ಹಂತಕನನ್ನ ಶೂಟೌಟ್ ಮಾಡಿ ನಾನು ತಲೆಕೆಡಿಸಿಕೊಳ್ಳಲ್ಲ: ಕುಮಾರಸ್ವಾಮಿ

ಮಂಡ್ಯಜಿಲ್ಲೆಯ ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದ ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪೋನ್ ಮೂಲಕ ಆದೇಶವನ್ನು ನೀಡಿದ್ದಾರೆ.

ವಿಜಯಪುರ ಹೆಲಿಕ್ಯಾಪ್ಟರ್ ನಲ್ಲಿ ಇಳಿದ ತಕ್ಷಣವೇ ಪೋನ್ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಆದೇಶ ರವಾನಿಸಿದಂತ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿದೆ.ಕೊಲೆಯಾದ ಪಕ್ಷದ ಕಾರ್ಯಕರ್ತ ಪಾಪ ಒಳ್ಳೆಯವನಿದ್ದ.ಅಂತಹವನನ್ನು ಕೊಲೆ ಮಾಡಿದ ಹಂತಕನನ್ನ ಯಾವುದೇ ಕಾರಣಕ್ಕು ಬಿಡಬೇಡಿ ಶೂಟೌಟ್ ಮಾಡಿ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

ಮದ್ದೂರಿನ ಪ್ರವಾಸಿ ಮಂದಿರ ಆವರಣದಲ್ಲಿ ಸೋಮವಾರ ಬೆಳಗ್ಗೆ ಹಾಡಹಗಲೇ ಕತ್ತು ಕೊಯ್ದು ವ್ಯಕ್ತಿಯ ಕೊಲೆ ಮಾಡಲಾಗಿದ್ದತ್ತು. ಜಿ.ಪಂ. ಮಾಜಿ ಅಧ್ಯಕ್ಷೆ ಲಲಿತ ಅವರ ಪತಿ, ಜೆಡಿಎಸ್ ಮುಖಂಡ ಪ್ರಕಾಶ್(48) ಕೊಲೆಯಾದ ವ್ಯಕ್ತಿ. ಕಾರಿನಲ್ಲಿ ಇವರನ್ನು ಕತ್ತು ಕೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಹೀಗಾಗಿ ಕುಮಾರಸ್ವಾಮಿಯವರು ಹತ್ಯೆ ಮಾಡಿದ ಹಂತಕರನ್ನು ಶೂಟೌಟ್ ಮಾಡಿ ಎಂದು ಆದೇಶ ನೀಡಿದ್ದಾರೆ