ಪರ್ತ್​ ಟೆಸ್ಟ್​: ಆಸ್ಟ್ರೇಲಿಯಾ 326ಕ್ಕೆ ಔಟ್: ಭಾರತಕ್ಕೆ ಆರಂಭಿಕ ಆಘಾತ

ಮಧ್ಯಮ ವೇಗಿ ಇಶಾಂತ್ ಶರ್ಮ ಅವರ ಕರಾರುವಕ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 326 ರನ್​ಗಳಿಗೆ ಗಂಟುಮೂಟೆ ಕಟ್ಟಿದೆ.  ಆದರೆ ಭಾರತ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಪರ್ತ್​ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 6 ವಿಕೆಟ್​ಗೆ 277 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ಭೋಜನ ವಿರಾಮಕ್ಕೂ ಮುನ್ನವೇ 326 ರನ್​ಗಳಿಗೆ ಆಲೌಟ್ ಆಯಿತು.

ನಾಯಕ ಟಿಮ್ ಪೇನ್ 38 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಆದರೆ ಉಳಿದ ಬ್ಯಾಟ್ಸ್​ಮನ್ ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದ ಕಾರಣ ಬೇಗನೇ ಕುಸಿತ ಕಂಡಿತು. ಭಾರತದ ಪರ ಇಶಾಂತ್ ಶರ್ಮ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಬುಮ್ರಾ, ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ತಲಾ 2 ವಿಕೆಟ್ ಕಬಳಿಸಿದರು.

ನಂತರ ಇನಿಂಗ್ಸ್ ಆರಂಭಿಸಿದ ಭಾರತ ಇಬ್ಬರೂ ಆರಂಭಿಕರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಕೆ.ಎಲ್. ರಾಹುಲ್ (2) ಮತ್ತು ಮುರಳಿ ವಿಜಯ್ (0) ಇಬ್ಬರೂ ತಂಡದ ಮೊತ್ತ ಎರಡಂಕಿಯ ಮೊತ್ತ ದಾಟುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.

  • ಸಂಕ್ಷಿಪ್ತ ಸ್ಕೊರ್
  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 326 (ಪೇನ್ 38, ಇಶಾಂತ್ 41/4).
  • ಭಾರತ ಮೊದಲ ಇನಿಂಗ್ಸ್ 2 ವಿಕೆಟ್​ಗೆ 10

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.