ಪರ್ತ್​ ಟೆಸ್ಟ್​: ಭಾರತೀಯ ಬೌಲರ್​ಗಳ ತಿರುಗೇಟು

ಭಾರತೀಯ ಬೌಲರ್​ಗಳು ಎರಡನೇ ಇನಿಂಗ್ಸ್​ನಲ್ಲಿ ತಿರುಗೇಟು ನೀಡಿದ್ದರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯದ ಕುತೂಹಲ ಘಟ್ಟ ತಲುಪಿದೆ.

ಪರ್ತ್​ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಭಾರತ ತಂಡವನ್ನು 283 ರನ್​ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ 43 ರನ್​ಗಳ ಅಲ್ಪ ಮುನ್ನಡೆ ಪಡೆಯಿತು. ನಂತರ ಎರಡನೇ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ದಿನದಾಂತ್ಯಕ್ಕೆ 132 ರನ್​ಗೆ  4 ವಿಕೆಟ್ ಕಳೆದುಕೊಂಡರೂ ಒಟ್ಟಾರೆ 175 ರನ್​ಗಳ ಮುನ್ನಡೆ ಸಾಧಿಸಿದೆ.

ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎಚ್ಚರಿಕೆಯಿಂದಲೇ ಆಟವಾಡಿತು. ಅದರಲ್ಲೂ ಏರಾನ್ ಫಿಂಚ್ ಮತ್ತು ಮಾರ್ಕೂಸ್ ಹ್ಯಾರಿಸ್ ಉತ್ತಮ ಆರಂಭ ಒದಗಿಸುವ ಪ್ರಯತ್ನ ಮಾಡಿದರು. ಆದರೆ 30 ಎಸೆತಗಳಲ್ಲಿ 5 ಬೌಂಡರಿ ಸೇರಿದ 25 ರನ್ ಗಳಿಸಿದ್ದ ಫಿಂಚ್ ಗಾಯಗೊಂಡು ನಿವೃತ್ತಿ ಆಗುತ್ತಿದ್ಧಂತೆ ಭಾರತೀಯ ಬೌಲರ್​ಗಳು ಮೇಲುಗೈ ಸಾಧಿಸಿದರು.

ಹ್ಯಾರಿಸ್ (20), ಮಾರ್ಶ್ (0), ಹ್ಯಾಂಡ್ಸ್ ಕಂಬ್ (13) ಮತ್ತು ಟ್ರಾವಿಡ್ ಹೆಡ್ (19) ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಉಸ್ಮಾನ್ ಖ್ವಾಜಾ (41) ತಾಳ್ಮೆಯಿಂದ ವಿಕೆಟ್ ರಕ್ಷಿಸಿಕೊಂಡು ತಂಡವನ್ನು ಮುನ್ಡನೆಸುತ್ತಿದ್ದಾರೆ.

  • ಸಂಕ್ಷಿಪ್ತ ಸ್ಕೋರ್
  • ಆಸ್ಟ್ರೇಲಿಯಾ 323 ಮತ್ತು 4 ವಿಕೆಟ್​ಗೆ 132 (ಖ್ವಾಜಾ ಅಜೇಯ 41, ಫಿಂಚ್ 25, ಹ್ಯಾರಿಸ್ 20, ಶಮಿ 23/2).
  • ಭಾರತ ಮೊದಲ ಇನಿಂಗ್ಸ್ 283.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.