2019ಕ್ಕೆ ಭರ್ಜರಿ ಸಿನಿಯೂಟ ಉಣಬಡಿಸಲು ರೆಡಿಯಾಗಿದ್ದಾರೆ ರಿಷಭ್

ಸೂಪರ್ ಹಿಟ್ ಸಿನಿಮಾಗಳ ಮಾಸ್ಟರ್ ಮೈಂಡ್ ರಿಷಬ್ ಶೆಟ್ಟಿ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ. ಸರ್ಕಾರಿ ಕನ್ನಡ ಶಾಲೆ ಸಕ್ಸಸ್ ಬೆನ್ನಲ್ಲೇ ಬೆಲ್ ಬಾಟಂ ತೊಟ್ಟು ಡಿಟೆಕ್ಟಿವ್ ಆಗಿ ಇನ್ವೆಸ್ಟಿಗೇಷನ್ ಶುರು ಮಾಡ್ತಿದ್ದಾರೆ. ಮತ್ತೊಂದ್ಕಡೆ ನಾಥೂ ರಾಮ್ ಅವತಾರ ತಾಳಿರೋ ರಿಷಬ್, ಬಿಗ್ಬಿ- ಸುದೀಪ್ ಕ್ರೇಜಿ ಕಾಂಬಿನೇಷನ್ನಲ್ಲಿ ಬಾಲಿವುಡ್ ಸಿನಿಮಾ ಪ್ಲಾನ್ ಮಾಡ್ತಿದ್ದಾರೆ.
ಬೆಲ್ ಬಾಟಂ. ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿಯ ಸೂಪರ್ ಸಿನಿಮಾಗಳನ್ನ ನಿರ್ದೇಶಿಸಿದ ರಿಷಬ್ ಶೆಟ್ಟಿ ಹೀರೋ ಆಗಿ ಎಂಟ್ರಿ ಕೊಡ್ತಿರೋ ಸಿನಿಮಾ. ಜಯತೀರ್ಥ ನಿರ್ದೇಶನದ 80ರ ದಶಕದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್. ಕನ್ನಡದ ಮತ್ತೊಂದು ಎಕ್ಸ್ಪೆರಿಮೆಂಟಲ್ ರೆಟ್ರೋ ಸ್ಟೈಲ್ ಸಿನಿಮಾ.
ಡಿಟೆಕ್ಟಿವ್ ದಿವಾಕರ್ ಆಗಿ ರಿಷಬ್ ಶೆಟ್ಟಿ ಇನ್ವೆಸ್ಟಿಗೇಷನ್
ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ‘ಬೆಲ್ ಬಾಟಂ’ ಟೀಸರ್
ಇತ್ತೀಚೆಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ ಬೆಲ್ ಬಾಟಂ ಸಿನಿಮಾ ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಫನ್, ಸಸ್ಪೆನ್ಸ್ ಮಿಕ್ಸ್ ಮಾಡಿ ಕುತೂಹಲಭರಿತವಾಗಿ ಟೀಸರ್ ಕಟ್ ಮಾಡಿದೆ ಚಿತ್ರತಂಡ. ಅಣ್ಣಾವ್ರ ಗೋವಾದಲ್ಲಿ ಸಿಐಡಿ 999 ಪೋಸ್ಟರ್ನೊಂದಿಗೆ ಓಪನ್ ಆಗೋ ಟೀಸರ್, ಡಿಟೆಕ್ಟಿವ್ ದಿವಾಕರ್ನ ಪರಿಚಯಿಸುತ್ತೆ. ಟೋಪಿ, ಉದ್ದದ ಕೋಟು, ಗ್ಲೌಸ್, ಕನ್ನಡಕ ಟೋಟಲ್ ಆಗಿ ರಿಷಬ್ ವೇಷ 80ರ ದಶಕದ ಡಿಟೆಕ್ಟಿವ್ ಆಫೀಸರ್ನ ನೆನಪಿಸುತ್ತೆ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರೇಯಸಿಯಾಗಿ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಮಿಂಚಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ವಿಚಿತ್ರವಾಗಿ ಗಡ್ಡ ಬಿಟ್ಟು ಬೀಡಿ ಸೇದುತ್ತಾ, ಒಂದೆರಡು ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಶಿವಮಣಿ ಸಹ ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಇವರ ಪಾತ್ರಗಳು ಕುತೂಹಲ ಕೆರಳಿಸುವಂತಿದೆ.
ಮೂರು ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ರಿಷಬ್ ಶೆಟ್ಟಿ, ಹೀರೋ ಆಗಿ ನಟಿಸ್ತಿರೋ ಚೊಚ್ಚಲ ಸಿನಿಮಾ ಇದು. ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ರು, ಹೀರೋ ಆಗಿ ಇದು ಮೊದಲ ಪ್ರಯತ್ನ. ಅದೇ ಕಾರಣಕ್ಕೆ ಬೆಲ್ ಬಾಟಂ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಕೊಂಡಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 11ಕ್ಕೆ ತೆರೆಮೇಲೆ ಡಿಟೆಕ್ಟಿವ್ ದಿವಾಕರ್ ತನಿಖೆ ಶುರುವಾಗಲಿದೆ.
‘ಕಥಾಸಂಗಮ’ದಲ್ಲಿದೆ ರಿಷಬ್ ಶೆಟ್ಟಿಯ ವಿಚಿತ್ರ ಕಥೆ
ನಾಥೂರಾಮ್ ಚಿತ್ರಕ್ಕಾಗಿ ದಿವಾಕರನ ಹೊಸ ಅವತಾರ
ಏಳು ಚಿಕ್ಕ ಚಿಕ್ಕ ಕಥೆಗಳನ್ನ ಸೇರಿಸಿ, ನಿರ್ಮಾಣ ಮಾಡ್ತಿರೋ ಪ್ರಯೋಗಾತ್ಮಕ ಸಿನಿಮಾ ಕಥಾಸಂಗಮ. ಈ ಚಿತ್ರದ ಒಂದು ಕಥೆಯಲ್ಲಿ ರಿಷಬ್ ಶೆಟ್ಟಿ ಭಿಕ್ಷುಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಅವ್ರ ಆ ಲುಕ್ ಕುತೂಹಲ ಕೆರಳಿಸಿದೆ. ಇನ್ನೂ ಮೊನ್ನೆಯಷ್ಟೆ ರಿಷಬ್ ಶೆಟ್ಟಿ ಅಭಿನಯದ ನಾಥೂರಾಮ್ ಸಿನಿಮಾ ಸೆಟ್ಟೇರಿದೆ. ಸಿನಿಮಾದಲ್ಲಿ ಗಾಂಧೀಜಿ ಕುರಿತು ಪಾಠ ಮಾಡುವ ಲೆಕ್ಚರರ್ ಪಾತ್ರ ಮಾಡ್ತಿದ್ದಾರೆ.
ಮುಂದಿನ ವರ್ಷ ಸೆಟ್ಟೇರಿಲಿದೆ ರಿಷಬ್ ಶೆಟ್ಟಿ ಬಿಟೌನ್ ಸಿನಿಮಾ
ಶೆಟ್ರ ನಿರ್ದೇಶನದಲ್ಲಿ ಬಿಗ್ ಬಿ ಅಮಿತಾಬ್- ಕಿಚ್ಚ ಸುದೀಪ್
ಈಗಾಗಲೇ ರಿಷಬ್ ಶೆಟ್ಟಿ ಬಾಲಿವುಡ್ ಸಿನಿಮಾ ಮಾಡ್ತಾರೆ, ಆ ಸಿನಿಮಾದಲ್ಲಿ ಬಿಗ್ ಬಿ- ಸುದೀಪ್ ನಟಿಸ್ತಾರೆ ಅನ್ನೋ ಸುದ್ದಿ ಹೊರ ಬಿದ್ದಿದೆ. ಈಗಾಗಲೇ ಈ ವಿಚಾರವಾಗಿ ಅಮಿತಾಬ್ ಅವ್ರನ್ನೂ ರಿಷಬ್ ಸಂಪರ್ಕಿಸಿದ್ದು, ಸಿನಿಮಾಗಾಗಿ ಚಿತ್ರಕಥೆ ಕೆಲಸಗಳು ನಡೀತಿದೆ. ಒಮ್ಮೆ ಬಿಗ್ ಬಿಗೆ ಸಂಪೂರ್ಣ ಸ್ಕ್ರಿಪ್ಟ್ ಕೊಟ್ಟು, ಅವರು ಓಕೆ ಅಂದ್ರೆ, ಮುಂದಿನ ವರ್ಷವೇ ಸಿನಿಮಾ ಸೆಟ್ಟೇರಲಿದೆ.
ಈಗಾಗಲೇ ರನ್, ಸಿನಿಮಾದಲ್ಲಿ ಅಮಿತಾಬ್- ಸುದೀಪ್ ಒಟ್ಟಿಗೆ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟಿಸೋಕೆ ಅಮಿತಾಬ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತಲೂ ಹೇಳಲಾಗ್ತಿದೆ. ನಿರ್ಮಾಪಕ ರಾಜೇಶ್ ಭಟ್ ರಿಷಬ್ ಅವರ ಕಥೆಯನ್ನು ಇಷ್ಟಪಟ್ಟಿದ್ದು, ಸಿನಿಮಾ ನಿರ್ಮಾಣಕ್ಕೆ ಒಪ್ಪಿದ್ದಾರೆ ಅನ್ನಲಾಗ್ತಿದ್ದು, ಏಪ್ರಿಲ್ ಅಥವಾ ಮೇ ವೇಳೆಗೆ ಚಿತ್ರಕ್ಕೆ ಚಾಲನೆ ಸಿಗಲಿದೆ. ಒಟ್ಟಾರೆ ರಿಷಬ್ ಶೆಟ್ಟಿ ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೂ ಸೌಂಡ್ ಮಾಡ್ತಿರೋದು ಸುಳ್ಳಲ್ಲ.
ನಾಣಿ..ಎಂಟ್ರಟ್ರೈನ್ಮೆಂಟ್ ಬ್ಯೂರೊ, ಟಿವಿ5