ಹೊಸ ದಾಖಲೆ ಬರೆಯೋಕೆ ಸ್ಯಾಂಡಲ್ವುಡ್ ಕೆಜಿಎಫ್ ರೆಡಿ ..!!

ಇಷ್ಟು ದಿನ ಕನ್ನಡಿಗರ ಮನ ಕೆಜಿಎಫ್ ಕೆಜಿಎಫ್ ಎಂದು ಕುಣಿಯುತ್ತಿತ್ತು. ಈಡೀ ಭಾರತೀಯ ಚಿತ್ರರಂಗವೇ ಕೋಲಾರ ಗೋಲ್ಡ್ ಫೀಲ್ಡ್ನತ್ತ ನೋಡ್ತಿದ್ದು, ಕುತೂಹಲದಿಂದ ಕಾಯ್ತಿದೆ. ಮುಂದಿನ ವಾರ ತೆರೆಗಪ್ಪಳಿಸ್ತಿರೋ ಕೆಜಿಎಫ್ ಸಿನಿಮಾ ಥಿಯೇಟರ್ ವಿಚಾರದಲ್ಲಿ ಎಲ್ಲಾ ದಾಖಲೆ ಅಳಿಸಿ ಹಾಕಿ, ಹೊಸ ದಾಖಲೆ ಬರೀತಿದೆ.
ಹೊಂಬಾಳೆ ಫಿಲ್ಮ್ನ ಮೂರು ವರ್ಷದ ಸತತ ಪರಿಶ್ರಮ ಫಲ ಕೊಡುವ ಕಾಲ ಸನಿಹವಾಗುತ್ತಿದೆ. ಕಾದು ಕುಳಿತ್ತಿರುವ ಪ್ರೇಕ್ಷಕರ ಕ್ಯಾಲೆಂಡರ್ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೇನದ್ರು ಮುಂಗಡ ಟಿಕೇಟ್ ನಿಗದಿ ಮಾಡಿಕೊಂಡು ಅದ್ಧೂರಿ ಕೆಜಿಎಫ್ನ ಅಮೋಘವಾಗಿ ಕಣ್ಣ್ತುಂಬಿಕೊಳ್ಳುವುದೊಂದೆ ಬಾಕಿ. ಕನ್ನಡ,ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಹೊಸ ದಾಖಲೆಯನ್ನ ತನ್ನ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳಲು ಸನ್ನದವಾಗಿದೆ.. ಹಾಗದರೆ ಏನು ಆ ನ್ಯೂ ರೆಕಾರ್ಡ್ ಅನ್ನೋದನ್ನು ಸಂಕ್ಷಿಪ್ತವಾಗಿ ಹೇಳಿ ಬಿಡ್ತಿವಿ, ಕೇಳಿ ಕನ್ನಡದ ಹೆಮ್ಮೆಯ ಸಿನಿಮಾ ಕಥೆ.
ಬೇರೆ ಭಾಷೆಯ ಸಿನಿಮಾಗಳು ನಮ್ಮ ನೆಲದಲ್ಲಿ ನೂರಾರು ಥಿಯೇಟರ್ ಕಿತ್ತು ಕೊಂಡು ಹೆಚ್ಚು ಪ್ರದರ್ಶನ ಕಾಣುವ ಸುದ್ದಿ ಕೇಳಿ ಕನ್ನಡಿಗರ ಹೊಟ್ಟೆಯಲ್ಲಿ ಬೆಂಕಿ ಹಾಕಿದಂಗೆ ಆಗುತ್ತಿತು.. ಆದ್ರೆ ಈಗ ಕಾಲ ಬದಲಾಗಿದೆ ಸ್ವಾಮಿ. ನಮ್ಮೋರು ಗಡಿ ದಾಡಿ ನಮ್ಮ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸುವ ಸಾಮರ್ಥ್ಯ ಹೊಂದುತ್ತಿದ್ದಾರೆ.
ಭಾರತದ ಸುಮಾರು 1,800 ರಿಂದ 2,000 ಚಿತ್ರಮಂದಿರಗಳಲ್ಲಿ ಕೆಜಿಎಫ್ ರಿಲೀಸ್ ತಯಾರಿ ನಡೆಯುತ್ತಿದೆ. ಸುಮಾರು 350 ಸಿನಿಮಾಗಳಲ್ಲಿ ಕನ್ನಡದ ಕೆಜಿಎಫ್ ರಿಲೀಸ್ ಆಗಲಿದೆ..ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ತಮಿಳು, ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಯ ಕೆಜಿಎಫ್ ಸಿನಿಮಾ ಪ್ರದರ್ಶನವಾಗಲಿದೆ. ಆಂದ್ರಪ್ರದೇಶ ಮತ್ತು ತೆಲಂಗಾಣದ ಸುಮಾರು 350 ಥಿಯೇಟರ್ ಗಳಲ್ಲಿ ಕೆಜಿಎಫ್ ಶೋ ಫಿಕ್ಸ್ ಆಗಿದೆ.
ತಮಿಳು ವರ್ಷನ್ ಕೆಜಿಎಫ್ ಸಿನಿಮಾವನ್ನು ವಿಶಾಲ್ ಫಿಲ್ಮ್ ಫ್ಯಾಕ್ಟರಿ ಸಂಸ್ಥೆ ತಮಿಳುನಾಡಿನ 150 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿದೆ. ಕೇರಳದ 75 ಥಿಯೇಟರ್ಗಳಲ್ಲಿ ಮಲಯಾಳಂ ಕೆಜಿಎಫ್ ತೆರೆಕಂಡ್ರೇ, ಹಿಂದಿ ವರ್ಷನ್ ಕೆಜಿಎಫ್ 1 ಸಾವಿರ ಥಿಯೇಟರ್ಗಳಲ್ಲಿ ಧಾಮ್ ಧೂಮ್ ಮಾಡಲಿದೆ.
ಈ ತಿಂಗಳ 21ರಂದು ವಿಶ್ವದಾದ್ಯಂತ ತೆರೆಕಾಣುತ್ತಿರುವ ಕೆಜಿಎಫ್ ಚಿತ್ರದ ಆನ್ಲೈನ್ ಬುಕಿಂಗ್ ಭಾನುವಾರದಿಂದ ಶುರುವಾಗಲಿದೆ.. ಪೋಸ್ಟರ್ , ಟೀಸರ್, ಟ್ರೈಲರ್ , ಸಾಂಗ್ಸ್ ಎಬ್ಬಿಸುತ್ತಿರುವ ಸುನಾಮಿ ಅಲೆ ನೋಡ್ತಿದ್ರೆ ಆನ್ಲೈನ್ ಟಿಕೇಟ್ ಓಪನಾದ ಕೆಲವೇ ಕ್ಷಣಗಳಲ್ಲಿ ಸೋಲ್ಡ್ ಔಟ್ ಆದ್ರು ಅಚ್ಚರಿ ಪಡಬೇಕಿಲ್ಲ.