IPL ಹರಾಜು: 5 ಕೋಟಿ ಪಡೆದ ಬ್ರಾಥ್​ವೇಟ್, ಅಕ್ಸರ್​

ಭಾರತದ ಆಲ್​ರೌಂಡರ್ ಅಕ್ಸರ್ ಪಟೇಲ್ ಮತ್ತು ವೆಸ್ಟ್ ಇಂಡೀಸ್ ಟಿ-20 ತಂಡದ ನಾಯಕ ಬ್ರಾಥ್​ ವೇಟ್ ಮಂಗಳವಾರ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತಲಾ 5 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ.

ಜೈಪುರದಲ್ಲಿ ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಕ್ಸರ್ ಪಟೇಲ್ 5 ಕೋಟಿ ರೂ.ಗೆ ಡೆಲ್ಲಿ ಕ್ಯಾಪ್ಟನ್ಸ್ ತಂಡದ ಪಾಲಾದರೆ, ಬ್ರಾಥ್ ವೇಟ್ ಇದೇ ಮೊತ್ತಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾದರು.

ಮೊದಲ ದಿನದ ಮೊದಲ ಹಂತದ ಹರಾಜಿನಲ್ಲಿ ಎರಡನೇ ಅತಿ ದೊಡ್ಡ ಮೊತ್ತ ಪಡೆದಿದ್ದ ವೆಸ್ಟ್ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್​ಮನ್ ಶಿರ್ಮೊನ್ ಹೆಟ್ಮೆಯರ್. 4.3 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರಾಟವಾಗಿದ್ದಾರೆ.

ರನ್ ಬರ ಎದುರಿಸುತ್ತಿರುವ ಆಲ್​ರೌಂಡರ್ ಯುವರಾಜ್ ಸಿಂಗ್ ಖರೀದಿಸಲು ಯಾವುದೇ ಆಟಗಾರರು ಮುಂದೆ ಬರಲಿಲ್ಲ. ಇದರಿಂದ 1 ಕೋಟಿ ರೂ. ಮೂಲಧನ ಹೊಂದಿದ್ದ ಯುವರಾಜ್ ಮಾರಾಟವಾಗದೇ ಉಳಿದರು. ಮತ್ತೊಂದೆಡೆ 2 ಕೋಟಿ ರೂ. ಮೂಲಧನ ಹೊಂದಿದ್ದ ನ್ಯೂಜಿಲೆಂಡ್ ನ ಸ್ಫೋಟಕ ಬ್ಯಾಟ್ಸ್​ಮನ್ ಬ್ರೆಂಡನ್ ಕೂಡ ಮಾರಾಟವಾಗಲಿಲ್ಲ.

ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡಕ್ಕೆ ಪಾದರ್ಪಣೆ ಮಾಡಿದ ಆಲ್​ರೌಂಡರ್ ಹನುಮ ವಿಹಾರ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪ್ಟನ್ಸ್ ತಂಡಕ್ಕೆ ಮಾರಾಟವಾದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.