ಕೇಬಲ್ ಟಿವಿ, ಡಿಟಿಹೆಚ್ ಗ್ರಾಹಕರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್..!

ಡಿಸೆಂಬರ್ 29ರಿಂದ ಹೊಸ ರೂಲ್ಸ್‌ವೊಂದು ಜಾರಿಯಾಗಲಿದ್ದು, ಡಿಟಿಹೆಚ್ ಮತ್ತು ಕೇಬಲ್ ಟಿವಿ ಗ್ರಾಹಕರು, ತಮ್ಮ ನೆಚ್ಚಿನ ಚಾನೆಲ್ ನೋಡುವುದಕ್ಕಾಗಿ ಹೆಚ್ಚಿನ ಹಣವನ್ನ ಕೊಡಬೇಕಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಅದರ ಬಗ್ಗೆ ಚಿಕ್ಕ ಮಾಹಿತಿ ಇಲ್ಲಿದೆ ನೋಡಿ.

ಡಿಟಿಹೆಚ್ ಮತ್ತು ಕೇಬಲ್ ಟಿವಿ ಗ್ರಾಹಕರು ಇಷ್ಟು ದಿನ 150ರಿಂದ 200 ರೂಪಾಯಿವರೆಗೆ ಹಣ ನೀಡುತ್ತಿದ್ದು, ಇನ್ನು ಮುಂದೆ 300ರಿಂದ 400ವರೆಗೆ ಹಣ ನೀಡಬೇಕಾಗಬಹುದು. ಅಂದರೆ ಈ ಮೊದಲು ಎಲ್ಲಾ ಚಾನೆಲ್‌ಗಳಿಗೂ ಸೇರಿಸಿ ಹಣ ನೀಡಬೇಕಾಗಿತ್ತು. ಆದರೆ ಇದೀಗ ಹೊಸ ರೂಲ್ಸ್ ಪ್ರಕಾರ, ಒಂದು ಚಾನೆಲ್‌ಗೂ ಸಪರೇಟ್ ಆಗಿ ಹಣ ನೀಡಬೇಕಾಗಿದೆ.

ಅಂದರೆ ಮೊದಲಿನ ಸರ್ವಿಸ್‌ನಲ್ಲಿ ನೀವು ನೋಡದಿರುವ ಚಾನೆಲ್‌ಗೂ ಕೂಡ ಹಣ ನೀಡಬೇಕಾಗಿತ್ತು. ಆದರೆ ಇದೀಗ ಹೊಸ ರೂಲ್ಸ್ ಪ್ರಕಾರ, ನೀವು ನೋಡುವ ಚಾನೆಲ್‌ಗೆ ಮಾತ್ರ ಹಣ ನೀಡಬಹುದು.

ಈ ಚಾನೆಲ್‌ ಸರ್ವಿಸ್‌ನಲ್ಲಿ ನೂರು ಚಾನೆಲ್‌ಗಳು ನಿಮಗೆ ಉಚಿತವಾಗಿ ಸಿಗಲಿದ್ದು, ಸರ್ವಿಸ್‌ಗಾಗಿ ನೀವು 130 ರೂಪಾಯಿಯನ್ನ ನೀಡಬೇಕಾಗುತ್ತದೆ. ಇದನ್ನು ಬಿಟ್ಟು ನಿಮಗೆ ನಿಮ್ಮಿಷ್ಟದ ಚಾನೆಲ್ ಬೇಕಾದಲ್ಲಿ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಒಂದು ಚಾನೆಲ್‌ಗೆ 19 ಅಥವಾ ಅದಕ್ಕಿಂತ ಹೆಚ್ಚಿನ ಹಣ ನೀಡಬೇಕಾಗಬಹುದು.