ಇವರು ಮ್ಯಾರೇಜ್ ಪಾರ್ಟಿಗೆ 1500 ಹಸುಗಳನ್ನು ಇನ್ವೈಟ್ ಮಾಡಿದ್ರು..!

ಬರ್ತ್ ಡೆ, ಆನಿವರ್ಸರಿ ಅಂದ್ರೆ ಕೇಕ್ ಕಟಿಂಗ್ ಇರುತ್ತೆ. ಫ್ಯಾಮಿಲಿ ಜೊತೆ, ಫ್ರೆಂಡ್ಸ್ ಜೊತೆ ಪಾರ್ಟಿ ನಡೆಯುತ್ತೆ. ಇತ್ತೀಚೆಗಂತು ಪಾರ್ಟಿ ಅಂದ್ರೆ ಗುಂಡು ತುಂಡು ಸೇರಿ ಲಕ್ಷದ ಹತ್ರ ಖರ್ಚಾಗುತ್ತದೆ. ಆದ್ರೆ ಉಡುಪಿಯಲ್ಲೊಬ್ಬರು ಡಿಫರೆಂಟಾದ ಪಾರ್ಟಿ ಮಾಡಿದ್ದಾರೆ. ಪಾರ್ಟಿಗೆ 1500 ಹಸುಗಳನ್ನು ಇನ್ವೈಟ್ ಮಾಡಲಾಗಿತ್ತು.

ಉಡುಪಿ ಜಿಲ್ಲೆಯ ಬ್ರಹ್ಮಾವರದ ನೀಲಾವರ ಗೋವು ಶಾಲೆಯಲ್ಲಿ ಉಡುಪಿಯ ಶಶಿಧರ ಭಟ್ ತಮ್ಮ ವಿವಾಹದ 25ನೇ ವಾರ್ಷಿಕೋತ್ಸವವನ್ನು ಆಚರಿಸಿ, ಡಿಫರೆಂಟಾದ ಪಾರ್ಟಿ ಮಾಡಿದ್ದಾರೆ. ಯುವ ಬ್ರಾಹ್ಮಣ ಪರಿಷತ್ ಜೊತೆ ಸೇರಿ, 1500 ಹಸುಗಳಿಗೆ ಗೋಗ್ರಾಸ ನೀಡುವ ಮೂಲಕ ವಿಭಿನ್ನವಾದ ಒಂದು ಸೇವೆಯನ್ನು ಮಾಡಿದ್ದಾರೆ.

ಹಸುಗಳಿಗೆ ಹೊಟ್ಟೆ ತುಂಬಾ ರುಚಿಕರವಾದ ಆಹಾರ ಕೊಡೋದಕ್ಕೆ ಸುಮಾರು 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದೊಂಥರಾ ದೇವರ ಸೇವೆ ಎಂಬೂದು ಅವರ ನಂಬಿಕೆ.

ಹುಟ್ಟಿದಬ್ಬ ಆಚರಣೆ- ಆನಿವರ್ಸರಿ ಸೆಲೆಬ್ರೇಷನ್ ಅಂತ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದೇ ದುಡ್ಡನ್ನು ಹೀಗೂ ಖರ್ಚು ಮಾಡಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ ಭಟ್ ಮತ್ತು ಈ ಟೀಂ. ನೀಲಾವರ ಗೋಶಾಲೆಗೆ ಗೆಳೆಯರ ಬಳಗ ಹಿಂದಿನ ದಿನ ತೆರಳಿ ಆಹಾರ ತಯಾರಿಯ ಸಿದ್ಧತೆ ಮಾಡಿತ್ತು.

ಮಧ್ಯಾಹ್ನಕ್ಕೆ ಹೊಂದುವಂತೆ ಹಿಂಡಿ, ಅನ್ನ, ಬಿಸಿ ಬಿಸಿ ಹುರುಳಿ, ಹೀಗೆ ಎಲ್ಲಾ ಆಹಾರವನ್ನು ಕಲಸಿ ಗೋಗ್ರಾಸ ಸಿದ್ಧಪಡಿಸಲಾಯ್ತು. ಗೋಶಾಲೆಯ 1500ಕ್ಕೂ ಹೆಚ್ಚು ಹಸುಗಳಿಗೆ ವಿತರಿಸಲಾಯ್ತು. ಈ ಕಾರ್ಯಕ್ರಮ ಸಾಕಷ್ಟು ಮಂದಿಗೆ ಪ್ರೇರಣೆಯಾಗಿದೆ.

ಗೋಶಾಲೆ ನಿರ್ವಹಣೆಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಬರುತ್ತದೆ. ಸಭೆ, ಸಮಾರಂಭ ಅಂತ ಸುಮ್ಮನೆ ದುಂದು ವೆಚ್ಚ ಮಾಡುವವರು ಮೂಕಪ್ರಾಣಿಗಳ ಜೊತೆ ಸಂಭ್ರಮ ಆಚರಿಸಬಹುದು. ಅವುಗಳಿಗೆ ಆಹಾರ ಒಂದು ಸ್ವಲ್ಪ ಪುಣ್ಯನಾದ್ರೂ ಬರಬಹುದು.
ಕ್ಯಾಮರಾ ಪರ್ಸನ್ ಸೂರಜ್ ಜೊತೆ ನಾಗರಾಜ್ ವರ್ಕಾಡಿ ಟಿವಿ5 ಉಡುಪಿ