ಸುಳ್ವಾಡಿ ದೇವರ ಪ್ರಸಾದದಲ್ಲಿ ವಿಷ: ಅಜ್ಞಾತ ಸ್ಥಳದಲ್ಲಿ ವಿಚಾರಣೆ?

ಸುಳ್ವಾಡಿ ದೇವರ ಪ್ರಸಾರದಲ್ಲಿ ವಿಷ ದುರಂತ ಪ್ರಕರಣಕ್ಕೆ ಸಂಬಂಧಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗಿದ್ದು ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ರಾತ್ರಿಯೀಡಿ ವಿಚಾರಣೆ ನಡೆಸಲಾಗಿದ್ದು, ದೇವಸ್ಥಾನದ ಟ್ರಸ್ಟ್ ಮ್ಯಾನೇಜರ್ ಮಾದೇಶನ ಪತ್ನಿ ಅಂಬಿಕಾ ತಾನೇ ವಿಷ ಹಾಕಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಟ್ರಸ್ಟ್ ಅಧ್ಯಕ್ಷ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠ ಕಿರಿಯ ಶ್ರೀ ಮಹದೇವ ಸ್ವಾಮಿ ಸೂಚನೆ ಮೇರೆಗೆ ವಿಷ ಹಾಕಿದೆ ಎಂದು ಎಂದು ಅಂಬಿಕಾ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದ್ದು, ವಿಚಾರಣೆ ಮುಂದುವರೆಯಲಿದೆ.

ಪೊಲೀಸರು ಕಿರಿಯ ಸ್ವಾಮಿ, ಚಿನ್ನಪ್ಪಿ ಹಾಗೂ ಅಂಬಿಕಾ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆದಿದ್ದು,  ಅಜ್ಫಾತ ಸ್ಥಳದಲ್ಲಿ ವಿಚಾರಣೆ ಮುಂದುವರಿಸಿದ್ದಾರೆ.

ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಇಂದು ಚಾಮರಾಜನಗರದ ನ್ಯಾಯಾಲಯಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.