Top

6 ರಿಂದ 7 ದಿನ ನಮ್ಮ ಮೆಟ್ರೋ ಸ್ಥಗಿತ ಸಾಧ್ಯತೆ?

6 ರಿಂದ 7 ದಿನ ನಮ್ಮ ಮೆಟ್ರೋ ಸ್ಥಗಿತ ಸಾಧ್ಯತೆ?
X

ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರೋವ ಕಾರಣ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ 6ರಿಂದ 7ದಿನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಮೆಟ್ರೋ ಪಿಲ್ಲರ್ ಬೀಮ್ ದುರಸ್ತಿ ವಿಚಾರವಾಗಿ ಎರಡು ದಿನ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ಮೆಟ್ರೋ ಮುಂದಾಗಿದೆ.ಹೀಗಾಗಿ ಮುಂದಿನ ವಾರ ನೇರಳೆ ಮಾರ್ಗದಲ್ಲಿ ಮೆಟ್ರೋ ಸ್ಥಗಿತ ವಾಗಲಿದೆ. ಅದರೊಳಗಾಗಿ ಡೀಟೇಲ್ಸ್ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ ಕೆಲಸ ಮಾಡಲು ನಮ್ಮ ಮೆಟ್ರೋ ಮುಂದಾಗಿದೆ.ಈಬಗ್ಗೆ ಮೆಟ್ರೋ ಎಂ.ಡಿ ಅಜಯ್ ಸೇಠ್ ಪಿಲ್ಲರ್ ನಲ್ಲಿ ಆಗಿರೋ ಸಮಸ್ಯೆ ಬಗ್ಗೆ ದೆಹಲಿಯಿಂದ ವಿಶೇಷ ತಜ್ಞರು ಆಗಮಿಸಿದ್ದು, ಮೆಟ್ರೋ ಅಧಿಕಾರಿಗಳೊಂದಿಗೆ ಶಾಂತಿನಗರ ಕೇಂದ್ರ ಕಚೇರಿಯಲ್ಲಿ ಸಭೆಯನ್ನು ಮೆಟ್ರೋ ಅಧಿಕಾರಿ ಎಂ.ಡಿ ಅಜಯ್ ಸೇಠ್ ನಡೆಸುತ್ತೀದ್ದಾರೆ.

ಪಿಲ್ಲರ್ ಬೀಮ್ ನಲ್ಲಿ ಬಿರುಕು ಹಿನ್ನೆಲೆ ದುರಸ್ಥಿಗೆ 6ರಿಂದ 7ದಿನ ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ ಇದೆ. ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರೋ ಕಾರಣ ಸ್ಥಗಿತ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ನೇರಳೆ ಮಾರ್ಗದಲ್ಲಿ(ಬೈಯಪ್ಪನಹಳ್ಳಿ ಟು ಮೈಸೂರು ರಸ್ತೆ) ಸಂಚಾರ ಸ್ಥಗಿತ ಮಾಡುವುದು ಎಂದಿನಿಂದ ಅನ್ನೋದು ಇನ್ನೂ ಸ್ವಷ್ಟ ಮಾಹಿತಿ ಇಲ್ಲ ,BMRCL ಮಧ್ಯಾಹ್ನ ಸುದ್ದಿಗೋಷ್ಟಿ ಯಲ್ಲಿ ದಿನಾಂಕ ಪ್ರಕಟ ಮಾಡಲಿದೆ.

155 ನೇ ಮೆಟ್ರೋ ಪಿಲ್ಲರ್ ಬಿರುಕು ವಿಚಾರವಾಗಿ ಬ್ರೇರಿಂಗ್ ಬದಲಾಯಿಸಲು ಸಿದ್ದತೆ ಮಾಡಿಕೊಳ್ತಿರೋ ಮೆಟ್ರೋ ಅಧಿಕಾರಿಗಳು, ಹ್ರೈಡ್ರಾಲಿಕ್ ಜಾಕ್ ಬಳಸಿ, ಸಪೋರ್ಟಿಂಗ್ ಪಿಲ್ಲರ್ ನೀಡಿ ಬೇರಿಂಗ್ ಬದಲಾವಣೆ ಮಾಡಲಾಗುತ್ತಾದೆ. ಇನ್ನೂ ಬೀಮ್ ಸ್ಟ್ರೆಂತ್ ಪರೀಕ್ಷೆ ಮಾಡಿರೋ ಮೆಟ್ರೋ ಅಧಿಕಾರಿಗಳು, ಟೆಸ್ಟ್ ರಿಪೋರ್ಟನ್ನು ದೆಹಲಿ ಮೆಟ್ರೋ ವಿಶೇಷ ತಂಡಕ್ಕೆ ನೀಡಿದರೆ. ನಮ್ಮ ಮೆಟ್ರೋ ಅಧಿಕಾರಿಗಳು ದೆಹಲಿ ಮೆಟ್ರೋ ಅಧಿಕಾರಿಗಳು ಸೂಚನೆ ನೀಡಿದರೆ ಬೇರಿಂಗ್ ಮೇಲಿನ ಬೀಮ್ ಸಹ ಬದಲಾವಣೆ ಮಾಡಲು ಎಲ್ಲ ಸಿದ್ದತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Next Story

RELATED STORIES