Top

ಚುನಾವಣೆ ನಂತರ ಪ್ರತ್ಯೇಕ ಧರ್ಮದ ಹೋರಾಟ : ಎಂ. ಬಿ. ಪಾಟೀಲ್

ಚುನಾವಣೆ ನಂತರ ಪ್ರತ್ಯೇಕ ಧರ್ಮದ ಹೋರಾಟ : ಎಂ. ಬಿ. ಪಾಟೀಲ್
X

ಲಿಂಗಾಯತ ಸ್ವತಂತ್ರ ಧರ್ಮ ವಿಚಾರವನ್ನು, ಲೋಕಸಭೆ ಚುನಾವಣೆ ಮುಗಿಯುವ ವರೆಗೂ ಶಾಂತವಾಗಿರಲು ನಿರ್ಧಾರ ಮಾಡಿದ್ದೆವೆ ಎಂದು ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಎಮ್.ಬಿ. ಪಾಟೀಲ್ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಶನಿವಾರ ಮಾತನಾಡಿದ ಅವರು, ನಾವು ಬಸವ ಧರ್ಮದವರು , ಮುಹೂರ್ತ ನೋಡುವವರಲ್ಲ‌ ಮೂಹೂರ್ತದ ಮೇಲೆ ನಮಗೆ ನಂಬಿಕೆ ಇಲ್ಲ, ಲಿಂಗಾಯತ ಸ್ವತಂತ್ರ ಧರ್ಮ ವಿಚಾರವನ್ನು ಲೋಕಸಭೆ ಚುನಾವಣೆವರೆಗೆ ಶಾಂತವಾಗಿರಲು ನಿರ್ಧಾರ ಮಾಡಿದ್ದೆವೆ. ಕೇಂದ್ರ ಸರಕಾರ ಪ್ರಸ್ತಾವ ತಿರಸ್ಕರಿಸಿರುವುದು ಸಮಂಜಸವಲ್ಲ, ಈಗ ಹೋರಾಟ ಮಾಡಿದರೆ ಅದಕ್ಕೆ ಬೇರೆ ರೀತಿಯ ಅರ್ಥ ಕೊಡ್ತಾರೆ .ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಳಿಕ ನಿರ್ಣಾಯಕ ಹೋರಾಟ ಮಾಡುವುದರ ಬಗ್ಗೆ ಯೋಚಿಸಲಾಗುವುದು ಎಂದರು.

ಡಿಸೆಂಬರ್ 22ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ಬಗ್ಗೆ ಈಗಾಗಲೇ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರವಾಗಿದೆ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ನಮ್ಮ ಬೇಡಿಕೆಯಿದೆ, ಈ ಅಸಮತೋಲನದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ರಾಹುಲ್ ಗಾಂಧಿ, ವೇಣುಗೋಪಾಲ, ಗುಂಡೂರಾವ್, ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವರಿಕೆಯಾಗಿದೆ. ಇನ್ನೂ ಸಮ್ಮಿಶ್ರ ಸರಕಾರ ಐದು ವರ್ಷ ಅಧಿಕಾರ ನಡೆಸಲಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

Next Story

RELATED STORIES