ಸೂಲಗಿತ್ತಿ ನರಸಮ್ಮ ಇನ್ನಿಲ್ಲ

ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮನವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮಂಗಳವಾರ ಬಿಜಿಎಸ್ ಆತ್ರೆಯಲ್ಲಿ ನರಸಮ್ಮ (98 ) ನಿಧನರಾಗಿದ್ದಾರೆ.

ಸೂಲಗಿತ್ತಿ ನರಸಮ್ಮ ತೀವ್ರ ಉಸಿರಾಟದ ತೊಂದರೆಯಿಂದ ಮತ್ತು  ವಯೋ ಸಹಜ ಖಾಯಿಲೆ ನಸರಮ್ಮ ಬಳಲುತ್ತಿದ್ದಾರೆ. ಇನ್ನೂ ನರಸಮ್ಮ ಅವರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ  ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ. ನಾಳೆ ತುಮಕೂರು ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸೂಲಗಿತ್ತಿ ನರಸಮ್ಮನವರ ಅಗಣ್ಯ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಇತ್ತೀಚೆಗೆ ಅವರಿಗೆ ಪದಶ್ಮೀ ಗೌರವ ನೀಡಿತ್ತು. ದೇವರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಗಳು ಸೂಲಗಿತ್ತಿ ನರಸಮ್ಮನವರಿಗೆ ಲಭಿಸಿವೆ.