಲ ಅಸ್ತ್ರಗಳನ್ನ ಬಿಟ್ಟು ಟೀಮ್​​ ಇಂಡಿಯಾ ಎದುರು ಮಂಡಿಯೂರಿತು. ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 151 ರನ್​ ಗಳಿಗೆ ಆಲೌಟ್​ ಆಯ್ತು.

ಆ ಮೂಲಕ 292 ರನ್​ಗಳ ಭಾರಿ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಸಿಗಲಿಲ್ಲ. ಹನುಮ ವಿಹಾರಿ 13ರನ್​ಗಳಿಸಿ ಔಟಾದ್ರು. ಇನ್ನು ಪೂಜಾರ, ಕೊಹ್ಲಿ, ಡಕೌಟ್​ ಆಗಿ ಪೆವಿಲಿಯನ್ ಸೇರಿದರು. ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ ಸಹ ತಂಡಕ್ಕೆ ನೆರವಾಗಲಿಲ್ಲ.

ಅಂತಿಮವಾಗಿ ಟೀಮ್ ಇಂಡಿಯಾ ದಿನದಾಟದ ಮುಕ್ತಾಯದ ವೇಳೆ 5 ವಿಕೆಟ್​ ನಷ್ಟಕ್ಕೆ 54 ರನ್​ ಗಳಿಸಿದೆ. ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ 4 ವಿಕೆಟ್ ಪಡೆದರೆ, ಜೋಶ್ ಹೆಜಲ್​ವುಡ್1ವಿಕೆಟ್ ಪಡೆದರು.  ಮಾಯಂಕ್ ಅಗರ್​ವಾಲ್ ಮತ್ತು ರಿಷಬ್ ಪಂತ್ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.