Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಪಿಲ್ಲರ್ ನಲ್ಲಿ ಯಾವುದೇ ದೋಷ ವಿಲ್ಲ ಪಿಲ್ಲರ್ ಮೇಲೆ ಕೂರಿಸಿರುವ ಬೀಮ್ ನಲ್ಲಿ ಹನಿ ಕೂಮ್ ಕಾಣಿಸಿಕೊಂಡಿದೆ ಅಷ್ಟೇ ಯಾರು ಹೆದರುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದರು.ಟ್ರಿನಿಟಿ ಮೆಟ್ರೋ ಪಿಲ್ಲರ್ ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಸಿಎಂ ಪರಮೇಶ್ವರ್ ಭೇಟಿನೀಡಿ ಪರಿಶೀಲನೆ ಕೈಗೊಂಡರು, ವಿಧಾನಸೌಧದ ಡಾ ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಮೆಟ್ರೋದಲ್ಲೇ ಪ್ರಯಾಣವನ್ನು ಬೆಳೆಸಿರು. ಪರಮೇಶ್ವರ್​ಗೆ ಬಿಎಂಆರ್ ಸಿಎಲ್ ಎಂಡಿ ಅಜೇಯ್ ಸೇಠ್ ಸಾಥ್ ನೀಡಿದರು.

2.ನಟ ರಾಮ್​ ಕುಮಾರ್ ಮಗ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ..ಅವರ ಹೊಸ ಚಿತ್ರಕ್ಕೆ ದಾರಿ ತಪ್ಪಿದ ಮಗ ಎಂದು ಟೈಟಲ್ ಫಿಕ್ಸ್​ ಆಗಿದೆ..ರ್ಯಾಂಬೋ-2 ನಿರ್ದೇಶಕ ಅನಿಲ್ ದಿರೇನ್​ ರಾಮ್​​ ಕುಮಾರ್​ಗೆ ಆಕ್ಷನ್​ ಕಟ್ ಹೇಳುತ್ತಿದ್ದಾರೆ..ದಿರೇನ್​ಗೆ ನಾಯಕಿಯಾಗಿ ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಸ್ಕೀನ್ ಶೇರ್ ಮಾಡುತ್ತಿದ್ದಾರೆ.

3.ಹ್ಯಾಟ್ರಿಕ್ ಹಿರೋ ಶಿವರಾಜ್​ ಕುಮಾರ್ ಶೂಟಿಂಗ್​ ನಿಮಿತ್ತ ಇತ್ತೀಚೆಗೆ ಚೆನ್ನೈಗೆ ತೆರೆಳಿದ್ದಾರೆ..ಬಿಡುವಿನ ಸಂದರ್ಭದಲ್ಲಿ ಚೆನ್ನೈನ ತಮ್ಮ ಸ್ನೇಹಿತರೊಂದಿಗೆ ಒಂದಷ್ಟು ಕಾಲ ಕಳೆದಿದ್ದಾರೆ, ಹರಟೆ ಹೊಡೆದಿದ್ದಾರೆ. ಈ ಪೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಹಳೆದ ದಿನಗಳನ್ನು ನೆನೆಪು ಮಾಡಿಕೊಂಡು ಖುಷಿ ಪಟ್ಟಿದ್ದಾರೆ.

4.ಆರೆಂಜ್ ಚಿತ್ರದ ಮೂಲಕ ಎಲ್ಲರನ್ನು ರಂಜಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಕೊಲ್ಕತ್ತಾದತ್ತ ಪಯಣ ಬೆಳೆಸಿದ್ದಾರೆ..ಗಣಿ ಗೀತಾ ಚಿತ್ರ ಒಪ್ಪಿಕೊಂಡಿದ್ದು ಗೊತ್ತೇ ಇದೆ. ಇದೀಗ ಗೀತ ಚಿತ್ರದ ಶೂಟಿಂಗ್ ಆರಂಭವಾಗಿದ್ದು ಕೋಲ್ಕತ್ತದಲ್ಲಿ ಶೂಟಿಂಗ್ ಆರಂಭವಾಗಿದೆ. ವಿಜಯ್ ನಾಗೇಂದ್ರ ಗೀತಾ ಚಿತ್ರಕ್ಕೆ ಆಕ್ಷನ್​​ ಹೇಳುತ್ತಿದ್ದಾರೆ..ಅಂದ್ಹಾಗೆ ವಿಜಯ್ ನಾಗೇಂದ್ರ ಅವರಿಗೆ ಇದು ಮೊದಲ ಸಿನಿಮಾ.

5.ತಾಯಿಗೆ ತಕ್ಕ ಮಗ ಚಿತ್ರದ ನಂತರ ನಟ ಅಜಯ್ ರಾವ್ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ..ಗುರುದೇಶಪಾಂಡೆ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ..ಚಿತ್ರದ ಸ್ಕ್ರಿಪ್ಟ್​ ಪೂಜೆ ನೆರವೇರಿದ್ದು ಚಿತ್ರಕ್ಕೆ ಟೈಟಲ್​​ ಇನ್ನೂ ಫಿಕ್ಸ್​ ಆಗಿಲ್ಲ. ಗುರು ದೇಶಪಾಂಡೆ ಶಿಷ್ಯ ರಾಜವರ್ಧನ್ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.

6.ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ.ಪರ್ತ್​ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 6 ವಿಕೆಟ್​ಗೆ 277 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ 326 ರನ್​ಗಳಿಗೆ ಆಲೌಟ್ ಆಯಿತು. ನಂತರ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ. ಸಮಬಲ ಸಾಧಿಸಬೇಕಾದರೆ ಭಾರತಕ್ಕೆ 154 ರನ್ ಅಗತ್ಯವಿದ್ದು, ಕೈಯಲ್ಲಿ 7 ವಿಕೆಟ್ ಹೊಂದಿದೆ.

7.ಮಧ್ಯಮ ವೇಗಿ ಇಶಾಂತ್ ಶರ್ಮ ಅವರ ಕರಾರುವಕ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 326 ರನ್​ಗಳಿಗೆ ಗಂಟುಮೂಟೆ ಕಟ್ಟಿದೆ. ಆದರೆ ಭಾರತ ಆರಂಭಿಕ ಆಘಾತಕ್ಕೆ ಒಳಗಾಗಿದೆ.ಪರ್ತ್​ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ 6 ವಿಕೆಟ್​ಗೆ 277 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ಭೋಜನ ವಿರಾಮಕ್ಕೂ ಮುನ್ನವೇ 326 ರನ್​ಗಳಿಗೆ ಆಲೌಟ್ ಆಯಿತು.

8.ಅಚ್ಚರಿ ಬೆಳವಣಿಗೆಯೊಂದರಲ್ಲಿ ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನಹ್ವಾಲ್ ಮತ್ತು ಅಗ್ರ ಆಟಗಾರ ಪಾರುಪಲ್ಲಿ ಕಶ್ಯಪ್ ವಿವಾಹವಾಗಿದ್ದಾರೆ.ಸೈನಾ ಮತ್ತು ಪಾರುಪಲ್ಲಿ ಕಶ್ಯಪ್ ವಿವಾಹ ಭಾನುವಾರ ನಿಗದಿಯಾಗಿತ್ತು. ಆದರೆ ಎರಡು ದಿನ ಮೊದಲೇ ವಿವಾಹವಾಗಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

9.ಪ್ರಸಾದದಲ್ಲಿ ವಿಷ ಸೇವಿಸಿ ಸಾವನಪ್ಪಿದ್ದ ದುರಂತದಲ್ಲಿ ಒಂದೆ ಊರಿನ ಐವರು ಸಾವನಪ್ಪಿದ್ದು, ಸ್ಮಶಾನಕ್ಕೆ ಬಂದ ಶವಗಳನ್ನು ನೋಡಿ ಹನೂರು ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಮುಗಿಲು ಮುಟ್ಟಿದೆ ಸಂಬಂಧಿಕರ ಅಕ್ರಂದನ.ಎತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು ಕಣ್ಣೀರು ಹಾಕುತ್ತೀದ್ದಾರೆ, ಗೋಪಿಯಮ್ಮ ಎಂಬಾಕೆಯ ಮೂವರು ಹೆಣ್ಣು ಮತ್ತು ಒಂದು ಗಂಡು ಶವದ ಮುಂದೆ ಕುಳಿತು ರೋಧಿಸುತ್ತೀರುವ ಸನ್ನಿವೇಶ ಎಂತವರ ಕರಳು ಕೂಡ ಹಿಂಡುವಂತೆ ಮಾಡಿತ್ತು, ಇನ್ನೂ ಮೃತರ ಸಂಬಂಧಿಕರು ಕೂಡ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

10.ಲಿಂಗಾಯತ ಸ್ವತಂತ್ರ ಧರ್ಮ ವಿಚಾರವನ್ನು, ಲೋಕಸಭೆ ಚುನಾವಣೆ ಮುಗಿಯುವ ವರೆಗೂ ಶಾಂತವಾಗಿರಲು ನಿರ್ಧಾರ ಮಾಡಿದ್ದೆವೆ ಎಂದು ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಎಮ್.ಬಿ. ಪಾಟೀಲ್ ಹೇಳಿದ್ದಾರೆ.ವಿಜಯಪುರ ನಗರದಲ್ಲಿ ಶನಿವಾರ ಮಾತನಾಡಿದ ಅವರು, ನಾವು ಬಸವ ಧರ್ಮದವರು , ಮುಹೂರ್ತ ನೋಡುವವರಲ್ಲ‌ ಮೂಹೂರ್ತದ ಮೇಲೆ ನಮಗೆ ನಂಬಿಕೆ ಇಲ್ಲ, ಲಿಂಗಾಯತ ಸ್ವತಂತ್ರ ಧರ್ಮ ವಿಚಾರವನ್ನು ಲೋಕಸಭೆ ಚುನಾವಣೆವರೆಗೆ ಶಾಂತವಾಗಿರಲು ನಿರ್ಧಾರ ಮಾಡಿದ್ದೆವೆ. ಕೇಂದ್ರ ಸರಕಾರ ಪ್ರಸ್ತಾವ ತಿರಸ್ಕರಿಸಿರುವುದು ಸಮಂಜಸವಲ್ಲ, ಈಗ ಹೋರಾಟ ಮಾಡಿದರೆ ಅದಕ್ಕೆ ಬೇರೆ ರೀತಿಯ ಅರ್ಥ ಕೊಡ್ತಾರೆ .ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಳಿಕ ನಿರ್ಣಾಯಕ ಹೋರಾಟ ಮಾಡುವುದರ ಬಗ್ಗೆ ಯೋಚಿಸಲಾಗುವುದು ಎಂದರು.

11.ಘಟನೆ ನಡೆದಿರೋದು ದೊಡ್ಡ ದುರಂತ. ಏನೂ ತಪ್ಪು ಮಾಡದ ಅಮಾಯಕರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ತಪ್ಪು ಯಾರೆ ಮಾಡಿದ್ದರೂ ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಚಾಮರಾಜನಗರ ದೇವಸ್ಥಾನದಲ್ಲಿ ನೀಡಲಾದ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿರುವ ನಾಗರೀಕರನ್ನು ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಅವರು, ವಿಷದ ಅಂಶ ಹೊಟ್ಟೆಯೊಳಗೆ ಸೇರಿರುವ ಕಾರಣ ರೋಗಿಗಳು ಹೊರಳಾಡೋದು, ನರಳಾಡೋದು ಮಾಡ್ತಿದ್ದಾರೆ. ಆದರೆ ದೇವರ ಪ್ರಸಾದದಲ್ಲಿ ವಿಷ ಹಾಕೋದು ಅಂದ್ರೆ ಇದು ದುರಂತ. ಪಂಚಾಮೃತ ಹಾಗೂ ಬಾತ್‌ನಲ್ಲಿ ವಿಷ ಹಾಕಲಾಗಿದೆ. ಇದು ಫುಡ್ ಪಾಯಿಸನ್‌ನಿಂದ ಆಗಿರೋದಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

12.ಚಾಮರಾಜನಗರದ ಹನೂರು ತಾಲೂಕಿನ ಸುಳವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ 10 ಮಂದಿ ಭಕ್ತರು ಮೃತಪಟ್ಟು, 80ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಆಘಾತಕಾರಿ ಘಟನೆಯಿಂದ ಚಾಮರಾಜನಗರದಲ್ಲಿ ಸೂತಕದ ಛಾಯೆ ಮೂಡಿದೆ.ದೇವರ ಪ್ರಸಾದ ಸೇವನೆ ದುರಂತದಿಂದ ಇಡೀ ರಾಜ್ಯಕ್ಕೆ ಆಘಾತಕವಾಗಿದ್ದು, ಗಣ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಣೆಗೆ ದೌಡಾಯಿಸುತ್ತಿದ್ದಾರೆ.

13.ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಎನ್​ಕೌಂಟರ್ನಲ್ಲಿ ಮೂವರು ಉಗ್ರರನ್ನು ಹೊಡೆದುರಳಿಸಲಾಗಿದೆ. ಇದೇ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಯೋಧರ ಗುಂಡಿಗೆ 7 ನಗರೀಕರು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.ಪುಲ್ವಾಮಾ ಜಿಲ್ಲೆಯ ಸಿರ್ನೊ ಗ್ರಾಮದಲ್ಲಿ ಉಗ್ರರ ಗುಂಡಿಗೆ ಯೋಧನೊಬ್ಬ ಹುತಾತ್ಮನಾಗಿದ್ದ. ಈ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿದ ಸೇನೆ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಯಿತು.

14.ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ...ಹೀಗೆ ಅಧಿವೇಶನಕ್ಕೆ ಮುಖ್ಯಮಂತ್ರಿಗಳಿಂದ ಹಿಡಿದು ರಾಜಕೀಯ ಗಣ್ಯಾತೀಗಣ್ಯರು ಕುಂದಾನಗರಿಯಲ್ಲಿ ಠಿಕಾಣಿ ಹೊಡಿದ್ದಾರೆ...ಹೀಗೆ ಜೆಡಿಎಸ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಓಲೈಸಿಕೊಳ್ಳಲು ಶಾಸಕರು, ಪಕ್ಷದ ಮುಖಂಡರ ಕುಂದಾನಗರಿ ತುಂಬಾ ತಮ್ಮ ತಮ್ಮ ನೆಚ್ಚಿನ ನಾಯಕರಿಗೆ ಸ್ವಾಗತ ಎಂದು ಕಟೌಟ್ ಮತ್ತು ಬ್ಯಾನರಗಳನ್ನ ಅಳವಡಿಸಲಾಗಿದೆ...ಅಧಿವೇಶನಕ್ಕೂ ಮೊದಲೇ ಸಭಾಪತಿಗಳು ಮತ್ತು ಸದನದಲ್ಲಿಯೇ ಸ್ಪೀಕರ ರಮೇಶಕುಮಾರ ಅವರೇ 24 ಗಂಟೆಗಳಲ್ಲಿ ಬ್ಯಾನರಗಳನ್ನ ತೆರವುಗೊಳಿಸುವಂತೆ ಸೂಚಿಸಿದ್ದಾರೆ.

15.1994 ರಲ್ಲಿ ಆರಂಭಗೊಡ ಸುಕೋ ಬ್ಯಾಂಕ್ ಇದೀಗ ೨೫ ನೇಯ ವರ್ಷಾಚರಣೆಯ ಸಂಭ್ರಮದಲ್ಲಿದೆ.ಹೀಗಾಗಿ ವರ್ಷವೀಡಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಅಂಥಾ ಬ್ಯಾಂಕಿನ ಚೇರ್ಮನ್ ಮೋಹಿತ್ ಮಸ್ಕಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗಾಗಿ ವರ್ಷವೀಡಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ರಜತ ಮಹೋತ್ಸವದ ಮೊದಲನೇಯ ಕಾರ್ಯಕ್ರಮ ನೂತನ ವರ್ಷದಲ್ಲಿ ಆರಂಭವಾಗಲಿದೆ. ಜನೇವರಿ ಐದರಂದು ನಗರದಲ್ಲಿ ಮ್ಯಾರಥಾನ್ ಓಟವನ್ನು ಆಯೋಜಿಸಿದೆ. ಅಲ್ಲದೇ ಬರಗೆದ್ದ ರೈತರಿಗೆ ಪ್ರಶಸ್ತಿಯನ್ನು ಕೂಡಾ ಇದೇ ಸಮಯದಲ್ಲಿ ನೀಡಿ ಗೌರವಿಸಲಾಗುತ್ತದೆ. ಅಲ್ಲದೇ ಮರೆತುಹೋದ ಅಡುಗೆಗಳ ವಿಶೇಷ ಅಡುಗೆ ಸ್ಪರ್ಧೆಯನ್ನು ಕೂಡಾ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಚಿತ್ರನಟ ಸಿಹಿ-ಕಹಿ ಚಂದ್ರು. ಬಳ್ಳಾರಿಯ ಉದ್ಯಮಿ ಮರ್ಚಡ್ ಮಲ್ಲಿಕಾರ್ಜುನ ಗೌಡ ಹಾಗೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಭಾಗಿಯಾಗಲಿದ್ದಾರೆ. ಅಂಥಾ ಅವರು ಹೇಳಿದರು.

16.ಬಹು ಬೇಡಿಕೆಯ ಉಡ ಹಾಗೂ ಚಿಪ್ಪು ಹಂದಿಯ ಬಿಡಿ ಭಾಗಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನ ಅರಣ್ಯಾಧಿಕಾರಿಗಳು ಬಂಧಿಸಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ಆರ್ ಎಫ್ ಓ ಶಿಲ್ಪಾ ಗ್ರಾಹಕರ ಸೋಗಿನಲ್ಲಿ ದಾಳಿ ಮಾಡಿ ಇಬ್ಬರನ್ನ ಚಿಪ್ಪು ಹಂದಿ ಬಿಡಿ ಭಾಗ ಮತ್ತು ಉಡ ಪ್ರಾಣಿಯ ಗುಪ್ತಾಂಗ ಭಾಗಗಳನ್ನ ಮಾರಾಟ ಮಾಡಲು ಯತ್ನಿಸಿದ್ದಾಗ ದಾಳಿ ಮಾಡಿ ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆ ಶಹಪುರ ಮೂಲದ ರಾಮು ಹಾಗೂ ವೆಂಕಟೇಶ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಹತ್ತಾರು ಉಡದ ಗುಪ್ತಾಂಗ ಭಾಗ, ಮೂರು ಚಿಪ್ಪು ಹಂದಿ ಬಿಡಿ ಭಾಗವನ್ನ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಉಡ ಪ್ರಾಣಿಯ ಗುಪ್ತಾಂಗ ಭಾಗಕ್ಕೆ ಮಾರುಕಟ್ಟೆ ಭಾರೀ ಬೇಡಿಕೆಯಿದ್ದು ಮಾಟ, ಮಂತ್ರ ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳೋಕೆ ಈ ಭಾಗಗಳನ್ನ ಬಳಸುತ್ತಾರೆ. ಈ ಸಂಬಂಧ ಚಿಕ್ಕಮಗಳೂರು ವಲಯದಲ್ಲಿ ಪ್ರಕರಣ ದಾಖಲಾಗಿದೆ.

17.ಗದಗ ಜಿಲ್ಲಾಡಳಿತ ಭವನದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಮಾಹಿತಿ ಕ್ರೀಯಾ ಯೋಜನೆಯ ಕಾರ್ಯಗಾರ ನಡೆಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಅವರು ಸಸ್ಯಿಗೆ ನೀರುನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ, ಜಿಪಂ ಸಿಇಓ ಮಂಜುನಾಥ ಚವ್ಹಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮಕೃಷ್ಣ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಮಕ್ಕಳು ಸಹ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

18.ತಲವಾರ್ ಸಮೇತ ಬಂದ ಖತರನಾಕ್ ಗ್ಯಾಂಗೊಂದು ದಾಲ್ ಮಿಲ್ ಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಿದ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ..ನಗರದ ಬಸವೇಶ್ವರ ದಾಲ್ ಮಿಲ್ ಗೆ ರಾತ್ರಿ ನುಗ್ಗಿದ ಆರೇಳು ದರೋಡೆಕೋರರ ತಂಡ ಮಲಗಿದ್ದ ಸಿಬ್ಬಂದಿಯನ್ನ ಎಬ್ಬಿಸಿ ಹಲ್ಲೆ ಮಾಡಿದೆ..ನಂತ್ರ ಕೌಂಟರ್ ನಲ್ಲಿದ್ದ ಹಣ ತಗೊಂಡು ಎಸ್ಕೇಪ್ ಆಗಿದೆ..ಇದೇವೇಳೆ ಮಿಲ್ ಹೊರಗಡಯ ಟೀ ಅಂಗಡಿ ಬಳಿಯೂ ದರೋಡೆ ನಡೆಸಿದೆ..ಗಾಯಗೊಂಡ ಮಿಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ..ವಿವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ..ಆದ್ರೆ ದರೋಡೆಕೋರರರು ಸಿಸಿಟಿವಿ ಡಿವಿಆರ್ ಕಿತ್ಕೊಂಡು ಹೋಗಿದ್ದು ತನಿಖೆಗೆ ಅಡ್ಡಿಯಾಗಿದೆ.

19.ದೂರದರ್ಶನ ಮತ್ತು ಕೇಬಲ್ ಸಂಪರ್ಕಗಳಿಗೆ ಸಂಭಂದಿಸಿದ ಕೇಂದ್ರ ಸರ್ಕಾರದ ನೂತನ ಟ್ರಾಯ್ ನೀತಿ ವಿರೋಧಿಸಿ ಇಂದು ಹಾಸನದಲ್ಲಿ ಪ್ರತಿಭಟನೆ ನಡೆಯಿತು.ಹಾಸನ ಕೇಬಲ್ ಆಪರೇಟರ್ಗಳ ಕ್ಷೇಮಾಭಿವೃದ್ದಿ ಸಘದ ನೇತ್ರತ್ವದಲ್ಲಿ ನಡೆದ ಈ ಪ್ರತಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತವಾಯಿತು.ನಗರದ ಹೇಮಾವತಿ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಧಿಕಾರಿ ಕಚೇರಿಗೆ ಬಂದು ತಮ್ಮ ಮನವಿ ಸಲ್ಲಿಸಿದರು.ನೂತನ ನೀತಿಯಿಂದಾಗಿ ಕೇಬಲ್ ಆಪರೇಟರ್ಗಳು ಮತ್ತು ಕೇಬಲ್ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ.ಕೇಬಲ್ ಆಪರೇಟರ್ಗಳು ತೀವೃ ತೊಂದರೆ ಅನುಭವಿಸುವಂತಾಗುತ್ತದೆ.ಈ ನೀತಿಯನ್ನು ಪುನರ್ಪರಿಶೀಲನೆ ಮಾಡಿ ಪ್ರತಿಭಟನಾ ಕಾರರು ಆಗ್ರಹಿಸಿದ್ದು,ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಮತ್ತು ದೆಹಲಿ ಚಲೋ ಮಾಡುವುದಾಗಿ ಎಚ್ಚರಿಸಿದ್ದಾರೆ.

20.ಕೊಪ್ಪಳ ಜಿಲ್ಲಾಧಿಕಾರಿ ವಿರುದ್ದ ಸದನದಲ್ಲಿ ಬಿಜೆಪಿ ಶಾಸಕರ ಅಪಸ್ವರ ಎತ್ತಿದ್ದನ್ನ ವಿರೋಧಿಸಿ ಕೊಪ್ಪಳದಲ್ಲಿ ಪ್ರಗತಿ ಪರ ಸಂಘಟನೆಯಿಂದ ಪ್ರತಿಭಟನೆ ನಡೆಸಿದ್ರು. ನಗರದ ಗಂಜ್ ವೃತ್ತದಲ್ಲಿ ಪ್ರಗತಿಪರ ಮುಖಂಡರು ಜಿಲ್ಲಾಧಿಕಾರಿ ವರ್ಗಾವಣೆ ಹುನ್ನಾರ ಖಂಡಿಸಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.ಕೊಪ್ಪಳ ಜಿಲ್ಲಾಧಿಕಾರಿ ಜಿಲ್ಲೆಗೆ ಬಂದ ತಕ್ಷಣ ಒಳ್ಳೆಯ ಕೆಲಸ ಮಾಡುತ್ತಿದ್ದು,ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ,ಆದ್ರೆ ಶಾಸಕರು ಜಿಲ್ಲಾಧಿಕಾರಿ ವಿರುದ್ದವೇ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿ ಪ್ರಗತಿ ಪರ ಮುಖಂಡರು ಶಾಸಕರ ವಿರುದ್ದ ದಿಕ್ಕಾರ ಕೂಗಿದರು.

21.ಕೊಪ್ಪಳ ಹೊರವಲಯದಲ್ಲಿರೋ ಹುಲಿಕೇರಿಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಇಂದು ಬಾಗೀನ ಅರ್ಪಿಸಿದ್ರು.ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸಿದ ಹಿನ್ನಲೆ ಶಾಸಕರು ಇಂದು ಬಾಗೀನ ಅರ್ಪಣೆ ಮಾಡಿದ್ರು.ಕೊಪ್ಪಳದ ನಗರದ ಜನತೆಗೆ ಕುಡಿಯೋ ನೀರಿಗಾಗಿ ಅನಕೂಲಕ್ಕಾಗಿ ತುಂಗಭದ್ರಾ ಜಲಾಶಯದಿಂದ ನೀರು ಹರಿಸಿ ಹುಲಿಕೇರಿಯನ್ನ ತುಂಬಿಸಲಾಗಿದೆ.ಹುಲಿಕೇರಿ ಭರ್ತಿಯಾದ ಹಿನ್ನಲೆ ಕೊಪ್ಪಳ ಜನರ ನೀರಿನ ಹಾಹಾಕಾರ ತಪ್ಪಲಿದೆ.ಜನರಿಗೆ ನೀರಿನ ಬವಣೆ ತಪ್ಪಿಸಲು ಹುಲಿಕೇರಿ ತುಂಬಿಸಲಾಗಿದೆ ಎಂದು ಬಾಗೀನ ಅರ್ಪಿಸಿ ಶಾಸಕರು ಹೇಳಿದರು.

22.ಭಕ್ತಿ ಅಂದರೇನೆ ಹಾಗೆ. ಭಕ್ತಿಯಲ್ಲಿ ಲೀನವಾದರೆ ಮುಳ್ಳು ಸಹ ಹೂವಿನಂತೆ ಭಾಸವಾಗುತ್ತದೆ ಎಂಬ ಮಾತಿದೆ. ಈ ಮಾತಿಗೆ ಒಪ್ಪುವ ರೀತಿಯಲ್ಲಿ ಇಲ್ಲೊಂದು ಆಚರಣೆ ನಡೆಯುತ್ತದೆ. ರಾಶಿ ರಾಶಿ ಮುಳ್ಳಿನ ಕಂಟಿಯಲ್ಲಿ ಕಟ್ಟಡ ಮೇಲಿಂದ ಭಕ್ತರು ಬೀಳುವ ಆ ಪರಿ ನೋಡಿದರೆ ಮೈಝುಮ್ ಎನ್ನುತ್ತಿತ್ತು. ಹೌದು ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ. ಪ್ರತಿ ವರ್ಷವೂ ಮಾರುತೇಶ್ವರ ಕಾರ್ತಿಕೋತ್ಸವ ನಡೆಯುತ್ತದೆ. ಮುಳ್ಳಿನ ಜಾತ್ರೆ ಎಂದು ಕರೆಯುವ ಈ ಜಾತ್ರೆಯಲ್ಲಿ ರಾಶಿ ರಾಶಿ ಮುಳ್ಳಿನ ಕಂಟಿಯ ಮೇಲೆ ಹಾರುವುದು ಪ್ರಮುಖ ಆಕರ್ಷಣೆ. ಈ ವರ್ಷವೂ ಪ್ರತಿವರ್ಷಕ್ಕಿಂತ ಈ ವರ್ಷ ಇನ್ನಷ್ಟೂ ಈ ಆಚರಣೆ ಜೋರಾಗಿ ನಡೆಯಿತು. ಬೇಡಿಕೊಂಡ ಭಕ್ತರು ಮುಳ್ಳಿನ ಕಂಟಿಯ ರಾಶಿಯ ಮೇಲೆ ಬಿದ್ದು ತಮ್ಮ ಹರಕೆ ತೀರಿಸಿದರು. ಕೆಲ ಯುವಕರಂತೂ ಮನೆಯ ಮಾಳಿಗೆಯಿಂದ ಮುಳ್ಳಿನ ರಾಶಿಯ ಮೇಲೆ ಬೀಳುತ್ತಿದ್ದ ಪರಿಯನ್ನು ನೋಡಿದರೆ ಮೈ ಜುಮ್ ಎನ್ನುವಂತಿತ್ತು.

23.ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ 5 ಮತ್ತು6 ನೇ ಘಟಕ ನಿರ್ಮಾಣ ಸಂಭಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೈಗಾದಲ್ಲಿ 5 ಮತ್ತು 6 ನೇ ಘಟಕ ನಿರ್ಮಾಣ ಸಂಭಂದ ಇಂದು ಸಾರ್ವಜನಿಕ ಸಭೆಯನ್ನ ಪರಿಸರ ಮಾಲಿನ್ಯ ಇಲಾಖೆ ಹಾಗೂ ಕೈಗಾ ಘಟಕದವರು ಹಮ್ಮಿಕೊಂಡಿದೆ. ಆದ್ರೆ ಕೈಗಾ ಟೌನ್ ಶಿಪ್ ಆವರಣದಲ್ಲಿ ಸಭೆಯನ್ನ ಹಮ್ಮಿಕೊಳ್ಳುತ್ತಿದ್ದು ತಾವು ಕೈಗಾ ಆವರಣದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಲುವುದಿಲ್ಲ ಎಂದು ಸಾರ್ವಜನಿಕರು ಬೃಹತ್ ಪ್ರತಿಭಟನೆಯನ್ನ ನಡೆಸಿದ್ದಾರೆ. ಮಲ್ಲಾಪುರ ಗ್ರಾಮದಿಂದ ಟೌನ್ ಶಿಪ್ ವರೆಗೆ ಪ್ರತಿಭಟನೆಯನ್ನ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ 5 ಮತ್ತು 6 ನೇ ಘಟಕ ನಿರ್ಮಾಣ ಮಾಡಬಾರದು, ಅಲ್ಲದೇ ಈಗಿರುವ ನಾಲ್ಕು ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಿಕೊಡಬೇಕು ಹಾಗೂ ಸ್ಥಳೀಯರ ಸಮಸ್ಯೆಯನ್ನ ಬಗೆಹರಿಸಬೇಕು ಅಂತಾ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

24.ಮಡಿಕೇರಿಯ ಪತ್ರಿಕಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂ ವಿಜ್ಞಾನಿ ಡಾ. ರವಿ ಕುಮಾರ್ ಭೂ ಕುಸಿತದ ಕಾರಣಗಳ ಕುರಿತು ಮಾಹಿತಿ ನೀಡಿದರು. 2018 ಜುಲೈ 9 ರಂದು ಮಡಿಕೆೇರಿ ವಿಭಾಗದಲ್ಲಿ ಭೂ ಕಂಪನವಾಗಿತ್ತು. ಇದರ ತೀವ್ರತೆ 3.4 ಎಂದು ರಿಕ್ಟರ್ ಮಾಪಕದಲ್ಲಿ ಕಂಡು ಬಂದಿದೆ. ಭೂ ಕಂಪನವು ಒಂದು ತಿಂಗಳ ನಂತರ ನಡೆದ ಭೂ ಕುಸಿತಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಜೂನ್ನಿಂದ ಸೆಪ್ಟೆಂಬರ್ವರೆಗೆ 3463 ಮಿ.ಮೀ. ಮಳೆ ದಾಖಲಾಗಿದ್ದು, ಸಾಧಾರಣ ಮಳೆಗಿಂತ ಶೇ.59 ರಷ್ಟು ಹೆಚ್ಚಾಗಿದೆ.ಆಗಸ್ಟ್ 13 ರಿಂದ 19ರವರೆಗೆ ಸತತ ಏಳು ದಿನಗಳ ಕಾಲ ಜಿಲ್ಲೆಯಲ್ಲಿ 594.2ಮಿ.ಮೀ. ಮಳೆೆಯಾಗಿದ್ದು, ಇದು ಸಾಧಾರಣ ಮಳೆಗಿಂತ ಶೇ.272 ರಷ್ಟು ಹೆಚ್ಚಾಗಿದೆ. ಇದು ಕೂಡ ಭೂ ಕುಸಿತಕ್ಕೆ ಮೂಲ ಕಾರಣವೆಂದು ಹೇಳಬಹುದಾಗಿದೆ.

25.ವೆಂಟಿಲೇಟರ್ ಹಾಕಿಕೊಂಡು ಮಲಗಿರುವ ಮುಗ್ದ ಜನತೆ. ಕೆ.ಆರ್.ಆಸ್ಪತ್ರೆಗೆ ಆಗಮಿಸುತ್ತಿರುವ ಸಂಬಂದಿಕರ ದಂಡು. ಪಕ್ಷಾತೀತವಾಗಿ ಆಸ್ಪತ್ರೆಗೆ ಆಗಮಿಸಿದ ರಾಜಕೀಯ ಮುಖಂಡರ ದಂಡು. ಹೌದು ಇದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕಂಡು ಬಂದ ದೃಶ್ಯಾವಳಿಗಳು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ ಸೇರಿದಂತೆ ಪಕ್ಷಾತೀತವಾಗಿ ಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.

26.ಬೆಂಗಳೂರು ಹೊನ್ನಾವರ ವಾಹನ ಸವಾರರಿಗೆ ಸಿಹಿಸುದ್ದಿ ಬಂದಿದೆ ಸುಮಾರು 2032ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ನಡೆಯಲಿದೆ ದ್ವಿಪಥದಿಂದ ಚತುಸ್ಪಥದ ಮೇಲ್ದರ್ಜೆಗೆ ಏರಲಿದೆ ಎಂದು ತುಮಕೂರು ಸಂಸದ ಮುದ್ದಹನುಮೆಗೌಡ ಹೇಳಿದ್ದಾರೆ.. ನಾಳೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಅಧಿಕೃಯ ಕಾಮಗಾರಿಗೆ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.. ತುಮಕೂರಿನಿಂದ ಶಿವಮೊಗ್ಗದ ವರೆಗೆ ಒಟ್ಟು ಮೂರು ಹಂತದಲ್ಲಿ ರಸ್ತೆ ಅಗಲೀಕರಣ ನಡೆಯಲಿದೆ.. ಅಲ್ಲದೇ ಟೋಲ್ ವಸೂಲಾತಿಯು ಸಂಗ್ರಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

27.ಯಾದಗಿರಿ ನಗರದಿಂದ ಎರಡು ಕಿಮಿ ದೂರಲ್ಲಿರುವ ಗುರಸಣಗಿ ಬ್ರೀಜ್ ಕಮ್ ಬ್ಯಾರೇಜ್ ಸುತ್ತಲೂ ಯಾವೊಬ್ಬ ರೈತರು ಭತ್ತನಾಟಿ ಮಾಡಬಾರದೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ‌ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾದಗಿರಿ ನಗರ ಸೇರಿದಂತೆ ಗುರುಮೀಠಕಲ್ ಹಾಗೂ ವಿವಿಧ ಹಳ್ಳಿಗಳಿಗೆ ಇಲ್ಲಿಂದಲೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ ಜಿಲ್ಲಾಧಿಕಾರಿಗಳು.

28.ಫ್ಯಾಷನಬಲ್ ಗೆ ಪಂಚ ವರ್ಷ ಸಂಭ್ರಮ. ಬೆಂಗಳೂರಿನ ಎಂಜಿ ರೋಡನಲ್ಲಿರುವ 1ಎಂಜಿ ಲಿಡೊ ಮಾಲ್ನಲ್ಲಿ ಹೊಸ ಸಾಂಸ್ಕøತಿಕ ಟ್ರೆಂಡಿಂಗ್ ವಾತಾವರಣ ಹುಟ್ಟು ಹಾಕಿತ್ತು... ಎಲ್ಲ ವರ್ಗದವರನ್ನು ಸೆಳೆಯುವ, ಸುಲಭ ಯೋಗ್ಯ ಫ್ಯಾಷನ್ ಟ್ರೆಂಡ್ ಹೊಸ ಆಕರ್ಷಣೆ ಈ ವರ್ಷದ ಮಹೋನ್ನತ ಥೀಮ್ ವಿನ್ಯಾಸವಾಗಿ ಮೂಡಿ ಬ್ಲೂಸ್’ ಹೊರ ಹೊಮ್ಮಿದೆ. ಈ ಫ್ಯಾಷನ್ ಉತ್ಸವವನ್ನು ಪ್ರಸಿದ್ಧ ಹೆಸರಾಂತ ಗಣ್ಯ ವಿನ್ಯಾಸಕಾರ ರಮೇಶ್ ಡೆಂಬ್ಲಾ ತಮ್ಮ ಸಂಗ್ರಹದಲ್ಲಿ ಹುಟ್ಟು ಹಾಕಿದ್ದಾರೆ. ಮಹಿಳೆಯರು ಮತ್ತು ಪುರುಷರಿಗೆ ಇಷ್ಟವಾಗುವ ಫ್ಯಾಷನ್ ಟ್ರೆಂಡಿ ವಿನ್ಯಾಸದ ಬಟ್ಟೆಗಳನ್ನು ಸುಂದರ ಮಾಡೆಲ್‍ಗಳು ಧರಿಸಿ ವೇದಿಕೆ ಮೇಲೆ ಹೆಜ್ಜೆ ಹಾಕಿ, ಜನರಿಗೆ ಹೊಸ ವಿನ್ಯಾಸದ ಉಡುಪುಗಳು ಹೇಗೆ ಕಾಣಲಿವೆ ಎಂಬುದರ ನೇರ ಅನುಭವ ನೀಡಿದ್ದರು

29.ಡಿಸೆಂಬರ್ 22ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಡೇಟ್‌ ಫಿಕ್ಸ್‌ ಆಗಿದ್ದು, ಉತ್ತರ ಕರ್ನಾಟಕದ ಶಾಸಕರು ದನಿಎತ್ತಿದ್ದಾರೆ. ಈ ಬಾರಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಅಂತ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ. ಈ ಅಸಮತೋಲನದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ವೇಣುಗೋಪಾಲ, ದಿನೇಶ್‌ ಗುಂಡೂರಾವ್, ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ. ಸಚಿವ ಶಿವಾನಂದ ಪಾಟೀಲ ಕೂಡ ಇದನ್ನೇ ಹೇಳಿದ್ದಾರೆ. ಸಭಾಪತಿ ನೇಮಕದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

30.ಪ್ರಪಂಚದ ವಿವಿಧ ದೇಶಗಳು ಗಾಂಧೀಜಿಯ ತತ್ವ - ಆದರ್ಶಗಳಿಗೆ ಮನ್ನಣೆ ನೀಡಿ ಅವರ ಪ್ರತಿಮೆ ನಿರ್ಮಿಸಿವೆ. ಅಂತಹದೊಂದು ಪ್ರತಿಮೆ ಘಾನಾ ದೇಶದ ರಾಜಧಾನಿ ಅಕ್ರಾದಲ್ಲಿರುವ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲೂ ಇತ್ತು. ಆದ್ರೆ, ಇದೀಗ ಈ ಪ್ರತಿಮೆ ತೆರವುಗೊಳಿಸಲಾಗಿದೆ. 2016ರಲ್ಲಿ ಅಂದಿನ ಭಾರತದ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಘಾನಾ ದೇಶಕ್ಕೆ ಭೇಟಿ ನೀಡಿದ್ದಾಗ ಈ ಪ್ರತಿಮೆ ಅನಾವರಣಗೊಳಿಸಿದ್ದರು. ಗಾಂಧೀಜಿ ಜಾತಿ ವಾದಿ ಆಗಿದ್ದು, ಕ್ಯಾಂಪಸ್‌ನಲ್ಲಿರುವ ಅವರ ಪ್ರತಿಮೆ ತೆರವುಗೊಳಿಸುವಂತೆ ಘಾನಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗಾಂಧೀಜಿ ಪ್ರತಿಮೆ ತೆರವುಗೊಳಿಸಿ, ಆಫ್ರಿಕಾ ಹೀರೋಗಳ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿದ್ದರು. ಈ ವಿವಾದ ತಲೆದೋರುತ್ತಿದ್ದಂತೆಯೇ ಘಾನಾ ಸರ್ಕಾರ ಗಾಂಧೀಜಿ ಪ್ರತಿಮೆ ಸ್ಥಳಾಂತರಿಸಿದೆ. ಗಾಂಧೀಜಿ ಪ್ರತಿಮೆ ತೆರವುಗೊಂಡ ಬಳಿಕ ಆ ಸ್ಥಳದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಸಂಭ್ರಮ ಆಚರಿಸಿದ್ದಾರೆ.

31. ಜಮ್ಮು- ಕಾಶ್ಮೀರದಲ್ಲಿ ಉಗ್ರರ ಎನ್‌ಕೌಂಟರ್ ಸಂದರ್ಭದಲ್ಲಿ ಸ್ಥಳೀಯರು - ಸೇನೆ ನಡುವೆ ಘರ್ಷಣೆ ಸಂಭವಿಸಿದ್ದು, 7 ಮಂದಿ ನಾಗರಿಕರ ಬಲಿಯಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಓಮರ್‌ ಮತ್ತು ಮುಫ್ತಿ ಘಟನೆ ಖಂಡಿಸಿದ್ದಾರೆ.

32.ಪಂಚ ರಾಜ್ಯಗಳ ಚುನಾವಣೆ ಬಳಿಕ ತೃತೀಯ ರಂಗದ ಶಕ್ತಿ ಪ್ರದರ್ಶಕ್ಕೆ ಮತ್ತೊಂದು ವೇದಿಕೆ ಸಿದ್ಧವಾಗಿದೆ. ಕರ್ನಾಟಕದಂತೆಯೇ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಈ ನಡುವೆ ನಾಳೆಯ ಕರುಣಾನಿಧಿ ಪ್ರತಿಮೆ ಅನಾವರಣ ಸಂದರ್ಭದಲ್ಲೂ ಮೋದಿ ವಿರೋಧಿಗಳ ಶಕ್ತಿ ಪ್ರದರ್ಶನವಾಗುವ ಸಾಧ್ಯತೆ ಇದೆ.

33.ವಿವಿಐಪಿ ಹೆಲಿಕಾಪ್ಟರ್​ ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್​ ಮಿಶೆಲ್​ನನ್ನು ಇನ್ನೂ ನಾಲ್ಕು ದಿನ ಸಿಬಿಐ ವಶಕ್ಕೆ ನೀಡಿ ಪಟಿಯಾಲ ಹೌಸ್​ ಕೋರ್ಟ್​ ಇಂದು ಆದೇಶಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಕೋರ್ಟ್ ಡಿಸೆಂಬರ್‌ 19ಕ್ಕೆ ಮುಂದೂಡಿದೆ. ಹಗರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳಿಂದಲೂ ಮಿಶೆಲ್​ ಪರವಾಗಿ ಇಟಲಿ ಮತ್ತು ಸ್ವಿಟ್ಜರ್​ಲೆಂಡ್​ನಲ್ಲಿ ವಕಾಲತ್ತು ವಹಿಸುತ್ತಿದ್ದ ವಕೀಲೆ ರೋಸ್​ ಮೇರಿ ಪಟಿಯಾಲ ಕೋರ್ಟ್​ಗೂ ಹಾಜರಾಗಿದ್ದರು. ಅವರಿಗೆ ಮಾತನಾಡಲು ಕೋರ್ಟ್​ 10 ನಿಮಿಷಗಳ ಸಮಯ ನೀಡಿತು. ಆದರೆ, ಸಿಬಿಐ ವಶದಲ್ಲಿರುವ ಮಿಶೆಲ್​ ಅವರನ್ನು ಭೇಟಿ ಮಾಡಬೇಕು ಎಂಬ ರೋಸ್​ಮೇರಿ ಅವರ ಮನವಿಯನ್ನು ಕೋರ್ಟ್​ ನಿರಾಕರಿಸಿತು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಕೀಲೆ ರೋಸ್​ಮೇರಿ ಪ್ಯಾಟ್ರಿಜಿ, ಮಿಶೆಲ್​ ಬಗ್ಗೆ ನನಗೆ ಸಾಕಷ್ಟು ತಿಳಿದಿರುವ ಕಾರಣಕ್ಕೆ ಸಿಬಿಐ ನನ್ನನ್ನು ಬಂಧಿಸುವ ಆತಂಕವಿದೆ. ಅಂಥ ಯಾವುದೇ ಪ್ರಸಂಗ ನಡೆಯದೇ ಇರುವು ವಿಶ್ವಾಸ ನನ್ನದು. ನಾನು ಮಿಶೆಲ್​ಗೆ ನೆರವಾಗಲಷ್ಟೇ ಬಂದಿದ್ದೇನೆ. ಕ್ರಿಸ್​ಮಸ್​ ಹೊತ್ತಿಗೆ ನಾನು ನನ್ನ ತಾಯ್ನಾಡಿಗೆ ಹೊರಡುವ ವಿಶ್ವಾಸವಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

34.ಮಿಜೋರಾಂ​ನ ನೂತನ ಮುಖ್ಯಮಂತ್ರಿಯಾಗಿ ಮಿಜೋ ನ್ಯಾಷನಲ್​ ಫ್ರಂಟ್ ಮುಖ್ಯಸ್ಥ ಜೊರಾಮ್‌ಥಂಗಾ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಧಾನಿ ಐಜ್ವಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜಶೇಖರನ್ ಪ್ರತಿಜ್ಞಾವಿಧಿ ಬೋಧಿಸಿದರು. ಜೊರಾಮ್‌ಥಂಗಾ ಮೂರನೇ ಬಾರಿಗೆ ಮಿಜೋರಾಂ ಮುಖ್ಯಮಂತ್ರಿಯಾಗಿದ್ದು, ಇದಕ್ಕೂ ಮೊದಲು 1998ರಿಂದ 2008ರವರೆಗೆ ಸತತ ಎರಡು ಅವಧಿಗೆ ಸಿಎಂ ಆಗಿದ್ದರು. ಡಿಸೆಂಬರ್ 11ರಂದು ಹೊರಬಿದ್ದಿದ್ದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಆಡಳಿತಾರೂಢ ಕಾಂಗ್ರೆಸ್​ ವಿರುದ್ಧ ಎಂಎನ್‌ಎಫ್‌ ಭರ್ಜರಿ ಗೆಲುವು ಸಾಧಿಸಿತ್ತು. 40 ಕ್ಷೇತ್ರಗಳ ಪೈಕಿ 26ರಲ್ಲಿ ಎಂಎನ್​ಎಫ್ ಜಯಗಳಿಸಿ ಸರಳ ಬಹುಮತ ಪಡೆದಿದೆ.

35.ರಫೇಲ್‌ ಹಗರಣ ಆರೋಪ ಸಂಬಂಧ ಸುಪ್ರೀಂಕೋರ್ಟ್‌ ತೀರ್ಪು ಬೆನ್ನಲ್ಲೇ ಸಿಎಜಿ ವರದಿ ಬಗ್ಗೆ ಹಲವು ಅನುಮಾನ ವ್ಯಕ್ತವಾಗುತ್ತಿವೆ. ಕಾಂಗ್ರೆಸ್‌ ಶಂಕೆ ವ್ಯಕ್ತಪಡಿಸಿದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ತೀರ್ಪಿನಲ್ಲಿರುವ ದೋಷ ಸರಿಪಡಿಸುವಂತೆ ಸುಪ್ರೀಂಕೋರ್ಟ್‌ಗೆ ಇಂದು ಅರ್ಜಿ ಸಲ್ಲಿಸಿದೆ.

36.ಕೊನೆಗೂ ಶ್ರೀಲಂಕಾದ ಪ್ರಧಾನಿ ಹುದ್ದೆಗೆ ಮಹೀಂದ್ರ ರಾಜಪಕ್ಸೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ವಿವಾದಿತ ನಿರ್ಧಾರದ ಜಟಾಪಟಿ ಅಂತ್ಯಗೊಂಡಂತಾಗಿದೆ. ರಾನಿಲ್ ವಿಕ್ರಮಸಿಂಘೆ ಹಾದಿ ಸುಗಮವಾದಂತಾಗಿದ್ದು, ನಾಳೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಅಕ್ಟೋಬರ್ 26ರಂದು ರಾಜಪಕ್ಸೆಯನ್ನು ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಇದು ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿತ್ತು. ಈ ಪ್ರಕರಣ ಶ್ರೀಲಂಕಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸಾಂವಿಧಾನಿಕ ಬಿಕ್ಕಟ್ಟಿನ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಅಧ್ಯಕ್ಷ ಸಿರಿಸೇನಾ ಅವರ ಕ್ರಮ ಕಾನೂನುಬಾಹಿರ ಎಂದು ಘೋಷಿಸುವ ಮೂಲಕ ವಿಕ್ರಮಸಿಂಘೆ ಅವರ ಆಯ್ಕೆ ಎತ್ತಿಹಿಡಿದಿತ್ತು. ಶುಕ್ರವಾರ ಮತ್ತೆ ರಾಜಪಕ್ಸೆ ಕುರಿತಂತೆ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ಕಾನೂನು ಸಮರದಲ್ಲಿ ಸೋಲು ಕಂಡ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

37.ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು ಹಾಗೂ ಇಂಧನ ಕ್ಷೇತ್ರಗಳಲ್ಲಿ ಫ್ರಾನ್ಸ್‌ ಮತ್ತು ಭಾರತ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌ ಯುವೆಸ್‌ ಲೆ ಡ್ರಿಯನ್‌ ಮಾತುಕತೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ. ಎರಡು ರಾಷ್ಟ್ರಗಳ ನಡುವಿನ ಮಾತುಕತೆಯೂ ಫಲಪ್ರದವಾಗಿದೆ. ಪರಸ್ಪರ ಸಹಕಾರದಿಂದ ಹೆಚ್ಚು ನಿಕಟದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆಗೆ ಒತ್ತು ನೀಡಿದ್ದೇವೆ. ಇಂಡೋ- ಫೆಸಿಫಿಕ್‌ ಭಾಗದಲ್ಲಿ ಎರಡು ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದು, ಇದರಿಂದ ಈ ಭಾಗದ ಇತರೆ ರಾಷ್ಟ್ರಗಳಿಗೂ ನೆರವಾಗಲಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದರು. ರಫೇಲ್‌ ಯುದ್ಧ ವಿಮಾನ ಖರೀದಿ ವಿವಾದ ಸಂದರ್ಭದಲ್ಲೇ ಫ್ರಾನ್ಸ್‌ನ ವಿದೇಶಾಂಗ ಸಚಿವರ ಭೇಟಿ ಮಹತ್ವ ಪಡೆದುಕೊಂಡಿದೆ. ಉಭಯ ನಾಯಕರ ಭೇಟಿ ವೇಳೆ ರಫೇಲ್‌ ಕುರಿತಂತೆ ಯಾವುದೇ ಚರ್ಚೆಯಾಗಿಲ್ಲ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

38.ಗುಜರಾತ್​ನಲ್ಲಿ ಜಗತ್ತಿನ ಎತ್ತರದ ಪಟೇಲ್​ ಪ್ರತಿಮೆ ಅನಾವರಣಗೊಳ್ಳುತ್ತಲೇ ದೇಶದಲ್ಲಿ ಪ್ರತಿಮೆಗಳ ಪರ್ವ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿಯದ್ದೇ ಸರ್ಕಾರವಿರುವ ಉತ್ತರ ಪ್ರದೇಶದಲ್ಲೇ ಅಂಥ ನಾಲ್ಕು ಪ್ರತಿಮೆಗಳು ನಿರ್ಮಾಣವಾಗುತ್ತಿವೆ. ಅದರೆ, ಅವೆಲ್ಲವೂ ಪಟೇಲ್​ ಪ್ರತಿಮೆಯಷ್ಟು ಎತ್ತರವಿರುವುದಿಲ್ಲ. 3 ಸಾವಿರ ಕೋಟಿ ರೂಪಾಯಿಯಷ್ಟು ದೊಡ್ಡ ಯೋಜನೆಯೂ ಅಲ್ಲ. ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶ ಸರ್ಕಾರ, ಅಟಲ್​ ಬಿಹಾರಿ ವಾಜಪೇಯಿ, ಸ್ವಾಮಿ ವಿವೇಕಾನಂದ, ನಾಥ ಪರಂಪರೆ ಸ್ವಾಮೀಜಿಗಳಾದ ಮಹಾಂತ್​ ಅವೈದ್ಯ ನಾಥ ಮತ್ತು ಮಹಾಂತ್​ ದಿಗ್ವಿಜಯ ನಾಥ ಅವರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ. 25 ಅಡಿ ಎತ್ತರದ ಅಟಲ್​ಜೀ ಪ್ರತಿಮೆ ಲೋಕಭವನದ ಎದುರು, ವಿವೇಕಾನಂದರ ಪ್ರತಿಮೆ ರಾಜಭವನದ ಎದುರು ತಲೆಎತ್ತಲಿವೆ. ಘೋರಕ್​ಪುರದಲ್ಲಿ 12.5 ಅಡಿ ಎತ್ತರದ ಮಹಾಂತ್​ ಅವೈದ್ಯ ನಾಥ​ ಮತ್ತು ಮಹಾಂತ್​ ದಿಗ್ವಿಜಯ ನಾಥ​ ಅವರ ಪ್ರತಿಮೆಗಳು ಸ್ಥಾಪನೆಯಾಗಲಿವೆ. ಈ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಟೀಕಿಸಿರುವ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್​ ಯಾದವ್​, ಮುಖ್ಯಮಂತ್ರಿಗಳು ಅಭಿವೃದ್ಧಿ ಮತ್ತು ಕೆಲಸ ಕಾರ್ಯಗಳ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದ್ದಾರೆ.

39.ಜ್ಞಾನ ಭಾರತಿ, ಸೆಂಟ್ರಲ್‌ ಕಾಲೇಜು ಮತ್ತು ಕೋಲಾರದ ಪಿ.ಜಿ.ಕೇಂದ್ರ ಸೇರಿದಂತೆ ವಿಶ್ವವಿದ್ಯಾಲಯ ವ್ಯಾಪ್ತಿಗೆ 1,210 ಎಕರೆ ಪ್ರದೇಶ ಸೇರಿದೆ. ಈ ಪೈಕಿ 236 ಎಕರೆ ಪ್ರದೇಶ ಬೆಂಗಳೂರು ವಿವಿ ಮತ್ತು ಸರ್ಕಾರದ ನಡುವಿನ ವಾಜ್ಯದಲ್ಲಿ ಸಿಲುಕಿದ್ದು, ಉಳಿದಂತೆ 29 ಎಕರೆ ಪ್ರದೇಶ ಖಾಸಗಿ ಸಂಸ್ಥೆಗಳು, ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಇದೀಗ 112 ಎಕರೆ ಪ್ರದೇಶದಲ್ಲಿ ಹಲವು ನೂತನ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದೆ.. ಕೇಂದ್ರ ಸರ್ಕಾರದ ಜೊತೆಗೂಡಿ ಕೆಲವು ಸಂಶೋಧನಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಜೊತೆಗೆ ವಿಶ್ವವಿದ್ಯಾಲಯವೇ ಕೆಲವು ವಿಭಾಗಗಳ ಉನ್ನತೀಕರಣಕ್ಕಾಗಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

40.ಬಿಡಿಎ ನಲ್ಲಿ ಬೋರ್ಡ್ ಮೀಟಿಂಗ್ ಅನ್ನೋದೇ ಸರಿಯಾಗಿ ನಡೀತಿರ್ಲಿಲ್ಲ. ಡಿಸಿಎಂ ಪರಮೇಶ್ವರ್ ಬಿಡಿಎ ಅಧ್ಯಕ್ಷರಾದ ಬಳಿಕ ಮೂರು ತಿಂಗಳಲ್ಲಿ ಎರಡು ಬೋರ್ಡ್ ಮೀಟಿಂಗ್ ಮಾಡಿದ್ರು. ಈ ಮೊದಲು ಬೋರ್ಡ್ ಮೀಟಿಂಗ್ ಮೂರು ತಿಂಗಳ ಬದಲಾಗಿ ಇಷ್ಟ ಬಂದಹಾಗೆ ನಡೆಸುತ್ತಿದ್ರು. ಆದ್ರೆ ಇದೀಗ ಕೆಲ ಮಹತ್ವಾಕಾಂಕ್ಷಿ ಯೋಜನೆಗಳೊಂದಿಗೆ ಮೀಟಿಂಗ್ ನಡೆಸಲಾಯ್ತು.

41.ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಕಳೆದ ೧೯ ರಂದು ಎಂಟು ವರ್ಷದ ಬಾಲಕಿಯನ್ನು ಪುಸಲಾಯಿಸಿ ಚಾಕೊಲೇಟ್ ನೀಡುವ ನೆಪದಲ್ಲಿ ೬೫ ವರ್ಷದ ವ್ಯಕ್ತಿ ಗಂಗಾಧರಪ್ಪ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾರವೆಸಗಿದ್ದ. ಇದು ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಈ ಸಂಭಂದ ಚಿಕ್ಕಬಳ್ಳಾಪುರದ ನ್ಯಾಯಲಯ ಐತಿಹಾಸಿಕ ತೀರ್ಪು ನೀಡಿದ್ದು ಪೋಕ್ಸೊ ಪ್ರಕರಣದಲ್ಲಿ ೨೬ ದಿನಗಳಲ್ಲಿ ಜಿಲ್ಲಾ ನ್ಯಾಯದೀಶ ಎಸ್ ಹೆಚ್ ಕೋರಡ್ಡಿರವರಿಂದ ಆರೋಪಿಗೆ ೨೦ ವರ್ಷ ಸೆರೆವಾಸ ನೀಡಿ ಆದೇಶ ಹೊರಡಿಸಿದ್ದಾರೆ‌.

42.ರಾಜ್ಯ ಪೊಲೀಸ್ ವಸತಿ ನಿಗಮದಿಂದ ಸುಮಾರು ೩ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯನ್ನ ಡಿಸಿಎಂ ಪರಮೇಶ್ವರ್‌ ಉದ್ಘಾಟಿಸಿದ್ರು. ಸುಮಾರು 88*55 ರ ವಿಸ್ತೀರ್ಣ ಹೊಂದಿದ್ದು, ಕೇಂದ್ರ ಸಚಿವ ಸದಾನಂದಗೌಡ, ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದರು.

43.ರಸ್ತೆಗಳ ಪಕ್ಕದಲೇ ತಂತಿಬೇಲಿಗಳಿಲ್ಲದೇ, ಕಂಬಳಗಳ ಮೇಲಿನಿಂದ ಕೆಳಗಿನವರೆಗೂ ತಂತಿಗಳು ಜೋಲಾಡುತ್ತಿರೋದು ಕೆ.ಆರ್‌.ಪುರಂ, ಬಸವನಪುರ, ದೇವಸಂದ್ರ ಮುಖ್ಯರಸ್ತೆಗಳಲ್ಲಿ. ಇಲ್ಲಿರೋ ಹತ್ತಾರು ಟ್ರಾನ್ಸ್‌ ಫಾರ್ಮರ್‌ಗಳಿಗೆ ತಂತಿಬೇಲಿ ಹಾಕಿಲ್ಲ. ಈ ರಸ್ತೆಗಳಲ್ಲಿ ಪ್ರತಿದಿನ ಲಕ್ಷಾಂತರ ಜನ ಸಂಚರಿಸುತ್ತಿದ್ದು, ಸಂಬಂದ ಪಟ್ಟ ಬೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ.

44.ನಿನ್ನೆ ಬೆಳಗಾವಿ ಅಧಿವೇಶದಲ್ಲಿ ಮೆಟ್ರೋ ಪಿಲ್ಲರ್‌ ಬಿರುಕು ದೊಡ್ಡ ಸುದ್ದಿಯೇ ಅಲ್ಲ ಎಂದಿದ್ದ ಡಿಸಿಎಂ ಪರಮೇಶ್ವರ್‌ ಇಂದು ಟ್ರಿನಿಟಿ ಬಿಲ್ಡಿಂಗ್‌ ಬಿರುಕಿನ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ರು. ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಹಲಸೂರು ಮೆಟ್ರೋ ಸ್ಟೇಷನ್‌ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿ ಬಳಿಕ ಡಿಸಿಎಂ ಟ್ರಿನಿಟಿ ಸರ್ಕಲ್‌ಗೆ ಆಗಮಿಸಿದ್ರು. ಇದೇವೇಳೆ ಮಾತನಾಡಿದ ಅವ್ರು, ಮೆಟ್ರೋ ಪ್ರಯಾಣಿಕರು ಭಯ ಪಡೋದು ಬೇಡ. ಸಮಸ್ಯೆ ಬಗೆಹರಿಸ್ತಿನಿ ಎಂದರು.

45.ಸಿವಿಲ್ ಪೊಲೀಸ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಸಿಬಿ ಪೊಲೀಸರು A1 ಆರೋಪಿ ಶಿವಕುಮಾರ್‌ನನ್ನ ಜೈಲಿಗಟ್ಟಿದ್ದಾರೆ. ಈತನಿಂದ ಪ್ರಶ್ನೆಪತ್ರಿಕೆ ಖರೀದಿಗೆ ಬಂದಿದ್ದ ಸುಮಾರು ೧೧೯ ಅಭ್ಯರ್ಥಿಗಳು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದ್ರೆ ಕ್ವಶನ್ ಪೇಪರ್ ಲೀಕ್‌ನ ಕಂಪ್ಲೀಟ್ ಮಾಸ್ಟರ್ ಮೈಂಡ್ ಬಸವರಾಜ್ ಸದ್ಯ ನಾಪತ್ತೆಯಾಗಿದ್ದು, ಈತನ ಪತ್ತೆಗಾಗಿ ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದ ತಂಡ ತೀವ್ರ ಹುಡುಕಾಟ ನಡೆಸುತ್ತಿದೆ.

46.ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಅಧಿವೇಶನಕ್ಕೆ ಮುಖ್ಯಮಂತ್ರಿಗಳಿಂದ ಹಿಡಿದು ಜೆಡಿಎಸ್​​​, ಕಾಂಗ್ರೆಸ್​​​, ಬಿಜೆಪಿ ಎಲ್ಲಾ ಪಕ್ಷದ ನಾಯಕರುಗಳೂ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದಾರೆ. ಸಮಸ್ಯೆ ಅಂದ್ರೆ ತಮ್ಮ ನಾಯಕರುಗಳನ್ನ ಓಲೈಸಿಕೊಳ್ಳಲು ಸ್ಥಳೀಯ ಶಾಸಕರು, ಪಕ್ಷದ ಮುಖಂಡರು ಕುಂದಾನಗರಿ ತುಂಬಾ ಸ್ವಾಗತದ ಕಟೌಟ್​​ಗಳು ಮತ್ತು ಬ್ಯಾನರ್​​​ಗಳನ್ನ ಅಳವಡಿಸಿದ್ದಾರೆ.

47.ಯಾರದ್ದೋ ದ್ವೇಷಕ್ಕೆ ಮನುಷ್ಯರು ಮಾತ್ರವಲ್ಲದೇ ಮೂಖ ಪ್ರಾಣಿಪಕ್ಷಿಗಳೂ ಜೀವತೆತ್ತಿವೆ. ದೇಗುಲದ ಆವರಣದಲ್ಲೇ ಕಾಗೆಗಳು ಪ್ರಾಣ ತೆತ್ತಿವೆ. ಸತ್ತ ಪಕ್ಷಿಗಳ ಪರೀಕ್ಷೆ ನಡೆಸಲಿರೋ ಎಫ್​ಎಸ್​ಎಲ್​ ಅಧಿಕಾರಿಗಳು, 1 ಮೈನಾ ಹಾಗೂ 4 ಕಾಗೆಗಳ ಕಳೆಬರವನ್ನ ಕೊಂಡೊಯ್ದಿದ್ದಾರೆ.

48.ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸಿಇಓ‌ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಿದ್ದಿದೆ. ಸಿಇಓ ಅಶ್ವಥಿ, ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷೆ ಜಯಶೀಲಾ ಎಸಿಬಿಗೆ ದೂರು ನೀಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಈಗಾಗಲೇ ಸಿಇಓ ಪರವಾಗಿ ಗ್ರಾಮಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರತಿಭಟನೆ ನಡೆಸಿ ಸಿಇಓಗೆ ಬೆಂಬಲ ಸೂಚಿಸಿದ್ದರು. ಇದರ ಮುಂದುವರೆದ ಭಾಗವಾಗೀ ಜಿಲ್ಲೆಯ ಎಲ್ಲಾ ಪಿಡಿಓಗಳು ಕರ್ತವ್ಯ ಬಹಿಷ್ಕರಿಸಿ ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಅಧ್ಯಕ್ಷರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

49.ಕೃಷಿಗಾಗಿ ನೂರಾರು ರೈತರು ಸೂಪರ್ ಮಾರ್ಕೆಟ್​ನಲ್ಲಿರುವ ಆಂಧ್ರ ಬ್ಯಾಂಕಲ್ಲಿ ಒಂದೊಂದು ಲಕ್ಷ ಸಾಲ ಪಡೆದಿದ್ದಾರೆ. ಅಲ್ಪಸ್ವಲ್ಪ ಸಾಲದ ಹಣವನ್ನ ಬ್ಯಾಂಕ್​ಗೆ ಪಾವತಿಸಿದ್ದಾರೆ ಕೂಡ. ಅಷ್ಟರಲ್ಲಿಯೇ ಸಾಲಮನ್ನಾ ಜಾರಿಯಾಗಿತ್ತು. ಹೀಗಂತ ಅನ್ನದಾತರು ಸುಮ್ಮನಾಗಿದ್ದಾರೆ. ಅಷ್ಟಕ್ಕೆ ತಾಳ್ಮೆ ಕಳೆದುಕೊಂಡ ಬ್ಯಾಂಕ್ 25 ಹಸಿರು ಶ್ರಮಿಕರಿಗೆ ನೋಟಿಸ್ ನೀಡಿ ಬೇಗ ಹಣ ಸೆಟ್ಲ್ ಮಾಡಿ ಅಂತ ವಾರ್ನ್ ಮಾಡಿದೆ. ಬರದಿಂದ ತತ್ತರಿಸಿದ ನಾವು ಹೇಗೆ ಸಾಲ ಕಟ್ಟೋದು ಅಂತ ಸಿಎಂ ಕುಮಾರಸ್ವಾಮಿಗೆ ರೈತರು ಪ್ರಶ್ನೆ ಮಾಡ್ತೀದ್ಧಾರೆ

50.ಹಾಸನದ ಗೌರಿಪುರದ ಛಲದಂಕ ಮಹಿಳೆಯೊಬ್ಬರು ಹತ್ತಾರು ವರ್ಷಗಳ ಹಿಂದೆಯೇ 20 ಎಕರೆ ಬರಡು ಭೂಮೀನ ಇಂದು ಹಸಿರು ನಾಡು ಮಾಡುವುದರಲ್ಲಿ ಸಕ್ಸಸ್ ಆಗಿದ್ದಾರೆ. ಇವರ ಹೆಸರು ಹೇಮಾ.ಮನೆಯಲ್ಲಿ ಶ್ರೀಮಂತಿಕೆ ಇದರು. ಭೂತಾಯಿ ನಂಬಿ ಕೃಷಿ ಆರಂಭಿಸಿ ಯಶಸ್ವಿಯಾಗಿದ್ದಾರೆ. ಮಕ್ಕಳು ಜಪಾನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೇಮಾ ಅವರ ಗಂಡ ರಿಟೈರ್ಡ್ ಎಂಜೀನಿಯರ್. ಆದರೆ ಇವತ್ತಿನ ಕೃಷಿ ಚಟುವಟಿಕೆ ಈ ಕಾಲದ ಯುವಕರನ್ನೇ ನಾಚಿಸುತ್ತದೆ.

Next Story

RELATED STORIES