Top

ಚಾಮರಾಜನಗರದಲ್ಲಿ ಸೂತಕದ ಛಾಯೆ: ಸತ್ತ ಪಕ್ಷಿಗಳಿಗೂ ದೊರೆತಿಲ್ಲ ಮುಕ್ತಿ

ಚಾಮರಾಜನಗರದಲ್ಲಿ ಸೂತಕದ ಛಾಯೆ: ಸತ್ತ ಪಕ್ಷಿಗಳಿಗೂ ದೊರೆತಿಲ್ಲ ಮುಕ್ತಿ
X

ಚಾಮರಾಜನಗರದ ಹನೂರು ತಾಲೂಕಿನ ಸುಳವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ 10 ಮಂದಿ ಭಕ್ತರು ಮೃತಪಟ್ಟು, 80ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಆಘಾತಕಾರಿ ಘಟನೆಯಿಂದ ಚಾಮರಾಜನಗರದಲ್ಲಿ ಸೂತಕದ ಛಾಯೆ ಮೂಡಿದೆ.

ದೇವರ ಪ್ರಸಾದ ಸೇವನೆ ದುರಂತದಿಂದ ಇಡೀ ರಾಜ್ಯಕ್ಕೆ ಆಘಾತಕವಾಗಿದ್ದು, ಗಣ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಣೆಗೆ ದೌಡಾಯಿಸುತ್ತಿದ್ದಾರೆ.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಶುಕ್ರವಾರ ತಡರಾತ್ರಿ ಮೈಸೂರಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಲಿದ್ದಾರೆ.

ಇದೇ ವೇಳೆ ಮಂಡ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ವಿವಿಧ ಇಲಾಖೆ ಸಚಿವರು ಹಾಗೂ ಸ್ಥಳೀಯ ಮುಖಂಡರು ನೆರವಿಗೆ ಧಾವಿಸಿದ್ದಾರೆ.

ಚಾಮರಾಜನಗರದ ಹನೂರು ತಾಲ್ಲೂಕಿನ ಸುಳವಾಡಿ ಗ್ರಾಮದ ದೇವಾಲಯ ಆವರಣದಲ್ಲಿ 80 ಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿದ್ದರೂ ಅದನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿಲ್ಲ.

ಪ್ರಸಾದದಲ್ಲಿ ವಿಷ ಬೆರಕೆ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Next Story

RELATED STORIES