ಕೊನೆಗೂ ಸಿಕ್ಸರ್ ಕಿಂಗ್ ಯುವಿ ಮುಂಬೈಗೆ ಸೇಲ್

ಜೈಪುರ: ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೊನೆಗೂ ಜಾಕ್ ಪಾಟ್ ಹೊಡೆದಿದ್ದಾರೆ. ಮೊದಲ ಸುತ್ತಿನ ಹರಾಜಿನಲ್ಲಿ ಯಾರಿಗೂ ಬೇಡವಾಗಿದ್ದ ಪಂಜಾಬ್ ಬ್ಯಾಟ್ಸ್​ಮನ್ ಯುವರಾಜ್​ ಸಿಂಗ್ ಅಚ್ಚರಿ ರೀತಿಯಲ್ಲಿ ಮುಂಬೈಗೆ ಸೇಲ್ ಆಗಿದ್ದಾರೆ.

ಯುವರಾಜ್ ಸಿಂಗ್ ಅವರನ್ನ ಎರಡನೇ ಬಾರಿಗೆ ಹರಾಜಿಟ್ಟಾಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯುವರಾಜ್ ಸಿಂಗ್ ಅವರನ್ನ ಮೂಲ ಬೆಲೆಗೆ ಖರೀದಿ ಮಾಡಿ ಅಚ್ಚರಿ ಕೊಟ್ಟಿತ್ತು. ಈ ಬಾರಿಯ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರ ಮೂಲ ಬೆಲೆ ಒಂದು ಕೋಟಿ ಆಗಿತ್ತು.

ಇದೇ ಮೊದಲ ಬಾರಿಗೆ ಯುವರಾಜ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಲಿದ್ದಾರೆ. ಕಳೆದ ವರ್ಷ ಯುವರಾಜ್ ಸಿಂಗ್ ತವರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು.