ಆಸೀಸ್ ದಾಳಿಗೆ `ಪರ್ತ್’ಗುಟ್ಟಿದ ಕೊಹ್ಲಿ ಪಡೆ: ಆಸೀಸ್​ಗೆ ಜಯ

ಮಧ್ಯಮ ವೇಗಿಗಳಾದ ಮಿಚೆಲ್ ಸ್ಟಾರ್ಕ್​ ಮತ್ತು ಪ್ಯಾಟ್ ಕಮಿನ್ಸ್ ದಾಳಿಗೆ ತತ್ತರಿಸಿದ ಭಾರತದ ಕೆಳ ಕ್ರಮಾಂಕ ನಿರೀಕ್ಷೆಗೂ ಮುನ್ನವೇ ವಿಕೆಟ್ ಕೈಚೆಲ್ಲಿ 146 ರನ್​ಗಳ ಭಾರೀ ಅಂತರದಿಂದ ಮುಗ್ಗರಿಸಿದೆ. ಇದರೊಂದಿಗೆ ಆತಿಥೇಯ ಆಸ್ಟ್ರೇಲಿಯಾ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.

ಗೆಲ್ಲಲು 287 ರನ್​ಗಳ ಪೈಪೋಟಿಯ ಮೊತ್ತವನ್ನು ಬೆಂಬತ್ತಿದ ಭಾರತ 5 ವಿಕೆಟ್​ಗೆ 112 ರನ್​ಗಳಿಂದ ಪಂದ್ಯದ ಅಂತಿಮ ದಿನವಾದ ಮಂಗಳವಾರ ಎರಡನೇ ಇನಿಂಗ್ಸ್ ಮುಂದುವರಿಸಿತು. ಆದರೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡ ಭಾರತ 140 ರನ್​ಗಳಿಗೆ ಆಲೌಟ್ ಆಗುವ ಮೂಲಕ 146 ರನ್​ಗಳ ಭಾರೀ ಅಂತರದಿಂದ ಮುಗ್ಗರಿಸಿತು.

ನಿನ್ನೆ ಒಂದು ವಿಕೆಟ್ ಪಡೆದಿದ್ದ ಮಿಚೆಲ್ ಸ್ಟಾರ್ಕ್​ ಇಂದು 2 ವಿಕೆಟ್ ಪಡೆದು ಭಾರತದ ಕೆಳ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಪ್ಯಾಟ್ ಕಮಿನ್ಸ್ 2 ವಿಕೆಟ್ ಕಿತ್ತು ಉತ್ತಮ ಬೆಂಬಲ ನೀಡಿದರು. ಇದರೊಂದಿಗೆ ಭಾರತದ ಹೋರಾಟ ನಿರೀಕ್ಷೆಗೂ ಮುನ್ನ ಅಂತ್ಯಗೊಂಡಿತು.

ವಿಕೆಟ್ ಉಳಿಸಿಕೊಂಡಿದ್ದ ಹನುಮ ವಿಹಾರಿ (28) ಹಾಗೂ ರಿಷಭ್ ಪಂತ್ (30) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.

  • ಸಂಕ್ಷಿಪ್ತ ಸ್ಕೋರ್
  • ಆಸ್ಟ್ರೇಲಿಯಾ 326 ಮತ್ತು 243
  • ಭಾರತ 283 ಮತ್ತು 2ನೇ ಇನಿಂಗ್ಸ್ 140

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.