ತಮಿಳುನಾಡಿನಲ್ಲಿ ರೌಡಿ ಶೀಟರ್ ನಾಗರಾಜ ಬಂಧನ

ಅತ್ತಿಗೆ ಮತ್ತು ಅವರ ಮಗಳ ಮೇಲಿನ ಹಲ್ಲೆ ಮಾಡಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ನಾಗರಾಜನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ರೌಡಿ ಶೀಟರ್ ನಾಗರಾಜ, ಪುತ್ರ ಶಾಸ್ತ್ರಿ ಮತ್ತು ಸಹಚರ ಕುಪ್ಪುಸ್ವಾಮಿಯನ್ನು ಶ್ರೀರಾಮಪುರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಆದರೆ ಮತ್ತೊಬ್ಬ ಆರೋಪಿ ಗಾಂಧಿ ನಾಪತ್ತೆಯಾಗಿದ್ದಾನೆ.

ಅತ್ತಿಗೆ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಮಿಳುನಾಡಿಗೆ ಪರಾರಿಯಾಗಿದ್ದ ನಾಗರಾಜ ಹಾಗೂ ಸಹಚರರನ್ನು ಘಟನೆ ನಡೆದ ಒಂದು ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ನಾಗರಾಜ ಹಾಗೂ ಸಹಚರರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ.

ಕೆಲವು ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹಳೆ ನೋಟುಗಳ ಬದಲಾವಣೆ ಮಾಡುತ್ತಿದ್ದಾಗ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪರಾರಿಯಾಗಿದ್ದ ನಾಗರಾಜ ಅವರನ್ನು ಪೊಲೀಸರು ನಾಟಕೀಯ ರೀತಿಯಲ್ಲಿ ಬಂಧಿಸಿದ್ದರು.