Top

ಪ್ರಸಾದದಲ್ಲಿ ವಿಷ: ಒಂದೇ ಗ್ರಾಮದ ಐವರು ಬಲಿ ಮುಗಿಲು ಮುಟ್ಟಿದ ಆಕ್ರಂದನ

ಪ್ರಸಾದದಲ್ಲಿ ವಿಷ: ಒಂದೇ ಗ್ರಾಮದ ಐವರು ಬಲಿ ಮುಗಿಲು ಮುಟ್ಟಿದ ಆಕ್ರಂದನ
X

ಪ್ರಸಾದದಲ್ಲಿ ವಿಷ ಸೇವಿಸಿ ಸಾವನಪ್ಪಿದ್ದ ದುರಂತದಲ್ಲಿ ಒಂದೆ ಊರಿನ ಐವರು ಸಾವನಪ್ಪಿದ್ದು, ಸ್ಮಶಾನಕ್ಕೆ ಬಂದ ಶವಗಳನ್ನು ನೋಡಿ ಹನೂರು ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಮುಗಿಲು ಮುಟ್ಟಿದೆ ಸಂಬಂಧಿಕರ ಅಕ್ರಂದನ.

ಎತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು ಕಣ್ಣೀರು ಹಾಕುತ್ತೀದ್ದಾರೆ, ಗೋಪಿಯಮ್ಮ ಎಂಬಾಕೆಯ ಮೂವರು ಹೆಣ್ಣು ಮತ್ತು ಒಂದು ಗಂಡು ಶವದ ಮುಂದೆ ಕುಳಿತು ರೋಧಿಸುತ್ತೀರುವ ಸನ್ನಿವೇಶ ಎಂತವರ ಕರಳು ಕೂಡ ಹಿಂಡುವಂತೆ ಮಾಡಿತ್ತು, ಇನ್ನೂ ಮೃತರ ಸಂಬಂಧಿಕರು ಕೂಡ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಅಸ್ವಸ್ಥ ರೋಗಿಯ ಪತ್ನಿಯು ಕೂಡ ಕಣ್ಣೀರು ಹಾಕಿದ್ದು, ದನ ಮೇಯಿಸಯತ್ತಿದ್ದ ನನ್ನ ಪತಿ ಒಂದೊತ್ತಿನ ಊಟಕ್ಕಾಗಿ ಪ್ರಸಾದ ಸ್ವೀಕರಿಸಿದರು. ಆದರೆ ಪ್ರಸಾದವೇ ವಿಷವಾಗಿ ಪರಿಣಮಿಸಿದೆ ಎಂದು ಅಸ್ವಸ್ಥ ರೋಗಿಯ ಪತ್ನಿ ಮಾತನಾಡಿದರು. ಸಹೋದರಿಯಿಂದಲು ದುರಂತ ಘಟನೆಯ ಬಗ್ಗೆ ನೋವಿನ ಮಾತುಗಳನಡಿದ್ದು, ಹೇಗೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವು ದೇವರ ಪ್ರಸಾದದಲ್ಲಿ ಹೀಗೆ ಮಾಡಿದರೆ ಏನೂ ಮಾಡೋದು ಎಂದರು.

ಇನ್ಮುಂದೆ ದೇವರ ಪ್ರಸಾದ ಕೈನಲ್ಲಿ ಹಿಡಿದುಕೊಂಡು ಭಯ ಪಡುವಂತೆ ಆಗಿದೆ. ಪ್ರಸಾದ ಸ್ವೀಕರಿಸಿದ 30ನಿಮಿಷದಲ್ಲೇ ವಾಂತಿಯಾಗಿ ಅಸ್ವಸ್ಥರಾದರು ಜನರು. ಓಂ ಶಕ್ತಿಗೆ ಮಾಲೇ ಹಾಕಿಸಿಕೊಂಡಿದ್ದ ಕುಟುಂಬಸ್ಥರು ಕೂಡ ಪ್ರಸಾದ ಸ್ವೀಕಾರ ಮಾಡಿದರು. ದಾರಿಹೋಕರು, ಆಟೋ ಡ್ರೈವರ್‌ಗಳು, ಕುರಿಗಾಯಿಗಳು ಕೂಡ ಪ್ರಸಾದ ಸ್ವೀಕರಿಸಿದರು. ಪ್ರಸಾದ ಸ್ವೀಕರಿಸಿ ಕುರಿ ಕಾಯುತ್ತಿದ್ದ ವೇಳೆಯೇ ಕುಸಿದು ಬಿದ್ದರು.ಕೂಡಲೇ ಕೆಲವರಿಂದ ಆಟೋದಲ್ಲಿ ಅಸ್ವಸ್ಥಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಹಾಗೂ ಇತರೆಡೆ ರವಾನೆ ಮಾಡಲಾಯಿತು ಎಂದು ಪೋಷಕರು ಹಾಗೂ ಅವರ ಬಂಧಿಕರಿಂದ ಮಾಹಿತಿಯನ್ನು ನೀಡಿದರು.

ಮೈಸೂರಿನ ಸುಯೋಗ್ ಆಸ್ಪತ್ರೆಯಲ್ಲಿ 13 ಮಂದಿಗೆ ಚಿಕಿತ್ಸೆ. 13 ಮಂದಿ ಅಸ್ವಸ್ಥರಲ್ಲಿ 8 ಮಂದಿ ಮಕ್ಕಳು. ನಮ್ಮ ಆಸ್ಪತ್ರೆಯಲ್ಲಿರೋ 13 ಮಂದಿ ರೋಗಿಗಳಲ್ಲಿ 2 ರೋಗಿಗಳನ್ನು ಐಸಿಯು ನಲ್ಲಿ ಇಡಲಾಗಿದೆ. ಸದ್ಯ ಇಬ್ಬರನ್ನು ಬಿಟ್ಟು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮುಖ್ಯಸ್ಥ ಯೋಗಣ್ಣ ಹೇಳಿದರು.

ಮಕ್ಕಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಪ್ರಸಾದದಲ್ಲಿ ಸೇರಿರೋ ವಿಷ ಯಾವುದು ಅನ್ನೋದು ಇನ್ನು ಪತ್ತೆಯಾಗಿಲ್ಲ. ಸದ್ಯ ಮಕ್ಕಳ ಮೂತ್ರ, ರಕ್ತ, ಎಲ್ಲವನ್ನೂ ಪರಿಶೀಲನೆಗೆ ಕಳುಹಿಸಲಾಗಿದೆ. ಮಕ್ಕಳ ಆರೋಗ್ಯ ಸುಧಾರಣೆ ಆಗೋ ವರೆಗೂ ನಾವು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದೇವೆ. ಮಕ್ಕಳ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮಕ್ಕಳ ವೈದ್ಯ ಶೃತಿ ಹೇಳಿದರು.

Next Story

RELATED STORIES