ಮೈಸೂರಿನಲ್ಲಿ ಕೆಜಿಎಫ್ ಸಿನಿಮಾದ ಸಿಡಿ ಮಾರಾಟ

ಮೈಸೂರಿನಲ್ಲಿ ಕೆಜಿ‌ಎಫ್ ಸಿನಿಮಾದ ಸಿಡಿ ಮಾರಾಟ ಮಾಡುತ್ತಿದ್ದವರನ್ನು ಯಶ್ ಅಭಿಮಾನಿಗಳು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.

ಕೆ.ಆರ್ ವೃತ್ತ ಸೇರಿದಂತೆ ಹಲವು ಕಡೆ ಕೆಜಿಎಫ್ ಸಿನಿಮಾದ ಸಿಡಿ ಮಾರಾಟ ಮಾಡುತ್ತೀದ್ದವರನ್ನು ಯಶ್ ಅಭಿಮಾನಿಗಳು ಸಿನಿಮಾ ಸಿಡಿ ಸಮೇತ ದೇವರಾಜ ಪೊಲೀಸರ ವಶಕ್ಕೆ‌ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನಾದ್ಯಂತ ಪರಿಶೀಲನೆ ನಡೆಸಿದ ಯಶ್ ಅಭಿಮಾನಿಗಳು. ಸಂಗಮ್ ಟಾಕೀಸ್ ರಸ್ತೆಯ ಕೆ.ಟಿ ಸ್ಟ್ರೀಟ್ ಮಂಡಿ‌ ಮೊಹಲ್ಲಾ ಅಗ್ರಹಾರ ಸೇರಿದಂತೆ ಹಲವು ಕಡೆ ಕೆಜಿಎಫ್ ಸಿನಿಮಾ ಸಿಡಿ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಬಲೆಬಿಸಿ ಆರೋಪಿಗಳನ್ನು ಅಭಿಮಾನಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಸಿಡಿ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.