‘ಸುಳ್ವಾಡಿ ಪ್ರಸಾದ ದುರಂತದ ಆರೋಪಿಗಳು ನಾಲ್ವರಲ್ಲ, 6 ಜನ’-ಚಿನ್ನಪ್ಪಿ

ಚಾಮರಾಜನಗರ: ಸುಳ್ವಾಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತ ಆರೋಪಿಯೆಂದು ಬಂಧಿಸಲಾಗಿದ್ದ ಚಿನ್ನಪ್ಪಿ ಮೈಮೇಲೆ ಮಾರಮ್ಮ ಬಂದಿದ್ದು, ಆರೋಪಿಗಳು ನಾಲ್ವರಲ್ಲ, ಆರು ಜನ ಎಂದಿದ್ದಾನೆ.

ಪ್ರತಿ ಹುಣ್ಣಿಮೆಗೆ ಚಿನ್ನಪ್ಪಿ ಮೈಮೇಲೆ ಮಾರಮ್ಮ ಬರುತ್ತಿದ್ದು, ನಿನ್ನೆ ಹುಣ್ಣಿಮೆ ಇದ್ದುದರಿಂದ ಮಾರಮ್ಮ ಚಿನ್ನಪ್ಪಿ ಮೈಮೇಲೆ ಬಂದಿದ್ದಾಳಂತೆ. ಈ ವೇಳೆ ಮಾತನಾಡಿದ ಚಿನ್ನಪ್ಪಿ, ಸುಳ್ವಾಡಿಯಲ್ಲಿ ನಡೆದ ಪ್ರಸಾದ ದುರಂತದಲ್ಲಿ ಭಾಗಿಯಾದ ಆರೋಪಿಗಳು ನಾಲ್ವರಲ್ಲ, ಆರು ಜನ ಎಂದು ಹೇಳಿದ್ದಾನೆ.

ಅಲ್ಲದೇ ಉರುಳು ಸೇವೆ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ ಚಿನ್ನಪ್ಪಿ, ದುರಂತದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ನೀಡು, ಮಾರಮ್ಮ ತೋರಿಸು, ಅವರನ್ನ ನೀನೇ ಶಿಕ್ಷಿಸು ಎಂದು ಚಿನ್ನಪ್ಪಿ ಎಂದು ಕೂಗಾಡಿದ್ದಾನೆ.

ಕೆಲ ದಿನಗಳ ಹಿಂದೆ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ನಡೆದ ಜಾತ್ರೆಯಲ್ಲಿ ಪ್ರಸಾದ ತಿಂದು 15ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈಗಲೂ ಕೂಡ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದದಲ್ಲಿ ವಿಷ ಬೆರೆಸಿ , ಅಮಾಯಕರನ್ನ ಕೊಲ್ಲಲಾಗಿದ್ದು, ಕೆಲ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.