25ನೇ ಶತಕ ಸಿಡಿಸಿದ ಕೊಹ್ಲಿ, ಆಸೀಸ್ ನೆಲದಲ್ಲಿ ಶತಕದ `ಸಿಕ್ಸರ್’!

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಶತಕ ಸಿಡಿಸುವ ಮೂಲಕ ಕಾಂಗರೂ ನೆಲದಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ್ದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪಂದ್ಯದ ಮೂರನೇ ದಿನವಾದ ಭಾನುವಾರ 3 ವಿಕೆಟ್ ಗೆ 171 ರನ್ ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಕೊಹ್ಲಿ ಅವರ ಶತಕದಿಂದ ದಿಟ್ಟ ಹೋರಾಟ ನಡೆಸಿತು.  ಕೊಹ್ಲಿ ಶತಕ ಪೂರೈಸುವ ಮೂಲಕ ವೃತ್ತಿಜೀವನದ 25ನೇ ಟೆಸ್ಟ್ ಶತಕ ಸಂಪಾದಿಸಿದರು. ಇದು ಈ ವರ್ಷ ಸಿಡಿಸಿದ 5ನೇ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ 6ನೇ ಶತಕವಾಗಿದೆ. ಈ ಮೂಲಕ ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯಾದಲ್ಲಿ ಗಳಿಸಿದ್ದ 6 ಶತಕದ ಸಾಧನೆಯನ್ನು ಸರಿಗಟ್ಟಿದರು.

82 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದ ವಿರಾಟ್ ಕೊಹ್ಲಿ 214 ಎಸೆತಗಳಲ್ಲಿ 12 ಬೌಂಡರಿ ಸೇರಿದ 100 ರನ್ ಪೂರೈಸಿದರು. ಅಂತಿಮವಾಗಿ ಕೊಹ್ಲಿ 257 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 123 ರನ್ ಗಳಿಸಿದ್ದಾಗ ಕಮಿನ್ಸ್ ಎಸೆತದಲ್ಲಿ ಔಟಾದರು. 63ನೇ ಟೆಸ್ಟ್ ಆಡಿದ ಕೊಹ್ಲಿ ಪರ್ತ್​ನಲ್ಲಿ ಸಿಡಿಸಿದ ಮೊದಲ ಶತಕವೂ ಇದಾಗಿದೆ.

ಕೊಹ್ಲಿ ಶತಕದ ಹೊರತಾಗಿಯೂ ಭಾರತ 283 ರನ್​ಗಳಿಗೆ ಆಲೌಟಾಗಿದ್ದು ಮೊದಲ ಇನಿಂಗ್ಸ್​ನಲ್ಲಿ 43 ರನ್​ಗಳ ಹಿನ್ನಡೆ ಅನುಭವಿಸಿದೆ. ವಿಕೆಟ್ ಕೀಪರ್ ರಿಷಭ್ ಪಂತ್ 36 ರನ್ ಬಾರಿಸಿ ತಕ್ಕಮಟ್ಟಿಗೆ ಹೋರಾಟ ನಡೆಸಿದರು.

  • ಸಂಕ್ಷಿಪ್ತ ಸ್ಕೋರ್
  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 326
  • ಭಾರತ ಮೊದಲ ಇನಿಂಗ್ಸ್ 283 (ಕೊಹ್ಲಿ 123, ರಹಾನೆ 51, ಪಂತ್ 36, ಲಿಯೊನ್ 67/5).

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.