ಶಮಿ ದಾಳಿಗೆ ಕುಸಿದ ಆಸ್ಟ್ರೇಲಿಯಾ: ಭಾರತಕ್ಕೆ 287 ರನ್ ಗುರಿ

ಮಧ್ಯಮ ವೇಗಿ ಮೊಹಮದ್ ಶಮಿ ಮಿಂಚಿನ ದಾಳಿ ನಡೆಸಿದ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದಿದ್ದಾರೆ. ಇದರೊಂದಿಗೆ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡನೇ ಟೆಸ್ಟ್ ಗೆಲ್ಲಲು 287 ರನ್​ಗಳ ಸಾಧಾರಣ ಗುರಿ ಪಡೆದಿದೆ.

ಪರ್ತ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ 4 ವಿಕೆಟ್​ಗೆ 132 ರನ್​ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 243 ರನ್ ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್​ನಲ್ಲಿ 43 ರನ್​ಗಳ ಅಲ್ಪ ಹಿನ್ನಡೆ ಅನುಭವಿಸಿದ್ದ ಭಾರತ ಇದೀಗ ಪಂದ್ಯ ಗೆದ್ದು4 ಪಂದ್ಯಗಳ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಬೇಕಾದರೆ 287 ರನ್ ಗಳಿಸಬೇಕಾಗಿದೆ.

41 ರನ್​ ಗಳಿಸಿದ್ದ ಉಸ್ಮಾನ್ ಖ್ವಾಜಾ ಮತ್ತು ನಾಯಕ ಟಿಮ್ ಪೇನ್ ಸೋಮವಾರ ಎಚ್ಚರಿಕೆಯಿಂದಲೇ ತಂಡವನ್ನು ಮುನ್ನಡೆಸಿದರು. ಈ ಜೋಡಿ 72 ರನ್ ಜೊತೆಯಾಟ ನಿಭಾಯಿಸಿದರು.

37 ರನ್ ಗಳಿಸಿದ್ದ ಪೇನ್ ಅವರನ್ನು ಶಮಿ ಸುಲಭ ಕ್ಯಾಚ್ ಕೊಹ್ಲಿಗೆ ನೀಡುವಂತೆ ಮಾಡುವ ಮೂಲಕ ಜೊತೆಯಾಟ ಮುರಿದರು. ನಂತರ ಬಂದ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಖ್ವಾಜಾ 213 ಎಸೆತಗಳಲ್ಲಿ 5 ಬೌಂಡರಿ ಸಹಿತ 72 ರನ್ ಗಳಿಸಿದ್ದಾಗ ಶಮಿಗೆ ವಿಕೆಟ್ ಒಪ್ಪಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಆಸ್ಟ್ರೇಲಿಯಾ 326 ಮತ್ತು 2ನೇ ಇನಿಂಗ್ಸ್ 243 (ಖ್ವಾಜಾ 72, ಪೇನ್ 32, ಶಮಿ 56/6, ಬುಮ್ರಾ 36/3).
  • ಭಾರತ ಮೊದಲ ಇನಿಂಗ್ಸ್ 283

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.