Top

ಸೌತ್​ ಸ್ಟಾರ್ ಹೀರೋಯಿನ್ಸ್​ನ ಹಿಂದಿಕ್ಕಿದ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ

ಸೌತ್​ ಸ್ಟಾರ್ ಹೀರೋಯಿನ್ಸ್​ನ ಹಿಂದಿಕ್ಕಿದ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ
X

ಮೊದಲ ನೋಟದಲ್ಲೇ ಕನ್ನಡ ಚಿತ್ರರಸಿಕರ ಹೃದಯಕ್ಕೆ ಲಗ್ಗೇ ಹಾಕಿದರು ರಶ್ಮಿಕಾ ಮಂದಣ್ಣ. ಇನ್ನೂ ತೆಲುಗಿನ ಗೀತಾ ಗೋವಿಂದಂ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಟಾಲಿವುಡ್ ಕ್ರಶ್​ ಆದರು.

ಗೀತಾ ಗೋವಿಂದಂ ನಂತ್ರ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಕ್ರೇಜ್ ದುಪ್ಪಟ್ಟಾಯ್ತು. ಟಾಲಿವುಡ್​, ಕಾಲಿವುಡ್​ ಸೂಪರ್​ ಸ್ಟಾರ್​ಗಳ ಜೊತೆ ನಟಿಸೋಕೆ ಬುಲಾವ್ ಬರ್ತಿದೆ. ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಸಾನ್ವಿ ಸದ್ದು ಮಾಡ್ತಿದ್ದಾರೆ. ತೆಲುಗು, ಕನ್ನಡದ ಮೂರ್ನಾಲ್ಕು ಸಿನಿಮಾಗಳಲ್ಲಿ ಗೀತಾ ಕೈಯಲ್ಲಿವೆ. ಟಾಪ್​ ಹೀರೋಯಿನ್ಸ್​​​​ನ ಹಿಂದಿಕ್ಕಿ ರಶ್ಮಿಕಾ ಸೌತ್ ಸೆನ್ಸೇಷನ್​​ ಆಗಿ ಹೊರಹೊಮ್ಮಿದ್ದಾರೆ.

ತಮ್ಮ ಕ್ಯೂಟ್ ಕ್ಯೂಟ್ ಲುಕ್ಸ್ ಮತ್ತು ಆಕ್ಟಿಂಗ್​ನಿಂದ ಕಮಾಲ್ ಮಾಡ್ತಿರೋ ರಶ್ಮಿಕಾ ಮಂದಣ್ಣ ಸ್ಪೆಷಲ್ ಡ್ಯಾನ್ಸ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಫೇಮಸ್ ನ್ಯಾಷನಲ್ ಕೊರಿಯೋಗ್ರಫರ್ ಬಳಿ 6 ತಿಂಗಳ ಕಾಲ ರಶ್ಮಿಕಾ ಡ್ಯಾನ್ಸ್ ಕಲಿತಿದ್ದಾರೆ. ಡ್ಯಾನ್ಸ್​ನಲ್ಲೂ ಪರ್ಫೆಕ್ಟ್ ಆಗಿ ಸೌತ್​ ಸ್ಟಾರ್ ಹೀರೋಯಿನ್ಸ್​ಗೆ ಸವಾಲ್ ಹಾಕೋಕೆ ಸಾನ್ವಿ ಪ್ರಯತ್ನ ನಡೆಸಿದ್ದಾರೆ. ಟಾಲಿವುಡ್​, ಕಾಲಿವುಡ್​ನಲ್ಲಿ ಡಿಮ್ಯಾಂಡ್​ ಹೆಚ್ಚಿಸಿಕೊಂಡಿರೋ ರಶ್ಮಿಕಾ, ಲೇಡಿ ಸೂಪರ್ ಸ್ಟಾರ್ ಆಗುವ ಲೆಕ್ಕಾಚಾರದಲ್ಲಿದ್ದಾರೆ.

ಪ್ರತಿ ವರ್ಷ ಗೂಗಲ್​ನಲ್ಲಿ ಯಾವ ಸೆಲೆಬ್ರೆಟಿಗಾಗಿ ಜನರು ಹೆಚ್ಚು ಹುಡುಕಾಡಿದರು ಅನ್ನೋ ಮಾಹಿತಿ ಸಿಗುತ್ತೆ.. ಸೌತ್​ ಸಿನಿದುನಿಯಾದಲ್ಲಿ ಅತಿ ಹೆಚ್ಚು ಸರ್ಚ್​ ಆದ ಸೆಲೆಬ್ರೆಟಿಗಳ ಲಿಸ್ಟ್​​ನಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಐದನೇ ಸ್ಥಾನ ಗಿಟ್ಟಿಸಿದ್ದಾರೆ. ಮೊದಲ ಸ್ಥಾನದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಕ್ರಮವಾಗಿ ನಾನಿ, ಬಾಲಕೃಷ್ಣ, ವಿಜಯ್​ ದೇವರಕೊಂಡ ಇದ್ದಾರೆ.. ಕೇವಲ 5 ಸಿನಿಮಾ ಮಾಡಿರೋ ರಶ್ಮಿಕಾ, ಈ ಲಿಸ್ಟ್​​ನಲ್ಲಿ ಅನುಷ್ಕಾ ಶೆಟ್ಟಿ, ತಮನ್ನಾ, ಕಾಜಲ್ ಅಗರ್​ವಾಲ್​ರಂತಹ ನಟಿಯರನ್ನು ಹಿಂದಿಕ್ಕಿರೋದು ವಿಶೇಷ.

ಕನ್ನಡದಲ್ಲಿ ಸದ್ಯ ಯಜಮಾನ ಮತ್ತು ಪೊಗರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.. ಪಿ. ಕುಮಾರ್ ನಿರ್ದೇನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ.ಚಿತ್ರದಲ್ಲಿ ದಚ್ಚು ಜೋಡಿಯಾಗಿ ರಶ್ಮಿಕಾ ಕಮಾಲ್ ಮಾಡೋಕೆ ಬರ್ತಿದ್ದಾರೆ.

ಇನ್ನೂ ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ ಬರೋಬ್ಬರಿ 65 ಲಕ್ಷ ಸಂಭಾವನೆ ಪಡೆದಿದ್ದಾರೆ ಅಂತ ಸುದ್ದಿಯಾಗಿತ್ತು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಇಂಜಿನಿಯರಿಂಗ್ ಸ್ಟೂಡೆಂಟ್ ಆಗಿ, ಕನ್ನಡ ಟೀಸರ್​ ಆಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಪೊಗರು ಚಿತ್ರದಲ್ಲಿ ಪ್ರೊಫೇಸರ್​ ಪಾತ್ರದಲ್ಲಿ ಮಿಂಚಲಿದ್ದಾರೆ.

Next Story

RELATED STORIES