Top

ಮೆಟ್ರೋ ದಲ್ಲಿ ಸಂಚರಿಸಿ ಅಭಯ ನೀಡಿದ ಡಿಸಿಎಂ

ಮೆಟ್ರೋ ದಲ್ಲಿ ಸಂಚರಿಸಿ ಅಭಯ ನೀಡಿದ ಡಿಸಿಎಂ
X

ಪಿಲ್ಲರ್ ನಲ್ಲಿ ಯಾವುದೇ ದೋಷ ವಿಲ್ಲ ಪಿಲ್ಲರ್ ಮೇಲೆ ಕೂರಿಸಿರುವ ಬೀಮ್ ನಲ್ಲಿ ಹನಿ ಕೂಮ್ ಕಾಣಿಸಿಕೊಂಡಿದೆ ಅಷ್ಟೇ ಯಾರು ಹೆದರುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದರು.

ಟ್ರಿನಿಟಿ ಮೆಟ್ರೋ ಪಿಲ್ಲರ್ ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಸಿಎಂ ಪರಮೇಶ್ವರ್ ಭೇಟಿನೀಡಿ ಪರಿಶೀಲನೆ ಕೈಗೊಂಡರು, ವಿಧಾನಸೌಧದ ಡಾ ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಮೆಟ್ರೋದಲ್ಲೇ ಪ್ರಯಾಣವನ್ನು ಬೆಳೆಸಿರು. ಪರಮೇಶ್ವರ್​ಗೆ ಬಿಎಂಆರ್ ಸಿಎಲ್ ಎಂಡಿ ಅಜೇಯ್ ಸೇಠ್ ಸಾಥ್ ನೀಡಿದರು.

ಇದೇ ವೇಳೆ ಸಾರ್ವಜನಿಕರ ಬಳಿ ಮೆಟ್ರೋ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದರು. ಬೇರಿಂಗ್ ಹಾಕಿ‌ ಪಿಲ್ಲರ್ ಮೇಲೆ ಬೀಮ್‌ ಕೂರಿಸಲಾಗಿದೆ ಅದು ಸ್ವಲ್ಪ ಜರುಗಿದೆ ಯಾರು ಹೆದರುವ ಅಗತ್ಯವಿಲ್ಲ,ದೆಹಲಿ‌ ಎಕ್ಸ್ ಪರ್ಟ್ ಸಹ ಬಂದಿದ್ದಾರೆ ಅವರು ಸಹ ಯಾವುದೇ ಅಪಾಯ ಇಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ ಕಾಮಗಾರಿಯಲ್ಲಿ ದೋಷ ಕಂಡು ಬಂದಿದರೆ ತಕ್ಷಣ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಪರಮೇಶ್ವರ ಹೇಳಿದರು.

ಪ್ರಸಾದಲ್ಲಿ ವಿಷ ಪ್ರಕರಣ ಬಹಳ ದುರಂತದ ವಿಚಾರ ಸಾವನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ನಾನು ದೇವರಲ್ಲಿ ಕೊಳ್ಳಿತ್ತೇನೆ. ಇದು ವರೆಗೂ ವಿಷ ಹಾಕಿದ್ದಾರ ಏನು ಆಗಿದೆ ಅಂತ ಗೊತ್ತಾಗ್ತ ಇಲ್ಲ ಪೊಲೀಸರು ತನಿಖೆ ಕೈ ಗೊಂಡಿದ್ದಾರೆ ಇಬ್ಬರು ಶಂಕಿತರನ್ನು ಈಗಾಗ್ಲೇ ವಶಕ್ಕೆ ಪಡೆಯಲಾಗಿದೆ ಎಂದರು.

Next Story

RELATED STORIES